ಪ್ರಧಾನಿ ಮೋದಿ ಟ್ವಿಟರ್ ಹ್ಯಾಕ್, ಕೆಲವೇ ಕ್ಷಣಗಳಲ್ಲಿ ಖಾತೆ ಸುರಕ್ಷಿತ!

ನವದೆಹಲಿ, ಡಿಸೆಂಬರ್ 12; ಭಾರತದ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕ ಟ್ವಿಟರ್ ಖಾತೆಯನ್ನು ಕೆಲವು ಹೊತ್ತು ಹ್ಯಾಕ್ ಮಾಡಲಾಗಿತ್ತು. ಈ ಸಂದರ್ಭದಲ್ಲಿ ಖಾತೆಯಿಂದ ಮಾಡಿದ ಟ್ವೀಟ್ ಅನ್ನು ನಿರ್ಲಕ್ಷಿಸಬೇಕು ಎಂದು ಪ್ರಧಾನಿ ಕಚೇರಿ ಹೇಳಿದೆ.

ಭಾನುವಾರ ತಡರಾತ್ರಿ ಕೆಲವು ತಾಸುಗಳ ತನಕ ನರೇಂದ್ರ ಮೋದಿ ವೈಯಕ್ತಿಕ ಟ್ವಿಟರ್ ಖಾತೆ ಹ್ಯಾಕ್ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಬಿಟ್ ಕಾಯಿನ್ ಬಗ್ಗೆ ಖಾತೆಯಿಂದ ಟ್ವೀಟ್ ಮಾಡಲಾಗಿದೆ.

ಪ್ರಧಾನಿ ಕಚೇರಿಯೇ ನರೇಂದ್ರ ಮೋದಿ ಟ್ವಿಟರ್ ಖಾತೆ ಹ್ಯಾಕ್ ಆದ ಬಗ್ಗೆ ಟ್ವೀಟ್ ಮಾಡಿ ಮಾಹಿತಿ ನೀಡಿದೆ. ಕೆಲವೇ ಹೊತ್ತಿನಲ್ಲಿ ಖಾತೆಯನ್ನು ಸುರಕ್ಷಿತಗೊಳಿಸಲಾಗಿದೆ ಎಂದು ಕಚೇರಿ ಸ್ಪಷ್ಟಪಡಿಸಿದೆ.

Narendra Modi

ಪ್ರಧಾನಿ ಕಚೇರಿ ಸ್ಪಷ್ಟನೆ; ನರೇಂದ್ರ ಮೋದಿ ಖಾತೆ ಹ್ಯಾಕ್ ಮಾಡಿ ಟ್ವೀಟ್ ಮಾಡಿರುವ ಕುರಿತು ಪ್ರಧಾನ ಮಂತ್ರಿಗಳ ಕಚೇರಿ ಸ್ಪಷ್ಟನೆ ನೀಡಿದೆ, "ಪ್ರಧಾನ ಮಂತ್ರಿಗಳ ಟ್ವಿಟರ್ ಖಾತೆ @narendramodi ಕೆಲವು ಕ್ಷಣಗಳ ಕಾಲ ಹ್ಯಾಕ್ ಆಗಿತ್ತು. ಕೆಲವೇ ಕ್ಷಣಗಳಲ್ಲಿ ಸಮಸ್ಯೆ ಬಗೆಹರಿಸಲಾಗಿದ್ದು, ಈಗ ಖಾತೆ ಸುರಕ್ಷಿತವಾಗಿದೆ. ಹ್ಯಾಕ್ ಆದ ಸಮಯದಲ್ಲಿ ಮಾಡಿದ ಟ್ವೀಟ್‌ ಅನ್ನು ನಿರ್ಲಕ್ಷಿಸಬೇಕು" ಎಂದು ತಿಳಿಸಿದೆ.

ಮೋದಿ ಖಾತೆಯನ್ನು ಹ್ಯಾಕ್ ಮಾಡಿದ ಬಳಿಕ ಎರಡು ಟ್ವೀಟ್ ಮಾಡಲಾಗಿದ್ದು, ಯುಆರ್‌ಎಲ್ ಒಂದನ್ನು ಶೇರ್ ಮಾಡಲಾಗಿದೆ. "ಭಾರತವು ಅಧಿಕೃತವಾಗಿ ಬಿಟ್‌ಕಾಯಿನ್ ಅನ್ನು ಕಾನೂನುಬದ್ಧವಾಗಿ ಅಳವಡಿಸಿಕೊಂಡಿದೆ. ಸರ್ಕಾರವು ಅಧಿಕೃತವಾಗಿ 500 BTC ಯನ್ನು ಖರೀದಿಸಿದೆ ಮತ್ತು ಅವುಗಳನ್ನು ದೇಶದ ಎಲ್ಲಾ ನಿವಾಸಿಗಳಿಗೆ ವಿತರಿಸುತ್ತಿದೆ" ಎಂದು ಟ್ವೀಟ್ ಮಾಡಲಾಗಿದೆ.

tweet

ಬಿಟ್ ಕಾಯಿನ್ ಕುರಿತು ಟ್ವೀಟ್ ಮಾಡಿದ ಕೆಲವೇ ಕ್ಷಣಗಳಲ್ಲಿ ಮತ್ತೊಂದು ಟ್ವೀಟ್ ಮಾಡಲಾಗಿದೆ. Yes this account is hacked by John Wick ([email protected]), We have not hacked Paytm Mall ಎಂದು ಬರೆಯಲಾಗಿದೆ.

