ಚಿತ್ರಗಳಲ್ಲಿ: ಒಬಾಮಾ ಭೇಟಿಯ ಅಪರೂಪದ ಕ್ಷಣಗಳು
ನವದೆಹಲಿ, ಜ. 27: ಒಬಾಮಾ ಭಾರತದ ಮೂರು ದಿನಗಳ ಪ್ರವಾಸ ಮುಗಿಸಿ ಸೌದಿಗೆ ತೆರಳಲು ವಿಮಾನ ಏರಿದ್ದಾರೆ. ಭಾರತದಲ್ಲಿ ಇದ್ದ ಮೂರು ದಿನಗಳ ಕಾಲ ಒಬಾಮಾ ಸದಾ ಓಡಾಟದಲ್ಲೇ ನಿರತರಾಗಿದ್ದರು.
ರಾಷ್ಟ್ರಪತಿ ಭವನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಹೈದ್ರಾಬಾದ್ ಹೌಸನ ಔತಣಕೂಟದಲ್ಲಿ ಪಾಲ್ಗೊಂಡರು. ರಾಜಪಥದ ಗಣರಾಜ್ಯೋತ್ಯವ ಕಾರ್ಯಕ್ರಮದಲ್ಲಿ ಭಾಗಹಿಸಿದರು. ಹೀಗೆ ಹೋದ ಕಡೆಯಲ್ಲೆಲ್ಲಾ ಪ್ರಧಾನಿ ನರೇಂದ್ರ ಮೋದಿ ಜತೆ ಸಂಚಲನ ಮೂಡಿಸಿದರು.[ಪಿಟಿಐ ಚಿತ್ರಗಳು]
ಒಬಾಮಾ ಭೇಟಿಯ ಎಲ್ಲ ಕ್ಷಣಗಳನ್ನು ನಿಮ್ಮ ಮುಂದೆ ಇಡಲು ಸಾಧ್ಯವಾಗದಿದ್ದರೂ, ಅದರಲ್ಲಿಯ ಕೆಲ ಅಪರೂಪದ ಕ್ಷಣಗಳನ್ನು ಕಟ್ಟಿಕೊಡುವ ಪ್ರಯತ್ನ ಮಾಡಿದ್ದೇವೆ...[ಒಬಾಮಾ ಉಡುಗೊರೆ ನೀಡಿದ್ದ ಶಾಲೆಗೆ ಬೀಗ ಬಿದ್ದಿದೆ!]

ಬಿಗಿ ಅಪ್ಪುಗೆ
ಭಾರತಕ್ಕೆ ಆಗಮಿಸಿದ ಒಬಾಮಾಗೆ ಪ್ರಧಾನಿಯಿಂದ ಆಲಿಂಗನದ ಸ್ವಾಗತ.

ನಮಸ್ಕಾರ ಹೀಗೆ ಮಾಡಬೇಕು
ಪ್ರಧಾನಿ ನರೇಂದ್ರ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಬಳಿ ನಮಸ್ಕಾರ ಮಾಡುವುದನ್ನು ಕಲಿತುಕೊಳ್ಳುತ್ತಿರುವ ಬರಾಕ್ ಒಬಾಮಾ.

ಬೀಸ್ಟ್ ಸವಾರಿ
ಬೀಸ್ಟ್ ಕಾರಿನಲ್ಲಿಯೇ ಅಮೆರಿಕದ ಅಧ್ಯಕ್ಷರ ಸಂಚಾರ.

ಭಾಷೆ ಯಾವುದು?
ಪ್ರಧಾನಿ ಮೋದಿ ಮತ್ತು ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಒಬಾಮಾಗೆ ತಿಳಿಯದಂತೆ ಹಿಂದಿಯಲ್ಲಿ ಏನಾದರೂ ಮಾತನಾಡಿಕೊಂಡರೇ?

ಪರಿಸರ ಪ್ರೇಮ
ರಾಜ್ ಘಾಟ್ ಬಳಿ ಅಶ್ವತ್ಥ ಸಸಿ ನೆಟ್ಟ ಒಬಾಮಾ.

ಶ್ವಾನ ಪ್ರವೇಶ
ರಾಷ್ಟ್ರಪತಿ ಬಳಿ ಒಬಾಮಾ ಗೌರವ ವಂದನೆ ಸ್ವೀಕರಿಸುತ್ತಿದ್ದಾಗ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಆಗಮಿಸಿದ ಶ್ವಾನ.

ಹೇಗಿದೆ ಚಹಾ?
ಹೈದ್ರಾಬಾದ್ ಹೌಸ್ ನ ಉದ್ಯಾನದಲ್ಲಿ ದಿಗ್ಗಜ ನಾಯಕರ ಮಾತುಕತೆ.

ರಾಜಕೀಯವಿಲ್ಲ
ಔತಣಕೂಟದಲ್ಲಿ ಭಾಗವಹಿಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜತೆ ಪ್ರಧಾನಿ ಹರಟೆ.

ಅಯ್ಯೋ ಚಳಿ
ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ ಒಬಾಮಾ ಕೋಟ್ ಧರಿಸುತ್ತಿರುವಾಗ ಕ್ಯಾಮಾರಾಕ್ಕೆ ಸೆರೆ ಸಿಕ್ಕ ಬಗೆ.

ಇದೇನಿದು?
ರಾಷ್ಟ್ರಪತಿ ಭವನದಲ್ಲಿ ಸನ್ಮಾನ ಸ್ವೀಕರಿಸಿದ ನಂತರ ನೀಡಿದ್ದ ಶಾಲನ್ನು ಕೂತುಹಲದಿಂದ ವೀಕ್ಷಿಸಿದ ಒಬಾಮಾ.

