ಎರಡೂವರೆ ತಿಂಗಳ ನಮ್ಮ ಮಗುವನ್ನು ಉಳಿಸಿಕೊಡಿ

Posted By:
Subscribe to Oneindia Kannada

ನಮ್ಮ ಮಗ ಕೃಷ್ಣ ಹುಟ್ಟಿದ್ದು ಜುಲೈ 29ನೇ ತಾರೀಕು. ನಮ್ಮ ಜೀವನದೊಳಗೆ ಬಂದ ಮೊದಲ ದಿನದಿಂದಲೂ ಅವನು ದೇವರಂತೆಯೇ ಅನಿಸಿಬಿಟ್ಟ. ಅವನ ಅಮ್ಮ ಹಾಗೂ ನನಗೆ ತಕ್ಷಣ ಹೊಳೆದ ಹೆಸರು ಆ ಭಗವಂತ ಕೃಷ್ಣನದು. ಅದನ್ನೇ ವನಿಗೆ ಇಟ್ಟೆವು. ಆದರೆ ಇವತ್ತು ನಮ್ಮ ಮಗ ತೀವ್ರ ನಿಗಾ ಘಟಕದಲ್ಲಿದ್ದು, ತುಂಬ ಸಂಕೀರ್ಣವಾದ ಹೃದಯ ಸಮಸ್ಯೆ ಎದುರಿಸುತ್ತಿದ್ದಾನೆ.

ವೈದ್ಯರು ಹೇಳಿರುವ ಪ್ರಕಾರ ಅವನ ಹೃದಯದ ನಾಳದಲ್ಲೇ ಸಮಸ್ಯೆ ಇದೆಯಂತೆ. ಪುಟ್ಟ ದೇಹದಲ್ಲಿ ಶುದ್ಧವಲ್ಲದ ರಕ್ತ ಹರಿಯುತ್ತಿದೆಯಂತೆ. ಆದಷ್ಟು ಬೇಗ ಕೃಷ್ಣನ ಶಸ್ತ್ರಚಿಕಿತ್ಸೆ ಮಾಡಿಸದಿದ್ದರೆ ಅವನು ಶಾಶ್ವತವಾಗಿ ನಮ್ಮನ್ನೆಲ್ಲ ಬಿಟ್ಟು ಹೋಗ್ತಾನೆ. ನನ್ನ ಮಗನನ್ನು ಕಳೆದುಕೊಳ್ಳುವ ಭಯಕ್ಕೆ ಊಟ, ನಿದ್ದೆ ಅಷ್ಟೇ ಏಕೆ ಉಸಿರಾಟವೂ ಕಷ್ಟವಾಗಿದೆ. ನನಗೆ ವಿಪರೀತ ಭಯವಾಗುತ್ತಿದೆ.

Please help us to save our two and half month child

ನನ್ನ ಹೆಸರು ಸೋಮ್ ನಾಥ್ ಪವಾರ್. ಹೆಂಡತಿ, ಪೋಷಕರು, ಸಹೋದರರು- ಅವರ ಪತ್ನಿಯರು, ನನ್ನ ಸಹೋದರಿಯರು ಹಾಗೂ ಇಬ್ಬರು ಹೆಣ್ಣುಮಕ್ಕಳಿರುವ ಕುಟುಂಬ ನನ್ನದು. ನಾನೊಬ್ಬ ರೈತ. ಜಮೀನಿನಲ್ಲಿ ಕೆಲಸ ಮಾಡಿದರೆ ನೂರು ರುಪಾಯಿ ಸಂಪಾದನೆ ಮಾಡ್ತೀನಿ. ಭೂಮಿ ನನ್ನ ಪಾಲಿನ ಆದಾಯ ಮೂಲ.

ಅದರಲ್ಲಿ ಬರುವ ಹಣ ಎಂಟು ಜನರಿರುವ ಕುಟುಂಬದ ಊಟ- ಬಟ್ಟೆಗೆ ಸರಿಹೋಗುತ್ತದೆ. ನನ್ನ ಮಗನ ಚಿಕಿತ್ಸೆಗೆ ಮೂರು ಲಕ್ಷ ರುಪಾಯಿ ಬೇಕು. ಸರಿಯಾದ ಸಮಯಕ್ಕೆ ಹಣ ಸಿಗಲಿಲ್ಲ ಅಂದರೆ ನನ್ನ ಭೂಮಿ ಮಾರಬೇಕು. ಅದರಿಂದ ಸಿಕ್ಕರೆ ಒಂದೂವರೆ ಲಕ್ಷ ರುಪಾಯಿ ಸಿಗಬಹುದು. ನನ್ನ ಮಗನ ಚಿಕಿತ್ಸೆಗೆ ಅಗತ್ಯ ಇರುವ ಮೊತ್ತದ ಅರ್ಧದಷ್ಟು ಮಾತ್ರ ಆಗುತ್ತದೆ.

