ಮತ್ತೆ ಜನಸಾಮಾನ್ಯನ ಜೇಬಿಗೆ ಕತ್ತರಿ!ತೈಲಬೆಲೆ ಕಡಿಮೆನೇ ಆಗ್ವಲ್ದು ರೀ!
Recommended Video

ನವದೆಹಲಿ, ಅಕ್ಟೋಬರ್ 01: ಗಗನಕ್ಕೇರಿರುವ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಇಳಿಯುವ ಲಕ್ಷಣಗಳು ಕಾಣಿಸುತ್ತಿಲ್ಲ.
ಸೋಮವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 30 ಪೈಸೆಯಷ್ಟು ಹೆಚ್ಚಳವಾಗಿದ್ದು, 83.73 ಪೈಸೆ ತಲುಪಿದೆ. ಇದು ರಾಜಧಾನಿ ದೆಹಲಿಯ ಕತೆಯಾದರೆ, ಮುಂಬೈಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 91.08 ರಷ್ಟಾಗಿದ್ದು ಜನಸಾಮಾನ್ಯನ ಜೇಬಿಗೆ ಕತ್ತರಿ ಬಿದ್ದಿದೆ.
ಅಬಕಾರಿ ಸುಂಕವನ್ನು ತಗ್ಗಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡವಿದೆಯಾದರೂ ಅದನ್ನು ಇಳಿಸುವುದು ಅಷ್ಟು ಸುಲಭವಿಲ್ಲ. ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಇಂಧನದ ಮೇಲಿನ ತೆರಿಗೆಯನ್ನು ತಗ್ಗಿಸಿದ್ದರೂ ಜನ ಸಾಮಾನ್ಯನಿಗೆ ಭಾರೀ ಲಾಭವೇನೂ ಆಗಿಲ್ಲ.

ಡಾಲರ್ ಎದುರು ರೂಪಾಯಿ ವೈಫಲ್ಯ, ಜಾಗತಿಕ ಮಾರುಕಟ್ಟೆಯಲ್ಲಿ ತೈಲ ಪೂರೈಕೆಯ ಕೊರತೆ ಮುಂತಾದವು ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಲು ಮುಖ್ಯ ಕಾರಣ.
ಸೋಮವಾರ(ಅ.1) ಪ್ರಮುಖ ನಗರಗಳಲ್ಲಿ ತೈಲ ಬೆಲೆ ಇಂತಿದೆ.
(ನಗರ, ರೂಪಾಯಿ/ಪ್ರತಿ ಲೀಟರ್ ಗೆ)
ನವದೆಹಲಿ : ಪೆಟ್ರೋಲ್ 83.73 ಡೀಸೆಲ್ 75.09
ಕೋಲ್ಕತ್ತಾ: ಪೆಟ್ರೋಲ್ 85.30, ಡೀಸೆಲ್ 76.64 ಮುಂಬೈ :ಪೆಟ್ರೋಲ್ 91.08 ಡೀಸೆಲ್ 79.72
ಚೆನ್ನೈ : ಪೆಟ್ರೋಲ್ 87.05, ಡೀಸೆಲ್ 79.40
ಬೆಂಗಳೂರು : ಪೆಟ್ರೋಲ್ 84.15 ಡೀಸೆಲ್ 75.17
ಇದರೊಂದಿಗೆ ಅಡುಗೆ ಇಂಧನದ ಬೆಲೆಯೂ ಏರಿಕೆಯಾಗಿದ್ದು, ಸಬ್ಸಿಡಿ ಸಹಿತ ಎಲ್ ಪಿಜಿ ಸಿಲಿಂಡರ್ ದರ 502.4(2.89 ರೂ.ನಷ್ಟು ಹೆಚ್ಚಾಗಿದೆ) ರೂಪಾಯಿಗಳಷ್ಟಾಗಿದೆ. ಸಬ್ಸಿಡಿ ರಹಿತ ಇಂಧನ ದರ ಸಿಲಿಂಡರ್ ವೊಂದಕ್ಕೆ 59 ರೂ.ನಷ್ಟು ಹೆಚ್ಚಾಗಿದೆ.












Click it and Unblock the Notifications