ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

"ಸದ್ಯದಲ್ಲೇ 100 ರೂಪಾಯಿ ಗಡಿ ದಾಟಲಿದೆ ಪೆಟ್ರೋಲ್, ಡೀಸೆಲ್!"

|
Google Oneindia Kannada News

Recommended Video

ಸದ್ಯದಲ್ಲೇ ಪೆಟ್ರೋಲ್ ಡೀಸೆಲ್ ದರ 100ರ ಗಡಿ ದಾಟಲಿದೆ ಎಂದ ಚಂದ್ರಬಾಬು ನಾಯ್ಡು | Oneindia Kannada

ಅಮರಾವತಿ, ಸೆಪ್ಟೆಂಬರ್ 04: ಸದ್ಯದಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ 100 ರೂ. ಗಡಿ ದಾಟಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಲೇವಡಿ ಮಾಡಿದ್ದಾರೆ.

ಆಂಧ್ರಪ್ರದೇಶದ ಅಮರಾವತಿಯಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಿದದ್ದ ನಾಯ್ಡು, ಡಾಲರ್ ಎದುರು ರೂಪಾಯಿ ಮೌಲ್ಯವೂ ಪಾತಳಕ್ಕೆ ಕುಸಿದು, ಒಂದು ಡಾಲರ್ ಗೆ 100 ರೂ.ತೆರಬೇಕಾಗುತ್ತದೆ. ಹಾಗೆಯೇ ಪೆಟ್ರೋಲ್ ಮತ್ತು ಡೀಸೆಲ್ ದರ 100 ರೂ ಗಡಿ ದಾಟುತ್ತದೆ. ಕೇಂದ್ರ ಸರ್ಕಾರಕ್ಕೆ ಬೆಲೆ ಏರಿಕೆಯನ್ನು ನಿಯಂತ್ರಣಕ್ಕೆ ತರುವುದಕ್ಕೆ ಸಾಧ್ಯವಾಗಿಲ್ಲ. ಇದು ಸರ್ಕಾರದ ವೈಫಲ್ಯ ಎಂದು ಎನ್ ಡಿಎ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

ಕಾರು, ಬೈಕು ಬಿಸಾಕಿ, ಸೈಕಲ್ ಏರಲು ಸಿದ್ಧರಾಗಿ! ಏಕೆಂದರೆ...ಕಾರು, ಬೈಕು ಬಿಸಾಕಿ, ಸೈಕಲ್ ಏರಲು ಸಿದ್ಧರಾಗಿ! ಏಕೆಂದರೆ...

ಅಪನಗದೀಕರಣದಿಂದ ನಾವು ಏನನ್ನು ಸಾಧಿಸಿದ್ದೇವೆ? ಇಂದು ಬ್ಯಾಂಕುಗಳ ಸ್ಥಿತಿ ಏನಾಗಿದೆ ಎಂಬುದು ಗೊತ್ತಾಗುತ್ತಿದೆ. ದೊಡ್ಡ ಮೌಲ್ಯದ ನೋಟುಗಳನ್ನು ರದ್ದುಮಾಡಬೇಕು. 2000 ಮುಖಬೆಲೆಯ ನೋಟಿನ ಅಗತ್ಯ ಏನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.

Petrol will soon touch Rs 100: Chandrababu Naidu

ಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ಅಡಿ ತನ್ನಿ: ಚಿದಂಬರಂಪೆಟ್ರೋಲ್, ಡೀಸೆಲ್ ಅನ್ನು ಜಿಎಸ್ಟಿ ಅಡಿ ತನ್ನಿ: ಚಿದಂಬರಂ

ಸೆ.3ರಂದು ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ ಲೀಟರ್ ಗೆ 81.72 ರೂ.ದಾಖಲಾಗಿತ್ತು. ಡೀಸೆಲ್ ಬೆಲೆ ಲೀಟರ್ ಗೆ 73.44 ರೂ. ಇತ್ತು. ಮುಂಬೈಯಲ್ಲಿ ಡೀಸೆಲ್ ದರ ಲೀಟರ್ ಗೆ 75.54 ರೂ.ತಲುಪಿದ್ದರೆ, ಪೆಟ್ರೋಲ್ ದರ ಬರೋಬ್ಬರಿ 86.56 ರೂ.ತಲುಪಿತ್ತು.

English summary
Criticising the Narendra Modi-led government for the continuous rise in fuel prices, Andhra Pradesh Chief Minister Chandrababu Naidu opined that soon, petrol would be sold at Rs. 100 per litre.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X