ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಹೆಚ್ಚಳ

ಬೆಂಗಳೂರು, ಜೂನ್ 15: ಪೆಟ್ರೋಲ್ ಹಾಗೂ ಡೀಸೆಲ್ ದರದಲ್ಲಿ ಬುಧವಾರ ಅಲ್ಪ ಪ್ರಮಾಣದ ಏರಿಕೆ ಮಾಡಲಾಗಿದೆ. ಪರಿಷ್ಕೃತ ದರ ಪಟ್ಟಿ ಜೂನ್ 15ರ ಮಧ್ಯರಾತ್ರಿಯಿಂದಲೇ ಜಾರಿಗೆ ಬರಲಿದೆ. ಪೆಟ್ರೋಲ್ ಪ್ರತಿ ಲೀಟರ್ ಗೆ 5 ಪೈಸೆ ಹಾಗೂ ಡೀಸೆಲ್ ಪ್ರತಿ ಲೀಟರ್ ಮೇಲೆ 1 ರು 26 ಪೈಸೆ ಹೆಚ್ಚಳವಾಗಿದೆ.

ಪರಿಷ್ಕೃತ ದರದ ನಂತರ ದೆಹಲಿಯಲ್ಲಿ ಪೆಟ್ರೋಲ್ ದರ 65.65 ಪ್ರತಿ ಲೀಟರ್ ಗೆ ಹಾಗೂ ಡೀಸೆಲ್ ಪ್ರತಿ ಲೀಟರ್ ಗೆ 55.19 ರು ನಂತಾಗುತ್ತದೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ಪ್ರಕಟಿಸಿದೆ. ಜಾಗತಿಕ ಮಟ್ಟದಲ್ಲಿ ಕಚ್ಚಾತೈಲದ ಬೆಲೆ 50 ಡಾಲರ್ ಪ್ರತಿ ಬ್ಯಾರೆಲ್ ನಂತೆ ಇದೆ. [ಸಿದ್ದರಾಮಯ್ಯ ಅವ್ರೇ, ಪೆಟ್ರೋಲ್ ಮೇಲೆ ವ್ಯಾಟ್ ಇಳಿಕೆ ಮಾಡ್ರಿ]

Petrol Price Hiked By 5 Paise/Litre, Diesel By Rs 1.26/Litre

ಜೂನ್ 1 ರಂದು ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 2.58 ಮತ್ತು ಡೀಸೆಲ್ ಬೆಲೆಯನ್ನು 2.26 ರೂ. ಏರಿಕೆ ಮಾಡಲಾಗಿದೆ. ಒಂದೇ ತಿಂಗಳ ಅವಧಿಯಲ್ಲಿ ಎರಡನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗಿತ್ತು. [ಪೆಟ್ರೋಲ್, ಡೀಸೆಲ್ ನಂತರ ಎಲ್ ಪಿಜಿ ದರ ಏರಿಕೆ]

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆಗಳ ಏರಿಳಿತದ ಆಧಾರದ ಮೇಲೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಾದ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಬಿಪಿಸಿಎಲ್), ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (ಎಚ್ ಪಿಸಿಎಲ್) ಹಾಗೂ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ) ಪ್ರತಿ ತಿಂಗಳಿನ 1ನೇ ಹಾಗೂ 16ನೇ ತಾರಿಖಿನಂದು ತಿಂಗಳಿನಲ್ಲಿ ಎರಡು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಹೆಚ್ಚು/ ಕಡಿಮೆ ಮಾಡುತ್ತವೆ. [20 ರೂಪಾಯಿಗೆ ಲೀಟರ್ ಪೆಟ್ರೋಲ್ ನೀಡಿ : ಸಿದ್ದರಾಮಯ್ಯ]

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ನಂತರ ಬೆಂಗಳೂರಲ್ಲಿ ಲೀಟರ್ ಪೆಟ್ರೋಲ್ ಗೆ 70.45 ರು ನೀಡಬೇಕು. ಡೀಸೆಲ್ ಗೆ 59 ರು, ನೀಡಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+