ಜಮೀನು ಮಾರುವುದು ಅಂದರೆ ನನ್ನ ಕುಟುಂಬದ ಜೀವಾನಾಧಾರವನ್ನೇ ಬಿಟ್ಟು ಕೊಟ್ಟಂತೆ. ಆದರೆ ನಾನೇನು ಮಾಡುವುದಕ್ಕೆ ಸಾಧ್ಯ? ಒಬ್ಬ ತಂದೆಯಾಗಿ ಮಗನನ್ನು ಹಾಗೆ ಸಾಯುವುದಕ್ಕೆ ಬಿಡಲು ಸಾಧ್ಯವಾ? ಆತನನ್ನು ಉಳಿಸಿಕೊಳ್ಳಲಾಗದೆ ನಾನು ಹೇಗೆ ಬದುಕಲಿ? ನನ್ನ ಮಗನನ್ನು ಉಳಿಸಿಕೊಳ್ಳಲು ಜಮೀನು ಮಾರಿದರೂ ಪರವಾಗಿಲ್ಲ. ಆದರೆ ನಿಮ್ಮ ಬೆಂಬಲ ಇದ್ದರೆ ನನ್ನ ಮಗನನ್ನು ಹಾಗೂ ಇಡೀ ಕುಟುಂಬವನ್ನು ಉಳಿಸಬಹುದು.

Please help us to save our two and half month child

ನನ್ನ ಮಗ ಹುಟ್ಟಿದ ಒಂದು ತಿಂಗಳು ಎಲ್ಲ ಸರಿಯಿತ್ತು. ಆದರೆ ಆ ನಂತರದ ಒಂದು ದುರದೃಷ್ಟದ ದಿನ ಕೃಷ್ಣ ಬೆಳಗ್ಗೆ ಏಳುತ್ತಲೇ ಅಳುತ್ತಿದ್ದ ಮತ್ತು ಅವನ ಮೈ ಬಿಸಿಯಾಗಿ ಸುಡುತ್ತಿತ್ತು. ಏನಾಗಿದೆ ಅವನಿಗೆ ಎಂಬ ಗಾಬರಿಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋದೆವು. ಕೃಷ್ಣನಿಗೆ ಉಸಿರಾಡುವುದು ಕೂಡ ಕಷ್ಟವಾಗುತ್ತಿತ್ತು. ನಮಗೆ ದಿಕ್ಕೇ ತೋಚದ ಹಾಗಾಯಿತು.

ಸೆಪ್ಟೆಂಬರ್ ನಿಂದ ಇಲ್ಲಿಯವರೆಗೆ ಅವನು ಆಸ್ಪತ್ರೆಯಲ್ಲೇ ಇದ್ದಾನೆ. ಅಲ್ಲಿ ನಾವು ಕಳೆದ ಕೆಲವು ಕ್ಷಣಗಳಂತೂ ನಿಜಕ್ಕೂ ಭಯಾನಕ. ಕೃಷ್ಣನ ಎದೆಯ ಬಡಿತ ಹೆಚ್ಚಾದಾಗ ಅಲ್ಲಿನ ಯಂತ್ರಗಳು ಶಬ್ದ ಮಾಡಲು ಆರಂಭಿಸುತ್ತಿದ್ದವು. ಅಲ್ಲಿನ ನರ್ಸ್ ಗಳು ಗಾಬರಿಯಿಂದ ನನ್ನ ಮಗನ ಸುತ್ತ ಓಡಾಡುವುದಕ್ಕೆ ಶುರು ಮಾಡುತ್ತಿದ್ದರು.

ನನ್ನ ಕೈಗಳು ತಣ್ಣಗಾಗಿ ಬಿಡುತ್ತಿದ್ದವು, ಮೈ ನಡುಕ ಬಂದು ಎದೆಯ ಬಡುತವೇ ಹೆಚ್ಚಾಗುತ್ತಿತ್ತು. ಅವನಿಗೇನಾದರೂ ಆದರೆ ಗತಿಯೇನು ಎಂಬ ಆತಂಕ ಆಗುತ್ತಿತ್ತು. ಆ ಪುಟ್ಟ ದೇಹಕ್ಕೆ ಚುಚ್ಚಿದ ಸೂಜಿಗಳನ್ನು ನೋಡುತ್ತಿದ್ದರೆ ನನ್ನ ಹೃದಯಕ್ಕೆ ಇರಿದಂತೆ ಆಗುತ್ತಿತ್ತು. ಆ ಪುಟ್ಟ ಕಂದನ ದೇಹ ಅದೆಷ್ಟು ನೋವು ಅನುಭವಿಸುತ್ತಿದೆಯೋ! ನಾವು ಅವನನ್ನು ಉಳಿಸಿಕೊಳ್ಳಲು ಮಾಡುತ್ತಿರುವ ಪ್ರಯತ್ನ ಕೂಡ ಅವನಿಗೆ ಗೊತ್ತಾಗುವುದಕ್ಕೆ ಸಾಧ್ಯವಿಲ್ಲ.

