ವಾಹನ ಸವಾರರು ನಿರಾಳ, ಜೂನ್ 16ರಂದು ನೋ ಕಿರಿಕಿರಿ!
ನವದೆಹಲಿ, ಜೂನ್ 14: ಪೆಟ್ರೋಲ್ ದರ ಪರಿಷ್ಕರಣೆ ವಿರೋಧಿಸಿ, ಜೂನ್ 16 ರಂದು ಕರೆ ನೀಡಿದ್ದ ಬಂದ್ ಹಿಂದಕ್ಕೆ ಪಡೆದಿರುವುದಾಗಿ ಪೆಟ್ರೋಲಿಯಂ ವಿತರಕರ ಒಕ್ಕೂಟ ಹೇಳಿದೆ. ಹೀಗಾಗಿ ವಾಹನ ಸವಾರರಿಗೆ ನಿರಾಳತೆ ಮೂಡಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆಗೆ ತಕ್ಕಂತೆ ಪ್ರತಿದಿನವೂ ಪೆಟ್ರೋಲ್ ದರವನ್ನು ಪರಿಷ್ಕರಣೆ ಮಾಡಬೇಕೆಂಬ ಕೇಂದ್ರ ಸರ್ಕಾರದ ತೀರ್ಮಾನವನ್ನು ವಿರೋಧಿಸಿ ಒಕ್ಕೂಟ ಬಂದ್ ಗೆ ಕರೆನೀಡಲಾಗಿತ್ತು.

ಪಂಪ್ ಡೀಲರ್ಸ್ ಅಸೊಸಿಯೇಷನ್ ಜತೆ ಸಭೆ ಸಫಲವಾದ ಬಳಿಕ ಮಾತನಾಡಿದ ಪೆಟ್ರೋಲಿಯಂ ಹಾಗೂ ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವ ಧರ್ಮೇಂದ್ರ ಪ್ರಧಾನ್ ಮಾತನಾಡಿ, ಡೀಲರ್ ಗಳ ಜತೆ ಮಾತುಕತೆ ಸಫಲವಾಗಿದೆ. ಪ್ರತಿದಿನ ಬೆಲೆಯಲ್ಲಿನ ಏರಿಳಿತಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಪೆಟ್ರೋಲ್ ಹಾಗೂ ಡೀಸೆಲ್ ದರಗಳು ಪ್ರತಿ ದಿನ ಬೆಳಗ್ಗೆ 6ಗಂಟೆಗೆ ವ್ಯತ್ಯಾಸ ಕಾಣಲಿದೆ ಎಂದರು.
ಮೇ 1ರಿಂದ ಪುದುಚೇರಿ, ಚಂಡೀಗಢ, ಜೆಮ್ಷೆಡ್ ಪುರ, ಉದಯ್ ಪುರ ಹಾಗೂ ವಿಶಾಖಪಟ್ಟಣಂನಲ್ಲಿ ಈ ಹೊಸ ಪದ್ಧತಿಯನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಇದು ಯಶಸ್ವಿಯಾಗಿದ್ದು ಜೂ. 16ರಿಂದ ದೇಶಾದ್ಯಂತ ಜಾರಿಗೊಳಿಸಲಾಗುತ್ತದೆ.












Click it and Unblock the Notifications