ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೋದಿಯಿಂದ ಅಂಗನಾಡಿ ಕಾರ್ಯಕರ್ತೆಯರಿಗೆ 'ದೀಪಾವಳಿ ಗಿಫ್ಟ್'

|
Google Oneindia Kannada News

ನವದೆಹಲಿ, ಸೆಪ್ಟೆಂಬರ್ 12: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಲಕ್ಷಾಂತರ ಮಂದಿ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಹಾಗೂ ಶುಶ್ರೂಷಕಿಯರಿಗೆ ದೀಪಾವಳಿ ಕೊಡುಗೆ ಘೋಷಿಸಿದ್ದಾರೆ.

ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರ ಗೌರವ ಧನ ಹೆಚ್ಚಳವು ಅಕ್ಟೋಬರ್ ತಿಂಗಳಿನಿಂದ ಜಾರಿಗೆ ಬರಲಿದೆ. ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಸುರಕ್ಷಾ ವಿಮೆ ಯೋಜನೆ ವ್ಯಾಪ್ತಿಗೆ ಈ ಘೊಷಣೆ ಒಳಪಡಲಿದೆ.

ದೇಶಾದ್ಯಂತ ವಿವಿಧ ಕೇಂದ್ರಗಳಲ್ಲಿ ನೆರೆದಿದ್ದ ಲಕ್ಷಾಂತರ ಕಾರ್ಯಕರ್ತೆಯರ ಜತೆಗಿನ ವಿಡಿಯೋ ಸಂವಾದದಲ್ಲಿ ಪ್ರಧಾನಿ ಮೋದಿ ಅವರು ಈ ಮಹತ್ವದ ಘೋಷಣೆ ಹೊರಡಿಸಿದರು.

ಇದೇ ಸಂದರ್ಭದಲ್ಲಿ ಆಯುಷ್ಮಾನ್ ಭಾರತ ಯೋಜನೆ ಜಾರಿಗೆ ಬರಲಿದ್ದು, ಯೋಜನೆ ಸಫಲಗೊಳ್ಳಲು ಆಶಾ, ಅಂಗನವಾಡಿ ಹಾಗೂ ಎಎನ್​ಎಂ ಕಾರ್ಯಕರ್ತೆಯರು ಸಹಕರಿಸಬೇಕು ಎಂದು ಪ್ರಧಾನಿ ಮನವಿ ಮಾಡಿದ್ದಾರೆ.

ಪ್ರಧಾನಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆ ಅಡಿಯಲ್ಲಿ ಬರುವುದರಿಂದ ಯಾವುದೇ ಪ್ರೀಮಿಯಂ ಕಟ್ಟಬೇಕಿಲ್ಲ ಹಾಗೂ ಯಾವುದೇ ಅಹಿತಕರ ಘಟನೆ ನಡೆದರೆ ಸರ್ಕಾರದಿಂದ 4 ಲಕ್ಷ ರೂ.ಗಳವರೆಗೆ ವಿಮಾ ಹಣ ದೊರೆಯಲಿದೆ.

PM announces hike in incentives of Asha, Anganwadi workers

ಸಹಾಯಧನ ಹೆಚ್ಚಳ: ಆಶಾ ಕಾರ್ಯಕರ್ತೆಯರಿಗೆ ವಿವಿಧ ಯೋಜನೆಗಳ ಮೂಲಕ ಕನಿಷ್ಠ 1 ಸಾವಿರ ರೂ. ಪ್ರೋತ್ಸಾಹಧನ 2 ಸಾವಿರಕ್ಕೇರಿಸಲಾಗಿದೆ. ಐಸಿಡಿಎಸ್-ಐಸಿಎಸ್ ತಂತ್ರಾಂಶ ಬಳಸುವ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರಿಗೆ 250-500 ರೂ.ಗಳವರೆಗೆ ಪ್ರೋತ್ಸಾಹಧನ ಸಿಗಲಿದೆ.

ದೇಶದೆಲ್ಲೆಡೆ 27 ಲಕ್ಷ ಅಂಗನವಾಡಿ ಹಾಗೂ 12 ಲಕ್ಷ ಆಶಾ ಕಾರ್ಯಕರ್ತರಿದ್ದಾರೆ. ಕರ್ನಾಟಕದಲ್ಲಿ 1.24 ಲಕ್ಷ ಅಂಗನವಾಡಿ ನೌಕರರಿದ್ದು, 39 ಸಾವಿರ ಆಶಾ ಕಾರ್ಯಕರ್ತೆಯರಿದ್ದಾರೆ. ಆಶಾ ಕಾರ್ಯಕರ್ತೆಯರ ನಿರಂತರ ಹೋರಾಟದ ನಂತರ 2017ರಲ್ಲಿ ರಾಜ್ಯ ಸರ್ಕಾರ ಗೌರವಧನವನ್ನು 3500 ರೂ.ಗೆ ಹೆಚ್ಚಿಸಿದೆ. ಆದರೆ ಕಾರ್ಯಕರ್ತೆಯರು 6 ಸಾವಿರ ರೂ.ಗೆ ಹೆಚ್ಚಿಸುವಂತೆ ಬೇಡಿಕೆ ಇಟ್ಟಿದ್ದಾರೆ.

English summary
In good news for thousands of Asha and Anganwadi workers, Prime Minister Narendra Modi Tuesday announced a hike in their monthly honorarium from October.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X