Please help us to save our two and half month child

ನೀವು ದೇಣಿಗೆ ರೂಪದಲ್ಲಿ ನೀಡುವ ಸಹಾಯದಿಂದ ಚಿಕಿತ್ಸೆಗೆ ಅಗತ್ಯ ಇರುವ ಹಣವನ್ನು ಪಾವತಿಸಬಹುದು.

ನಾವು ಈ ವರೆಗೆ ಮೂವತ್ತು ಸಾವಿರ ರುಪಾಯಿ ಕೊಟ್ಟಿದ್ದೇವೆ. ಈ ಮೊತ್ತಕ್ಕೆ ನಮ್ಮ ಎಲ್ಲ ಮೂಲಗಳು ಮುಗಿದುಹೋದವು. ನಮ್ಮ ಉಳಿತಾಯದ ಹಣದಲ್ಲಿ ವೈದ್ಯಕೀಯ ಪರೀಕ್ಷೆಗಳು ಹಾಗೂ ಔಷಧಿಗೆ ಅಂತ ಆಯಿತು. ನಮ್ಮ ಸ್ನೇಹಿತರಿಂದಲೂ ಸಹಾಯ ಪಡೆದಾಯಿತು. ಮನೆಯಲ್ಲಿ ಊಟಕ್ಕೂ ಸಮಸ್ಯೆ. ಇರುವ ಅಲ್ಪಸ್ವಲ್ಪ ಆಹಾರವನ್ನು ನಮ್ಮ ತಂದೆ-ತಾಯಿಗೆ ಕೊಡ್ತೀವಿ. ಅವರು ವಯಸ್ಸಾದವರು. ಊಟ ತಪ್ಪಿಸಲು ಸಾಧ್ಯವಿಲ್ಲ.

ಆದರೆ, ನನ್ನ ಇಬ್ಬರು ಹೆಣ್ಣುಮಕ್ಕಳಿಗೆ ರಾತ್ರಿ ಹಸಿವಿನಿಂದ ನಿದ್ದೆ ಬರ್ತಿಲ್ಲ. ನಮ್ಮ ಮನೆಯಲ್ಲಿ ಎಲ್ಲರಿಗೂ ಇದು ಕಷ್ಟದ ಸಮಯ. ನಾನು ಸಾಲ ತೆಗೆದುಕೊಂಡವರಿಗೆ ಹೇಗೆ ವಾಪಸ್ ಮಾಡ್ತೀನೋ? ನಮ್ಮ ಭೂಮಿ ಮಾರಿದರೆ ಕುಟುಂಬದವರ ಗತಿ ಏನು? ಇದೆಲ್ಲದರ ಜತೆಗೆ ಮತ್ತೊಂದು ಯೋಚನೆ ತಲೆಯಲ್ಲಿ ಓಡುತ್ತಿದೆ: ಆದಷ್ಟು ಬೇಗ ಮೂರು ಲಕ್ಷ ರುಪಾಯಿ ಹೇಗೆ ಹೊಂದಿಸುತ್ತೇನೆ?

Please help us to save our two and half month child

ನಮ್ಮ ಜಮೀನು ಮಾರಿದ ನಂತರವೂ ಮಗುವಿನ ಚಿಕಿತ್ಸೆಗೆ ಬೇಕಾದ ಹಣ ದೊರೆಯುವುದು ಸಾಧ್ಯವಿಲ್ಲ. ನಮ್ಮ ಮಗುವಿನ ಉಳಿಸಿಕೊಳ್ಳಲು ಬೇಕಾದಷ್ಟು ಹಣ ಹೊಂದಿಸುವ ಸಾಮರ್ಥ್ಯ ನಮಗಿಲ್ಲ. ನಮ್ಮ ಮಗು ಆರೋಗ್ಯವಂತವಾಗಿ ಮನೆಗೆ ಕರೆದುಕೊಂಡು ಹೋಗುವಂತಾಗಲು ನಿಮ್ಮ ಸಹಾಯ ಬೇಕು. ನಮ್ಮ ಪರವಾಗಿ ಹಣ ಸಂಗ್ರಹಿಸುತ್ತಿರುವ ಕೆಟ್ಟೋಗೆ ಸಹಾಯ ಮಾಡಿ. ನಮ್ಮ ಮಗುವನ್ನು ಬದುಕಿಸಿಕೊಳ್ಳಲು ಸಹಾಯ ಮಾಡಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
My son Krishna was born on the 29th of July. Today my son is in the ICU battling a complex heart problem. The doctors told me that there is a problem with the veins of his heart because of which impure blood was circulating in his fragile body. If I don’t get Krishna operated at the earliest, we will lose him forever.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