ಗಾಂಧಿಗೆ ನಮನ
ರಾಜ್ ಘಾಟ್ ಗೆ ತೆರಳಿ ಮಹಾತ್ಮ ಗಾಂಧೀಜಿ ಸಮಾಧಿಗೆ ನಮಿಸಿದ ಒಬಾಮಾ.

ಸತ್ಯಾರ್ಥಿ ಭೇಟಿ
ಶಾಂತಿ ನೊಬೆಲ್ ಪುರಸ್ಕೃತ ಕೈಲಾಶ್ ಸತ್ಯಾರ್ಥಿ ಅವರನ್ನು ಭೇಟಿಯಾದ ಒಬಾಮಾ.

ವಿಮಾನ ನೋಟ
ಗಣರಾಜ್ಯೋತ್ಸವ ಸಂದರ್ಭ ವಾಯುಸೇನೆಯ ಪ್ರದರ್ಶನ ಜತೆಯಾಗಿ ವೀಕ್ಷಿಸಿದ ಒಮಾಮಾ ಮತ್ತು ಮೋದಿ.

ವಂದನೆ
ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಪತ್ನಿಗೆ ನಮಿಸಿದ ಅಮೆರಿಕದ ಅಧ್ಯಕ್ಷ

ಚಾಯ್ ಪೇ ಚರ್ಚಾ
ಒಬಾಮಾಗೆ ಸ್ವತಃ ಟೀ ತಯಾರಿಸಿ ನೀಡುತ್ತಿರುವ ಪ್ರಧಾನಿ ಮೋದಿ.

ಶುಭ ವಿದಾಯ
ಸೌದಿಗೆ ತೆರಳಲು ವಿಮಾನ ಏರಿದ ಒಬಾಮಾ ದಂಪತಿ ಭಾರತೀಯರಿಗೆ ವಿದಾಯ ಕೋರಿದ ಬಗೆ.
-
Rameshwaram Cafe: ರಾಮೇಶ್ವರಂ ಕೆಫೆ ಪಾರ್ಸಲ್ - ಬ್ಯಾಗ್ ತುಂಬಾ ದುಬಾರಿ ಕಣ್ರೀ: ಸೋಷಿಯಲ್ ಮೀಡಿಯಾ ವೈರಲ್ ಪೋಸ್ಟ್ -
Hardik Pandya: ವಾಂಖೆಡೆ ಸ್ಟೇಡಿಯಂ ಸಿಬ್ಬಂದಿಗೆ ನೀಡಿದ್ದ ಸಹಾಯಹಸ್ತದ ಮಾತು ಉಳಿಸಿಕೊಂಡ ಹಾರ್ದಿಕ್ ಪಾಂಡ್ಯ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
Bengaluru Property Tax: ಆಸ್ತಿ ತೆರಿಗೆ ಸ್ವೀಕಾರಕ್ಕಾಗಿ ರಾತ್ರಿ 10ಗಂಟೆವರೆಗೆ ಪಾಲಿಕೆ ಕಚೇರಿ ಓಪನ್ -
Arecanut Price: ದಾವಣಗೆರೆ ಮಾರುಕಟ್ಟೆಯಲ್ಲಿ ರಾಶಿ ಅಡಿಕೆ ಧಾರಣೆ ಭರ್ಜರಿ ಏರಿಕೆ: ಇಲ್ಲಿದೆ ಮಾರ್ಚ್ 30ರ ದರಪಟ್ಟಿ -
Hardik Pandya: ಕೇವಲ 35 ದಿನಗಳಲ್ಲಿ ಕೋಟಿ.. ಕೋಟಿ ಖರ್ಚು ಮಾಡಿದ ಹಾರ್ದಿಕ್ ಪಾಂಡ್ಯ; ಇಲ್ಲಿದೆ ಪಟ್ಟಿ -
ಕರ್ನಾಟಕ ಪ್ರಥಮ PUC ಫಲಿತಾಂಶ 2026 ಪ್ರಕಟ: ಫಲಿತಾಂಶ ವೀಕ್ಷಿಸುವುದು ಹೇಗೆ? ಇಲ್ಲಿದೆ ಮಾಹಿತಿ -
March 31 Horoscope: ಲಾಭ, ನಷ್ಟ, ಆರೋಗ್ಯದ ಸಂಪೂರ್ಣ ಮಾಹಿತಿ -
Karnataka Weather: ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಈ ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯ ಆರ್ಭಟ -
Gold Rate Today: ವಾರದ ಆರಂಭದಲ್ಲೇ ಚಿನ್ನದ ಬೆಲೆ ಕುಸಿತ; 100 ಗ್ರಾಂ ಖರೀದಿಸಿದರೆ 8,100 ರೂಪಾಯಿವರೆಗೆ ಉಳಿತಾಯ -
Karnataka Rain: ಬೇಸಿಗೆಯಲ್ಲೂ ಮಳೆರಾಯನ ಆರ್ಭಟ: ಏಪ್ರಿಲ್ 4ರವರೆಗೆ ಕರ್ನಾಟಕದ 16 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ -
Kerosene: ಎಲ್ಪಿಜಿ ಸಮಸ್ಯೆಗೆ ಕೇಂದ್ರದಿಂದ ಹೊಸ ಪರಿಹಾರ: ಮತ್ತೆ ಸಿಗಲಿದೆ ಸೀಮೆಎಣ್ಣೆ, ಪೆಟ್ರೋಲ್ ಬಂಕ್ಗಳಲ್ಲಿ ವಿತರಣೆ












Click it and Unblock the Notifications