ನರೇಂದ್ರ ಮೋದಿ ಟ್ವೀಟ್ ಖಾತೆ ಹ್ಯಾಕ್ ಆಗಿದೆ ಎಂಬ ಮಾಹಿತಿ ತಿಳಿದ ತಕ್ಷಣ ಅದನ್ನು ಸರಿಪಡಿಸಲಾಗಿದೆ. ಈಗ ಖಾತೆ ಸುರಕ್ಷಿತವಾಗಿದೆ ಎಂದು ಪ್ರಧಾನ ಮಂತ್ರಿಗಳ ಕಾರ್ಯಾಲಯ ಮಾಹಿತಿ ನೀಡಿದೆ.

ಟ್ವೀಟರ್‌ನಲ್ಲಿ ಅತಿ ಹೆಚ್ಚು ಹಿಂಬಾಲಕರನ್ನು ಹೊಂದಿರುವ ವಿಶ್ವದ ಪ್ರಮುಖ ನಾಯಕರಲ್ಲಿ ಪ್ರಧಾನಿ ನರೇಂದ್ರ ಮೋದಿ ಸಹ ಒಬ್ಬರು. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿರುವ ಮೋದಿ ಹಲವಾರು ವಿಚಾರಗಳನ್ನು ಹಂಚಿಕೊಳ್ಳುತ್ತಾರೆ.

2009ರಲ್ಲಿ ನರೇಂದ್ರ ಮೋದಿ ಟ್ವಿಟರ್‌ಗೆ ಜಾಯಿನ್ ಆಗಿದ್ದಾರೆ. 73.4 ಮಿಲಿಯನ್ ಹಿಂಬಾಲಕರು ಅವರಿಗಿದ್ದಾರೆ. 2,367 ಜನರನ್ನು ಮೋದಿ ಫಾಲೋ ಮಾಡುತ್ತಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ರಾಜ್ಯ, ದೇಶದ ವಿವಿಧ ಸಚಿವರು, ಶಾಸಕರ ಟ್ವೀಟ್, ಫೇಸ್‌ಬುಕ್ ಖಾತೆಯನ್ನು ಹ್ಯಾಕ್ ಮಾಡಿರುವ ಪ್ರಕರಣಗಳು ಸಾಕಷ್ಟು ನಡೆದಿವೆ.

ಐಪಿಎಸ್ ಅಧಿಕಾರಿಗಳ ಖಾತೆಗಳನ್ನು ಹ್ಯಾಕ್ ಮಾಡಿ ಹಣಕ್ಕಾಗಿ ಬೇಡಿಕೆ ಇಟ್ಟು ಸಂದೇಶಗಳನ್ನು ಕಳಿಸಿದ ಪ್ರಕರಣಗಳು ಸಹ ವರದಿಯಾಗಿವೆ. ಈಗ ಪ್ರಧಾನಿ ನರೇಂದ್ರ ಮೋದಿ ವೈಯಕ್ತಿಕ ಟ್ವಿಟರ್ ಖಾತೆಯನ್ನು ಹ್ಯಾಕ್ ಮಾಡಲಾಗಿದೆ.

ಬಿಟ್ ಕಾಯಿನ್ ಬಗ್ಗೆ ಚರ್ಚೆ; ದೇಶದಲ್ಲಿ ಬಿಟ್ ಕಾಯಿನ್ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಮೋದಿ ಟ್ವಿಟರ್ ಖಾತೆ ಹ್ಯಾಕ್ ಮಾಡಿರುವ ದುಷ್ಕರ್ಮಿಗಳು ಬಿಟ್ ಕಾಯಿನ್ ಕಾನೂನು ಬದ್ಧಗೊಳಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

"ದೇಶದಲ್ಲಿ ಕಾನೂನು ಬದ್ಧವಾಗಿ ಬಿಟ್ ಕಾಯಿನ್ ಸ್ವೀಕರಿಸುವ ಯಾವುದೇ ಯೋಜನೆ ಸರ್ಕಾರದ ಮುಂದಿಲ್ಲ" ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈಗಾಗಲೇ ಸ್ಪಷ್ಟನೆ ನೀಡಿದ್ದಾರೆ.

"ಬಿಟ್ ಕಾಯಿನ್‌ಗೆ ಕಾನೂನು ಬದ್ಧವಾಗಿ ಯಾವುದೇ ಮಾನ್ಯತೆ ನೀಡಲಾಗಿಲ್ಲ. ಬಿಟ್ ಕಾಯಿನ್ ವ್ಯವಹಾರ ಕುರಿತು ಕೇಂದ್ರ ಸರ್ಕಾರ ಯಾವುದೇ ದತ್ತಾಂಶ ಸಂಗ್ರಹ ಮಾಡಿಲ್ಲ" ಎಂದು ಹಣಕಾಸು ಸಚಿವರು ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+