ಪಿಎಂ ಇ-ಬಸ್ ಸೇವಾ ಯೋಜನೆ: 169 ನಗರಗಳಲ್ಲಿ ಬರಲಿವೆ 10,000 ಎಲೆಕ್ಟ್ರಿಕ್ ಬಸ್‌ಗಳು- ಮಾಹಿತಿ, ವರದಿ, ವಿವರ
ನವದೆಹಲಿ, ಆಗಸ್ಟ್ 16: ಪಿಎಂ ಇ-ಬಸ್ ಸೇವಾ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಬುಧವಾರ ಹೇಳಿದ್ದಾರೆ. ಈ ಯೋಜನೆಯಡಿ ದೇಶಾದ್ಯಂತ ಸುಮಾರು 10,000 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ
'ಪಿಎಂ ಇ-ಬಸ್ ಸೇವೆಗೆ ಅನುಮೋದನೆ ನೀಡಲಾಗಿದೆ. ಇದಕ್ಕಾಗಿ 57,613 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗುವುದು. ದೇಶಾದ್ಯಂತ ಸುಮಾರು 10,000 ಹೊಸ ಎಲೆಕ್ಟ್ರಿಕ್ ಬಸ್‌ಗಳನ್ನು ಒದಗಿಸಲಾಗುವುದು' ಎಂದು ಸಚಿವರು ಮಾಹಿತಿ ನೀಡಿದ್ದಾರೆ.

57,613 ಕೋಟಿ ರೂ.ಗಳಲ್ಲಿ 20,000 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ನೀಡಲಿದೆ. ಈ ಯೋಜನೆಯು 3 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿರುವ ನಗರಗಳನ್ನು ಒಳಗೊಂಡಿದೆ. ಈ ಯೋಜನೆಯಡಿಯಲ್ಲಿ, ಸಾರ್ವಜನಿಕ ಖಾಸಗಿ ಸಹಭಾಗಿತ್ವದ (ಪಿಪಿಪಿ) ಮಾದರಿಯಲ್ಲಿ 10,000 ಇ-ಬಸ್‌ಗಳೊಂದಿಗೆ ಸಿಟಿ ಬಸ್ ಕಾರ್ಯಾಚರಣೆಗಳನ್ನು ಮಾಡಲಾಗುತ್ತದೆ. ಈ ಯೋಜನೆಯು 10 ವರ್ಷಗಳ ಕಾಲ ಬಸ್ ಕಾರ್ಯಾಚರಣೆಗಳನ್ನು ನೀಡಲಿದೆ ಎಂದು ಅವರು ತಿಳಿಸಿದ್ದಾರೆ.
ಪಿಎಂ ಇ-ಬಸ್ ಸೇವಾ ಯೋಜನೆ ಬಗ್ಗೆ ಮಾಹಿತಿ
ಈ ಯೋಜನೆಯ ಅಂದಾಜು ವೆಚ್ಚ 57,613 ಕೋಟಿ ರೂಪಾಯಿ
ಕೇಂದ್ರ ಸರ್ಕಾರ 20,000 ಕೋಟಿ ರೂಪಾಯಿ
10 ವರ್ಷಗಳ ವರೆಗೆ ಬಸ್ ಕಾರ್ಯಾಚರಣೆ
3 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಜನಸಂಖ್ಯೆಯ ನಗರಗಳನ್ನು ಒಳಗೊಳ್ಳುವ ಯೋಜನೆ
ಯುಟಿಎಸ್, ಎನ್‌ಇ ಪ್ರದೇಶ ಮತ್ತು ಹಿಲ್ ಸ್ಟೇಟ್ಸ್‌ನ ಎಲ್ಲಾ ರಾಜಧಾನಿ ನಗರಗಳು ಈ ಯೋಜನೆಯಲ್ಲಿ ಬರಲಿವೆ
ಸಂಘಟಿತ ಬಸ್ ಸೇವೆ ಇಲ್ಲದ ನಗರಗಳಿಗೆ ಆದ್ಯತೆ
45,000 ರಿಂದ 55,000 ನೇರ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ
ಯೋಜನೆಯನ್ನು ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ.

ಸಿಟಿ ಬಸ್ ಸೇವೆಯಲ್ಲಿ ಹೆಚ್ಚಳ
ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 10,000 ಇ-ಬಸ್‌ಗಳೊಂದಿಗೆ ಸಿಟಿ ಬಸ್ ಕಾರ್ಯಾಚರಣೆಗಳನ್ನು ಹೆಚ್ಚಿಸಲಾಗುವುದು
ಡಿಪೋ ಮೂಲಸೌಕರ್ಯಗಳ ಅಭಿವೃದ್ಧಿ ಮಾಡಲಾಗುವುದು. ಈ ಅಭಿವೃದ್ಧಿಗೆ ಸಹಾಯ ಮಾಡಲು ಅಸೋಸಿಯೇಟೆಡ್ ಇನ್ಫ್ರಾಸ್ಟ್ರಕ್ಚರ್ ಒದಗಿಸಲಾಗುವುದು.
ಇ-ಬಸ್‌ಗಳಿಗಾಗಿ ಮೀಟರ್ ಹಿಂದೆ ವಿದ್ಯುತ್ ಮೂಲಸೌಕರ್ಯ (ಸಬ್‌ಸ್ಟೇಷನ್, ಇತ್ಯಾದಿ) ರಚನೆ
181 ನಗರಗಳಲ್ಲಿ ಗ್ರೀನ್ ಅರ್ಬನ್ ಮೊಬಿಲಿಟಿ ಇನಿಶಿಯೇಟಿವ್ಸ್

ಬಸ್ ಆದ್ಯತೆ, ಮೂಲಸೌಕರ್ಯ, ಮಲ್ಟಿಮೋಡಲ್ ಇಂಟರ್‌ಚೇಂಜ್ ಸೌಲಭ್ಯಗಳಂತಹ ಹಸಿರು ಉಪಕ್ರಮಗಳು ಈ ಯೋಜನೆಯಲ್ಲಿ ಇರಲಿವೆ
ಎನ್‌ಸಿಎಂ-ಆಧಾರಿತ ಸ್ವಯಂಚಾಲಿತ ಶುಲ್ಕ ಸಂಗ್ರಹ ವ್ಯವಸ್ಥೆಗಳು, ಚಾರ್ಜಿಂಗ್ ಮೂಲಸೌಕರ್ಯ ಇತ್ಯಾದಿ ಇರಲಿವೆ












Click it and Unblock the Notifications