ಪಿಎಂ ಕಿಸಾನ್: ಇಂದು ರೈತರಿಗೆ ಏಳನೇ ಕಂತಿನ ಹಣ ಬಿಡುಗಡೆ
ನವದೆಹಲಿ, ಡಿಸೆಂಬರ್ 25: ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಹಣವನ್ನು ಪಿಎಂ ನರೇಂದ್ರ ಮೋದಿ ಅವರು ಇಂದು 9 ಕೋಟಿಗೂ ಹೆಚ್ಚು ಫಲಾನುಭವಿ ರೈತ ಕುಟುಂಬಗಳಿಗೆ ನೀಡಲಿದ್ದಾರೆ. ಸುಮಾರು 12 ಗಂಟೆಗೆ ದೇಶದ ಕೋಟ್ಯಾಂತರ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮಾವಣೆಯಾಗಲಿದೆ.
ಪಿಎಂ ಕಿಸಾನ್ ಸಮ್ಮನ್ ನಿಧಿ ಯೋಜನೆಯ ಅಡಿಯಲ್ಲಿ ಇಂದು ಏಳನೇ ಕಂತಿನ ಹಣ ಬಿಡುಗಡೆಯಾಗಲಿದ್ದು, 9 ಕೋಟಿ ರೈತರ ಖಾತೆಗೆ 18000 ಕೋಟಿ ರೂಪಾಯಿಗಳನ್ನು ಕಳುಹಿಸಲಾಗುತ್ತದೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ 6 ರಾಜ್ಯಗಳ ನೂರಾರು ರೈತರೊಂದಿಗೆ ಚರ್ಚೆ ನಡೆಸಲಿದ್ದಾರೆ.
ಇಂದು ಭಾರತದ ಮಾಜಿ ಪ್ರಧಾನಿ ಮತ್ತು ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅವರ 96 ನೇ ಜನ್ಮದಿನವೂ ಆಗಿದೆ. ಅಟಲ್ ಜಿ ಕಾರ್ಯಕ್ರಮದ ಸಮಯದಲ್ಲಿ ಮಾತ್ರ ಈ ಮೊತ್ತವನ್ನು ರೈತರಿಗೆ ನೀಡಲಾಗುವುದು.

ಪಿಎಂ ಕಿಸಾನ್ ಯೋಜನೆ ಅಡಿಯಲ್ಲಿ ದೇಶದ ರೈತರಿಗೆ ಒಂದು ವರ್ಷದಲ್ಲಿ 6000 ರೂಪಾಯಿಗಳನ್ನು ನೀಡಲಾಗುತ್ತದೆ. ಒಂದು ಕಂತಿನಲ್ಲಿ 2000 ರೂ.ಗಳಂತೆ ವರ್ಷಕ್ಕೆ ಮೂರು ಬಾರಿ ನೀಡಲಾಗುವುದು. ಪಿಎಂ ಕಿಸಾನ್ ಯೋಜನೆ 2018 ರ ಡಿಸೆಂಬರ್ 1 ರಂದು ಮೋದಿ ಸರ್ಕಾರದಿಂದ ಜಾರಿಗೆ ಬಂದಿತು. ಈ ಯೋಜನೆಯ ಹಣವನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಕಳುಹಿಸಲಾಗುತ್ತದೆ.












Click it and Unblock the Notifications