ಆದಾಯ ತೆರಿಗೆ ಅಧಿಕಾರಿಗಳ ಆಯಾಸ, ಗೆಲುವು, ಸುಂದರಿಯರು...

Posted By:
Subscribe to Oneindia Kannada

ಆದಾಯ ತೆರಿಗೆ ದಾಳಿ ಅನ್ನೋದು ಈ ಪ್ರಮಾಣದಲ್ಲಿ ನಡೆಯುತ್ತಿರೋದು ಇದೇ ಮೊದಲಿರಬೇಕು. ಅಥವಾ ಈ ಪರಿಯಲ್ಲಿ ಸುದ್ದಿಯಾಗುತ್ತಿರುವುದಾದರೂ ಇದೇ ಮೊದಲಿರಬೇಕು. ಕೋಟಿಗಳಿಗೆ ಈ 'ಬಡ ದೇಶ'ದಲ್ಲಿ ಕೊರತೆಯೇ ಇಲ್ಲ. ಕೆ.ಜಿಗಟ್ಟಲೆ ಚಿನ್ನ, ಕೋಟಿಗಟ್ಟಲೆ ಹಣ ಮಾಮೂಲಿ ಆಗಿದೆ. ಭೋಪಾಲ್ ನಲ್ಲಿ ಐಟಿ ಅಧಿಕಾರಿಗಳು ಬಿಜೆಪಿ ನಾಯಕನ ಮನೆ ಮೇಲೆ ದಾಳಿ ನಡೆಸಿದ್ದಾರೆ.

ಇಂಗ್ಲೆಂಡ್ ವಿರುದ್ಧ ಅಭೂತಪೂರ್ವ ಗೆಲುವು ಪಡೆದದ್ದರ ಸಂಭ್ರಮಾಚರಣೆ ಇನ್ನೂ ಮುಂದುವರಿದಿದೆ. ಅಜೇಯ ತ್ರಿಶತಕ ಬಾರಿಸಿದ ಕರ್ನಾಟಕದ ಕರುಣಾ ನಾಯರ್ ಈಗ ಎಲ್ಲೆಲ್ಲೂ ಕೇಳಿಬರುತ್ತಿರುವ ಹೆಸರು. ಪಕ್ಕದ ಗೋವಾದಲ್ಲಿ ಚುನಾವಣೆ ಕಾವು. ಕೇಂದ್ರ ಸಚಿವ ಮನೋಹರ್ ಪರಿಕ್ಕರ್ ಪ್ರಚಾರದಲ್ಲಿ ಭಾಗಿಯಾಗಿ, ಹುರುಪು ತುಂಬಿದ್ದಾರೆ.

ಟರ್ಕಿಯ ಅಂಕಾರದಲ್ಲಿ ಹತ್ಯೆಯಾದ ರಷ್ಯಾ ರಾಯಭಾರಿಯ ಅಂತಿಮ ಯಾತ್ರೆಯಲ್ಲಿ ಆತನ ಪತ್ನಿ ಭಾಗವಹಿಸಿದ ಚಿತ್ರ ಎಂಥವರ ಮನಸ್ಸನ್ನೂ ಕರಗಿಸುವ ಹಾಗಿದೆ. ಇನ್ನು ನ್ಯೂ ಜೆರ್ಸಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ವಿಜೇತರಾದ ಸುಂದರಿಯರು, ಪಾಟ್ನಾದಲ್ಲಿ ನಡೆದ ಕಥಕ್ ಕಾರ್ಯಾಗಾರ ಸೇರಿದಂತೆ ಇನ್ನಷ್ಟು ಸುದ್ದಿಯನ್ನು ಚಿತ್ರದ ಮೂಲಕ ನಿಮ್ಮ ಮುಂದೆ ಇಡಲಾಗಿದೆ.

ಪದವಿ ಪ್ರದಾನ

ಪದವಿ ಪ್ರದಾನ

ಕೋರೈಖೋವಾದ ಜೋರ್ಹಟ್ ನಲ್ಲಿರುವ ಕಾಜಿರಂಗ ವಿಶ್ವವಿದ್ಯಾಲಯದ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಭಾರತರತ್ನ ಪುರಸ್ಕೃತ ಪ್ರೊ ಸಿಎನ್ ಆರ್ ರಾವ್ ಅವರು ವಿದ್ಯಾರ್ಥಿನಿ ಪದವಿ ಪ್ರದಾನ ಮಾಡಿದ ಕ್ಷಣ ಕ್ಯಾಮೆರಾ ಕಣ್ಣಿಗೆ ಸೆರೆಸಿಕ್ಕಿದ್ದು ಹೀಗೆ.

ಎರಡೂ ಕೈ ಎತ್ತಿ ಸಂಕಲ್ಪ

ಎರಡೂ ಕೈ ಎತ್ತಿ ಸಂಕಲ್ಪ

ಗೋವಾದ ಪಣಜಿಯಲ್ಲಿ ನಡೆದ ಬಿಜೆಪಿಯ ವಿಜಯ್ ಸಂಕಲ್ಪ್ ಸಾರ್ವಜನಿಕ ಸಭೆಯಲ್ಲಿ ಮಾತನಾಡುವ ವೇಳೆಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಕಂಡ ಭಂಗಿ ಇದು.

