• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕೊರೊನಾ ಸೋಂಕಿಗೆ ಮಾತ್ರೆ; ಸಕಾರಾತ್ಮಕ ಫಲಿತಾಂಶ ಲಭ್ಯ

|

ನವದೆಹಲಿ, ಏಪ್ರಿಲ್ 14: ಕೊರೊನಾ ಸೋಂಕಿಗೆ ಟ್ಯಾಮಿಫ್ಲೂನಂತೆ ಕೆಲಸ ಮಾಡುವ ಭರವಸೆ ವ್ಯಕ್ತವಾಗಿದ್ದ ಮಾತ್ರೆಯೊಂದರ ಕುರಿತ ಪ್ರಾಥಮಿಕ ಅಧ್ಯಯನದಲ್ಲಿ ಸಕಾರಾತ್ಮಕ ಫಲಿತಾಂಶ ದೊರೆತಿರುವುದಾಗಿ ಔಷಧ ಅಭಿವೃದ್ಧಿ ಸಂಸ್ಥೆ ಮಾಹಿತಿ ನೀಡಿದೆ.

ರಿಡ್ಜ್‌ಬ್ಯಾಕ್ ಬಯೋಥೆರಾಪ್ಯುಟಿಕ್ ಎಲ್‌ಪಿ ಹಾಗೂ ಮರ್ಕ್ ಅಂಡ್ ಕೊ ಅಭಿವೃದ್ಧಿಪಡಿಸಿದ ಮಾತ್ರೆಯು ಸೋಂಕಿನ ಸಾಧ್ಯತೆಯನ್ನು ಗಣನೀಯವಾಗಿ ತಗ್ಗಿಸಿದ್ದು, ಐದು ದಿನಗಳ ಚಿಕಿತ್ಸೆ ನಂತರ ಗುಣಮುಖರಾಗಬಹುದು ಎಂದು ಅಧ್ಯಯನದ ಮಧ್ಯಂತರ ಪ್ರಯೋಗ ಸಾಬೀತುಪಡಿಸಿರುವುದಾಗಿ ತಿಳಿದುಬಂದಿದೆ.

ಕೊರೊನಾ ದೂರವಿಡಲು ಚ್ಯವನ್‌ಪ್ರಾಶ್, ಅರಿಶಿಣ ಬೆರೆಸಿದ ಹಾಲು ಸೇವನೆ ಸಲಹೆಗೆ ವೈದ್ಯರ ಟೀಕೆ

ಈಚೆಗೆ ನಡೆದ ಸಭೆಯೊಂದರಲ್ಲಿ ರಿಡ್ಜ್‌ಬ್ಯಾಕ್ ಈ ಮಾಹಿತಿಯನ್ನು ಹಂಚಿಕೊಂಡಿದೆ. ಈ ಕುರಿತು ಇನ್ನಷ್ಟು ಪ್ರಯೋಗಗಳು ನಡೆಯುತ್ತಿವೆ ಎಂದು ತಿಳಿಸಿದೆ.

ಈ ಮಾತ್ರೆಯು ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಮರ್ಥ ಎಂದು ಕಂಡುಬಂದರೆ, ಸದ್ಯಕ್ಕೆ ಲಭ್ಯವಿರುವ ಕೊರೊನಾ ಚಿಕಿತ್ಸೆಗೆ ಮತ್ತೊಂದು ಆಯ್ಕೆಯಾಗಲಿದೆ ಹಾಗೂ ಲಸಿಕೆ ಹೊರತಾಗಿ ಇರುವ ಮತ್ತೊಂದು ಆಯ್ಕೆ ಎನಿಸಲಿದೆ.

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ವರ್ಷ ಕಳೆದರೂ ಜನರಿಗೆ ಚಿಕಿತ್ಸೆಯ ಆಯ್ಕೆಗಳು ಕೆಲವೇ ಕೆಲವು ಇವೆ. ಸದ್ಯಕ್ಕೆ ಗೈಲೀಡ್ ಸೈನ್ಸ್‌ ಇಂಕ್‌ನ ರೆಮ್ಡಿಸಿವಿರ್‌ ಅನ್ನು ಮಾತ್ರ ಬಳಸಲಾಗುತ್ತಿದೆ. ಆಸ್ಪತ್ರೆಗೆ ಸೇರಿದ ರೋಗಿಗಳಿಗೆ ಹೆಚ್ಚುವರಿಯಾಗಿ ಇದನ್ನು ನೀಡಲಾಗುತ್ತಿದೆ.

ಸದ್ಯಕ್ಕೆ ಪ್ರಯೋಗದಲ್ಲಿರುವ ಮಾಲ್ನುಪಿರಾವಿರ್ ಮಾತ್ರೆಯು ಸೋಂಕು ಕಾಣಿಸಿಕೊಂಡ ಆರಂಭಿಕ ಹಂತದಲ್ಲಿ ಉತ್ತಮ ಪರಿಣಾಮ ಬೀರಬಲ್ಲದು ಎಂದು ತಿಳಿದುಬಂದಿದೆ.

   ಜನರು ಸಹಕರಿಸದಿದ್ದರೆ ಲಾಕ್‌ಡೌನ್ ಅನಿವಾರ್ಯ : ಬಿ ಸಿ ಪಾಟೀಲ್ | BC Patil | Oneindia Kannada

   English summary
   An experimental Covid-19 drug for the pandemic had positive results in a preliminary study, one of the drug’s developers said,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X