• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

'ಸಿನಿಮಾ ಚಿತ್ರೀಕರಣಕ್ಕೆ ಜಮ್ಮು- ಕಾಶ್ಮೀರಕ್ಕೆ ಬನ್ನಿ' ಎಂದು ಪ್ರಧಾನಿ ಮೋದಿ ಕರೆ

By ಅನಿಲ್ ಆಚಾರ್
|

ನವದೆಹಲಿ, ಆಗಸ್ಟ್ 8: ಚಿತ್ರರಂಗದ ಬಗ್ಗೆ ಹಾಗೂ ಪ್ರವಾಸೋದ್ಯಮ, ಉದ್ಯೋಗ ಸೃಷ್ಟಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇರುವ ಕಾಳಜಿ ಗುರುವಾರದಂದು ದೇಶವನ್ನು ಉದ್ದೇಶಿಸಿ ಅವರು ಮಾತನಾಡುವ ವೇಳೆ ಮತ್ತೊಮ್ಮೆ ಗಮನ ಸೆಳೆಯಿತು. ಜಮ್ಮು- ಕಾಶ್ಮೀರದ ವಿಶೇಷ ಸ್ಥಾನ- ಮಾನವನ್ನು ರದ್ದು ಮಾಡಿ, ಜಮ್ಮು- ಕಾಶ್ಮೀರ, ಲಡಾಖ್ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ ಮಾಡಿದ ಮೇಲೆ ಇದೇ ಮೊದಲ ಬಾರಿಗೆ ದೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು.

ಫೋಕಸ್ ಕಾಶ್ಮೀರ: ಮೋದಿ ಭಾಷಣದ ಪೂರ್ಣ ಪಾಠ

ಈ ಹಿಂದೆ ಬಾಲಿವುಡ್ ಸಿನಿಮಾ ಶೂಟಿಂಗ್ ಗಳಿಗೆ ಕಾಶ್ಮೀರ ಅಚ್ಚುಮೆಚ್ಚಿನ ಸ್ಥಳವಾಗಿತ್ತು. ಆ ನಂತರ ಪರಿಸ್ಥಿತಿ ಬದಲಾಯಿತು. ಆದರೆ ಇನ್ನು ಮುಂದೆ ವಿಶ್ವ ಮಟ್ಟದಲ್ಲಿ ಸಿನಿಮಾ ತಂತ್ರಜ್ಞರು ಜಮ್ಮು- ಕಾಶ್ಮೀರಕ್ಕೆ ಬರುತ್ತಾರೆ. ಈ ಮೂಲಕ ಸ್ಥಳೀಯರಿಗೆ ಉದ್ಯೋಗ ದೊರೆಯಲಿದೆ ಎಂದು ಅವರು ಹೇಳಿದರು.

ಇದು ದೇಶವಾಸಿಗಳಿಗಿಂತ ಕಣಿವೆ ಮಂದಿಯನ್ನೇ ಟಾರ್ಗೆಟ್ ಮಾಡಿದ ಭಾಷಣ

ಇನ್ನೂ ಮುಂದುವರಿದು ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಾಲಿವುಡ್, ತೆಲುಗು ಹಾಗೂ ತಮಿಳು ಚಿತ್ರರಂಗದವರು ಕಾಶ್ಮೀರಕ್ಕೆ ಬಂದು ಚಿತ್ರೀಕರಣಕ್ಕೆ ಬನ್ನಿ ಎಂದು ಮನವಿ ಮಾಡಿಕೊಳ್ಳುತ್ತೇನೆ ಎಂದು ಹೇಳಿದರು. ತಮ್ಮ ಭಾಷಣದ ಉದ್ದಕ್ಕೂ ಕಣಿವೆ ರಾಜ್ಯದ ಆರ್ಥಿಕತೆ, ಉದ್ಯೋಗ ಸೃಷ್ಟಿ, ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿದ್ದು ಗಮನ ಸೆಳೆಯುವಂತೆ ಇತ್ತು.

English summary
India PM Narendra Modi Thursday call Indian and world film industry for movie shooting in Jammu and Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X