ಮೊಹರಂ ರಂಗು ರಂಗಿನ ಆಚರಣೆ ಸಂಭ್ರಮ
ನವದೆಹಲಿ, ನ.14: ಇರಾಕಿನ ಕರ್ಬಲಾದಲ್ಲಿ ನಬಿ ಮೊಹಮ್ಮದ್ ಅವರ ಮೊಮ್ಮಗ ಇಮಾಮ್ ಹುಸೇನ್(ರಜಿ ಆನ್) ಮತ್ತು ಅವರ ಕುಟುಂಬದವರು ಇಸ್ಲಾಂ ಮತದ ಕಟ್ಟುಪಾಡುಗಳನ್ನು ಪಾಲಿಸುವ ಸಲುವಾಗಿ ತಮ್ಮ ಪ್ರಾಣಗಳನ್ನೇ ತೆತ್ತರು.ಅವರ ನೆನಪಿಗಾಗಿ ಮೊಹರಂ ದಿನಾಚರಣೆಯನ್ನು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ.
ಮುಸ್ಲಿಮರು ಉರೂರುಗಳಲ್ಲಿ ಮೆರವಣಿಗೆ ನಡೆಸಿ ಇಮಾಮ್ ಅವರು ತೋರಿಸಿದ ಮಾನವೀಯತೆ ಸಂದೇಶ ಸಾರುತ್ತಾರೆ. ಕೆಲವರು ಮಾಸದ 9, 10 ಹಾಗೂ 11ನೇ ದಿನಗಳಲ್ಲಿ ಉಪವಾಸ ಕೈಗೊಳ್ಳುತ್ತಾರೆ. ಎಲ್ಲೆಡೆ ವಿಶೇಷ ಪ್ರಾರ್ಥನೆ ಹಮ್ಮಿಕೊಳ್ಳಲಾಗುತ್ತದೆ. ಕರ್ಬಲಾದ ಕದನದ ನೆನಪು ಮಾಡಿಕೊಳ್ಳಲಾಗುತ್ತದೆ
ಶಿಯಾ ಪಂಗಡಕ್ಕೆ ಸೇರಿದ ಮುಸ್ಲಿಮರು ಕಜಿಯಾಸ್ ಎಂಬ ಕಾಗದಗಳನ್ನು ಮತ್ತು ಇತರ ಕೆಲ ವಸ್ತುಗಳಿಂದ ತಯಾರಿಸಿದ ಹಲವು ರೀತಿಯ ಹಲಗೆಗಳನ್ನು ಮೆರವಣಿಗೆಯಲ್ಲಿ ಕೊಂಡೊಯ್ಯುತ್ತಾರೆ. ಸಣ್ಣ ಪ್ರಮಾಣದ ಕತ್ತಿಯಂಥ ಆಯುಧಗಳನ್ನು ಮೆರವಣಿಗೆಯಲ್ಲಿ ಕೈಯಲ್ಲಿ ಹಿಡಿದಿರುತ್ತಾರೆ. ಕುರಾನ್ ನಲ್ಲಿ ಹೇಳಲಾಗಿರುವ ನಾಲ್ಕು ಪವಿತ್ರ ಮಾಸಗಳಲ್ಲಿ ಮೊಹರಂ ಕೂಡಾ ಒಂದಾಗಿದ್ದು, ತಿಂಗಳ ಕೊನೆದಿನವನ್ನು ಪವಿತ್ರ ದಿನವಾಗಿ ಆಚರಿಸಲಾಗುತ್ತದೆ. ಮೊಹರಂ ಆಚರಣೆ ಚಿತ್ರಗಳನ್ನು ಮುಂದೆ ಓದಿ

ಮುಸ್ಲಿಮರು ಮೆರವಣಿಗೆ
ಅಲಹಾಬಾದಿನಲ್ಲಿ ಮುಸ್ಲಿಮರು ಮೆರವಣಿಗೆ ಹೊರಟಿರುವ ದೃಶ್ಯ

ಅಜ್ಮೇರ್ ನಲ್ಲಿ
ಅಜ್ಮೇರ್ ನ ಖ್ವಾಜಾ ಮೊಯಿದೆದೀನ್ ಚಿಸ್ಟಿ ದರ್ಗಾದಲ್ಲಿ ಮೆಹಂದಿ ಕಾರ್ಯಕ್ರಮ

ಅಲಹಾಬಾದಿನಲ್ಲಿ
ಅಲಹಾಬಾದಿನಲ್ಲಿ ಮುಸ್ಲಿಮರು ಮೆರವಣಿಗೆ ಹೊರಟಿರುವ ದೃಶ್ಯ

ಅಲಹಾಬಾದಿನಲ್ಲಿ
ಅಲಹಾಬಾದಿನಲ್ಲಿ ಮೊಹರಂ ಅಂಗವಾಗಿ ಮುಸ್ಲಿಮರು ಮೆರವಣಿಗೆ ಹೊರಟಿರುವ ದೃಶ್ಯ

ಶ್ರೀನಗರದಲ್ಲಿ
ಮೊಹರಂ ಅಂಗವಾಗಿ ಮುಸ್ಲಿಮರು ಶ್ರೀನಗರದಲ್ಲಿ ಶಾಂತಿ ಮೆರವಣಿಗೆ ನಡೆಸಿದ್ದಾರೆ

ಅಜ್ಮೇರ್ ನಲ್ಲಿ
ಅಜ್ಮೇರ್ ನ ಖ್ವಾಜಾ ಮೊಯಿದೆದೀನ್ ಚಿಸ್ಟಿ ದರ್ಗಾದಲ್ಲಿ ಮೊಹರಂ ರಂಗು ರಂಗಿನ ಆಚರಣೆ ಸಂಭ್ರಮ












Click it and Unblock the Notifications