ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೆರವಣಿಗೆಗೆ ಅನುಮತಿ ರದ್ದು: ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್‌ಗೆ ಗೃಹ ಬಂಧನ

|
Google Oneindia Kannada News

ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅವರನ್ನು ಭಾನುವಾರ ರಾತ್ರಿ ಭಾರಿ ಪೊಲೀಸ್ ನಿಯೋಜನೆಯೊಂದಿಗೆ ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ. ಕೋಮು ಸೂಕ್ಷ್ಮ ಪರಿಸ್ಥಿತಿಯನ್ನು ಉಲ್ಲೇಖಿಸಿ ನಿರ್ಮಲ್ ಜಿಲ್ಲೆಯ ಭೈಂಸಾ ಪಟ್ಟಣದಲ್ಲಿ ಬಂಡಿ ಸಂಜಯ್ ಕುಮಾರ್ ಅವರ ಐದನೇ ಹಂತದ ಯಾತ್ರೆ ಮತ್ತು ಸಾರ್ವಜನಿಕ ಸಭೆಗೆ ಪೊಲೀಸರು ಅನುಮತಿ ನಿರಾಕರಿಸಿದ್ದರು.

ಆದರೂ ಬಂಡಿ ಸಂಜಯ್ ಕುಮಾರ್ ಪ್ರಜಾ ಸಂಗ್ರಾಮ ಯಾತ್ರೆಗಾಗಿ ನಿರ್ಮಲ್ ಜಿಲ್ಲೆಗೆ ತೆರಳುತ್ತಿದ್ದರು. ಪಾದಯಾತ್ರೆಗಾಗಿ ನಿರ್ಮಲ್‌ಗೆ ತೆರಳುತ್ತಿದ್ದ ರಾಜ್ಯ ಬಿಜೆಪಿ ಮುಖ್ಯಸ್ಥರನ್ನು ಜಗ್ತಿಯಾಲ್ ಜಿಲ್ಲೆಯಲ್ಲಿ ಪೊಲೀಸರು ತಡೆದು ಹಿಂತಿರುಗುವಂತೆ ಹೇಳಿದರು. ಅದಾಗದೇ ಇದ್ದಾಗ ಬಂಧಿಸಿ ಕರೀಂನಗರ ನಿವಾಸದ ಹೊರಗೆ ಭಾರಿ ಪೊಲೀಸ್ ನಿಯೋಜನೆಯೊಂದಿಗೆ ಗೃಹಬಂಧನದಲ್ಲಿ ಇರಿಸಲಾಯಿತು.

ಬಂಡಿ ಸಂಜಯ್ ಬಂಧನದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು ಜಗ್ತಿಯಾಲ್ ಮತ್ತು ನಿರ್ಮಲ್ ಜಿಲ್ಲೆಗಳಲ್ಲಿ ಉದ್ವಿಗ್ನತೆ ಉಂಟಾಗಿದೆ. ತೆಲಂಗಾಣ ಬಿಜೆಪಿ ಪಕ್ಷದ ಕೆಲವು ಕಾರ್ಯಕರ್ತರಿಗೆ ಪೊಲೀಸರ ದಾಳಿಯಲ್ಲಿ ಗಾಯಗಳಾಗಿವೆ ಎಂದು ಆರೋಪಿಸಿದೆ. ರಾಜ್ಯ ಸರ್ಕಾರ ಕೂಡಲೇ ಮೆರವಣಿಗೆ ಮತ್ತು ಸಾರ್ವಜನಿಕ ಸಭೆಗೆ ಅನುಮತಿ ನೀಡಬೇಕು ಎಂದು ಒತ್ತಾಯಿಸಿದೆ.

ತೆಲಂಗಾಣ ಬಿಜೆಪಿ ಕೂಡ ಬಂಡಿ ಸಂಜಯ್ ಯಾತ್ರೆಗೆ ಅನುಮತಿ ರದ್ದಾದ ಹಿನ್ನೆಲೆಯಲ್ಲಿ ತುರ್ತು ವಿಚಾರಣೆಗಾಗಿ ಹೈಕೋರ್ಟ್ ಮೊರೆ ಹೋಗಿದೆ.

Permission to march cancelled: Telangana BJP chief Bandi Sanjay under house arrest

"ತೆಲಂಗಾಣದ ಈ ನಡೆಯ ಬಗ್ಗೆ ತುರ್ತು ವಿಚಾರಣೆಗಾಗಿ ಹೈಕೋರ್ಟ್‌ಗೆ ಮೊರೆ ಹೋಗಿದ್ದೇವೆ. ಕೆಸಿಆರ್ ಸೂಚನೆ ಮೇರೆಗೆ ಪೊಲೀಸರು ಪ್ರಜಾ ಸಂಗ್ರಾಮ ಯಾತ್ರೆಗೆ ಅನುಮತಿ ನಿರಾಕರಿಸಿದರು. ನಿನ್ನೆ ರಾತ್ರಿ ಬಿಜೆಪಿ ಅಧ್ಯಕ್ಷ ಬಂಡಿ ಸಂಜಯ್ ಮತ್ತು ಕಾರ್ಯಕರ್ತರಿಗೆ ಭೈಂಸಾಗೆ ಹೋಗಲು ಅವಕಾಶ ನೀಡಲಿಲ್ಲ. ನಮ್ಮನ್ನು ಕೆಸಿಆರ್ ತಡೆಯಲು ಸಾಧ್ಯವಿಲ್ಲ. ತೆಲಂಗಾಣದಲ್ಲಿ ಬಿಜೆಪಿಯ ಉದಯವಾಗಿದೆ'' ಎಂದು ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ.

ಭೈಂಸಾ ಪಟ್ಟಣವು ಕಳೆದ ವರ್ಷ ಮತ್ತು 2020 ರಲ್ಲಿ ವಿವಿಧ ಸಮುದಾಯಗಳಿಗೆ ಸೇರಿದ ಗುಂಪುಗಳ ನಡುವೆ ಘರ್ಷಣೆಗೆ ಸಾಕ್ಷಿಯಾಗಿದೆ.

English summary
Telangana BJP chief Bandi Sanjay has been placed under house arrest after the permission to march was cancelled.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X