ಪಂದ್ಯ ಶ್ರೇಷ್ಠ

ಪಂದ್ಯ ಶ್ರೇಷ್ಠ

ಈಗ ಎಲ್ಲೆಲ್ಲೂ ಕರುಣಾ ನಾಯರ್ ಹೆಸರು. ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅಜೇಯ ತ್ರಿಶತಕ ಬಾರಿಸುವ ಮೂಲಕ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು.

ಸೌಂದರ್ಯ ಸ್ಪರ್ಧೆ ವಿಜೇತರು

ಸೌಂದರ್ಯ ಸ್ಪರ್ಧೆ ವಿಜೇತರು

ಅಮೆರಿಕಾದ ನ್ಯೂ ಜೆರ್ಸಿಯಲ್ಲಿ ನಡೆದ ಸೌಂದರ್ಯ ಸ್ಪರ್ಧೆಯಲ್ಲಿ ವಿಜಯಿಗಳಾದ ರಿಯಾ ಮಾಂಜ್ರೇಕರ್, ಮಧು ವಲ್ಲಿ ಹಾಗೂ ಸರಿತಾ ಪಟ್ನಾಯಕ್.

ಸ್ಫೋಟದ ಆರೋಪಿ

ಸ್ಫೋಟದ ಆರೋಪಿ

ನ್ಯೂ ಜೆರ್ಸಿ ಹಾಗೂ ನ್ಯೂಯಾರ್ಕ್ ನಲ್ಲಿ ಕಳೆದ ಸೆಪ್ಟೆಂಬರ್ ನಲ್ಲಿ ಬಾಂಬ್ ಇಟ್ಟು, ಮೂವತ್ತಕ್ಕೂ ಹೆಚ್ಚು ಮಂದಿ ಗಾಯವಾಗುವುದಕ್ಕೆ ಕಾರಣವಾದ ಆರೋಪ ಹೊತ್ತಿರುವ ಅಹ್ಮದ್ ಝಾನ್ ರಹೀಮಿಯನ್ನು ಎಲಿಜೆಬೆತ್ ನಲ್ಲಿ ಪೊಲೀಸ್ ಅಧಿಕಾರಿಯೊಬ್ಬರು ಕೋರ್ಟ್ ಗೆ ಕರೆತಂದ ಕ್ಷಣ.

ಕಥಕ್ ಕಾರ್ಯಾಗಾರ

ಕಥಕ್ ಕಾರ್ಯಾಗಾರ

ಬಿಹಾರದ ಪಾಟ್ನಾದಲ್ಲಿ ನಡೆದ ಕಥಕ್ ಕಾರ್ಯಾಗಾರದಲ್ಲಿ ಪಂಡಿತ್ ಬಿರ್ಜು ಮಹಾರಾಜ್ ಅವರ ತುಮರಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿತು.

ರಷ್ಯಾ ರಾಯಭಾರಿಗೆ ಅಂತಿಮ ಗೌರವ

ರಷ್ಯಾ ರಾಯಭಾರಿಗೆ ಅಂತಿಮ ಗೌರವ

ಟರ್ಕಿಯ ಅಂಕಾರದಲ್ಲಿ ಕೊಲೆಯಾದ ರಷ್ಯಾ ರಾಯಭಾರಿ ಆಂಡ್ರಿ ಕರ್ಲೋ ಪತ್ನಿ ಅಂಕಾರದ ವಿಮಾನ ನಿಲ್ದಾಣದಲ್ಲಿ ಅಂತಿಮ ಗೌರವ ಸಲ್ಲಿಸುವ ವೇಳೆ ಹಾಜರಿದ್ದರು.

ಗೆದ್ದ ಸಂಭ್ರಮ

ಗೆದ್ದ ಸಂಭ್ರಮ

ಚೆನ್ನೈನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ನಲ್ಲಿ ಜಯಗಳಿಸಿದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ಅಧ್ಯಕ್ಷ ಅನುರಾಗ್ ಠಾಕೂರ್ ರಿಂದ ಟ್ರೋಫಿ ಪಡೆದ ಸಂಭ್ರಮದಲ್ಲಿ.

ಆದಾಯ ತೆರಿಗೆ ದಾಳಿ

ಆದಾಯ ತೆರಿಗೆ ದಾಳಿ

ಭೋಪಾಲ್ ನಲ್ಲಿ ಬಿಜೆಪಿಯ ಹಿರಿಯ ನಾಯಕ ಸುಶೀಲ್ ವಾಸ್ವಾನಿ ಮನೆ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮಂಗಳವಾರ ದಾಳಿ ನಡೆಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Various national and international events which have importance, represnt through PTI photos.
Please Wait while comments are loading...