Ratan Tata: ಜನ ರತನ್ ಟಾಟಾ ಮರೆಯದೇ ಇರೋದಕ್ಕೆ ಇದೇ ಕಾರಣ
ಭಾರತದ ಬಡ ಹಾಗೂ ಮಧ್ಯಮ ವರ್ಗದವರು ಎಂದಿಗೂ ರತನ್‌ಟಾಟಾ ಅವರನ್ನು ಮರೆಯಲು ಸಾಧ್ಯವೇ ಇಲ್ಲ. ಬಡ ಹಾಗೂ ಮಧ್ಯಮ ವರ್ಗದವರ ಆಸೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ರತನ್ ಟಾಟಾ ಅವರು ಅಪಾರ ಶ್ರಮ ಹಾಕಿದ್ದರು. ರತನ್‌ಟಾಟಾ ಅವರ ನಿಧನದ ಸುದ್ದಿ ಅವರ ಅಭಿಮಾನಿಗಳಲ್ಲಿ ಆಘಾತವನ್ನೇ ಉಂಟು ಮಾಡಿದೆ. ಹಲವು ದಶಕಗಳಿಂದ ರತನ್‌ಟಾಟಾ ಅವರು ಉದ್ಯಮ ವಲಯದಲ್ಲಿ ಇದ್ದಾರೆ. ಆದರೆ, ಅವರು ಕೇವಲ ಒಬ್ಬ ಉದ್ಯಮಿಯಾಗಿ ಮಾತ್ರ ಗುರುತಿಸಿಕೊಂಡಿಲ್ಲ. ಅವರು ಬಡ ಹಾಗೂ ಮಧ್ಯಮ ವರ್ಗದ ಕನಸುಗಳನ್ನು ಸಾಕಾರಗೊಳಿಸಿದ್ದಾರೆ.
ಕಾರು ಖರೀದಿ ಎನ್ನುವುದು ಕೇವಲ ಶ್ರೀಮಂತರಿಗಷ್ಟೇ ಸೀಮಿತ ಎನ್ನುವ ಕಾಲವಿತ್ತು. ಆದರೆ, ಯಾರೂ ಬೇಕಾದರೂ ಕಾರು ಖರೀದಿ ಮಾಡಬಹುದು ಎನ್ನುವ ಹಂತಕ್ಕೆ ತಂದವರು ರತನ್‌ಟಾಟಾ. ಈ ವಿಷಯ ಕೇವಲ ಕಾರಿಗೆ ಮಾತ್ರ ಸೀಮಿತವಾಗಲಿಲ್ಲ. ಅವರು ಲಕ್ಷಾಂತರ ಬಡವರಿಗೆ ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಹಾಯವಾಗಲು ದಾರಿ ಮಾಡಿಕೊಟ್ಟಿದ್ದರು. ಇದೇ ಕಾರಣಕ್ಕೆ ಭಾರತದಲ್ಲಿ ಯಾವುದೇ ಉದ್ಯಮಿಗಳಿಗೂ ಇಲ್ಲದಷ್ಟು ಅಭಿಮಾನಿ ಬಳಗವನ್ನು ರತನ್ ಟಾಟಾ ಅವರು ಹೊಂದಿದ್ದಾರೆ. ಇದಕ್ಕೆಲ್ಲ ಕಾರಣ ಅವರು ಕೇವಲ ಉದ್ಯಮಿಯಾಗಿ ಮಾತ್ರ ಇರಲಿಲ್ಲ. ಟಾಟಾ ಅವರು ಉದ್ಯಮಕ್ಕೆ ಭಾವನಾತ್ಮಕ ಸ್ಪರ್ಶವನ್ನು ನೀಡಿದ್ದರು.

ಭಾರತೀಯರ ಕನಸಿನ ಕಾರು ಪರಿಚಯಿಸಿದ್ದ ಟಾಟಾ
ರತನ್‌ಟಾಟಾ ಅವರು ಭಾರತೀಯರ ಕನಸಿನ ಕಾರನ್ನು ಪರಿಚಯಿಸಿದ್ದರು. ರತನ್‌ಟಾಟಾ ಅವರು ಮಧ್ಯಮವರ್ಗದ ಕನಸಿನ ಕಾರನ್ನು ಪರಿಚಯಿಸಿದ ಮೇಲೆ ಜನ ಸಾಮಾನ್ಯರು ಕಾರು ಖರೀದಿ ಮಾಡುವ ಪ್ರಮಾಣ ಹೆಚ್ಚಳವಾಯಿತು. ಭಾರತದ ಆರ್ಥಿಕ ಉದಾರೀಕರಣದ ವೇಳೆ ಅವರು ತೆಗೆದುಕೊಂಡ ನಿರ್ಧಾರಗಳು ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದವು. ರತನ್‌ಟಾಟಾ ಹಾಗೂ ಟಾಟಾ ಸಮೂಹ ಪರಿಚಯಿಸಿದ್ದ ಕಡಿಮೆ ವೆಚ್ಚದ ಕಾರು ಮಾರುಕಟ್ಟೆಯಲ್ಲಿ ತನ್ನದೇ ಖ್ಯಾತಿಯನ್ನು ಗಳಿಸಿದೆ. ಅಲ್ಲದೇ ಅವರು ಕಡಿಮೆ ಬೆಲೆಗೆ ಕಾರು ತಯಾರಿಸಿ ಮಾರುಕಟ್ಟೆಗೆ ಬಿಟ್ಟಿದ್ದರು. ತಯಾರಿಕ ವೆಚ್ಚ ಕಡಿಮೆಯಾಗಿದ್ದರಿಂದ ಸಹಜವಾಗಿಯೇ ಅದರ ಬೆಲಯೂ ಕಡಿಮೆಯಾಗಿತ್ತು. ಇನ್ನು ರತನ್‌ಟಾಟಾ ಅವರು ಪರಿಚಯಿಸಿದ್ದ ಟಾಟಾ ನ್ಯಾನೋ ಹಾಗೂ ಟಾಟಾ ಇಂಡಿಕಾ ಕಾರು ಇಂದಿಗೂ ಬಡ ಹಾಗೂ ಮಧ್ಯಮರ್ಗದ ಕನಸಿನ ಕಾರು.
ಕಾರು ಕೇವಲ ಶ್ರೀಮಂತಿಕೆಯ ಸಂಕೇತ ಎನ್ನುವ ಮಾತನ್ನು ಸುಳ್ಳಾಗಿಸಿದ್ದೇ ರತನ್‌ಟಾಟಾ ಅವರು. ಶ್ರೀಮಂತರೂ ಮಾತ್ರ ಕಾರಿನಲ್ಲಿ ಹೋಗಬೇಕಿಲ್ಲ. ಬಡವರು ಹಾಗೂ ಮಧ್ಯಮ ವರ್ಗದವರು ಸಹ ಸ್ವಂತ ಕಾರು ಖರೀದಿ ಮಾಡಬಹುದು. ಅದರಲ್ಲಿ ತಮ್ಮ ಕುಟುಂಬದವರೊಂದಿಗೆ ಸಂತೋಷದ ಕ್ಷಣಗಳನ್ನು ಕಳೆಯಬಹುದು ಎಂದು ರುಜುವಾತು ಮಾಡಿದ್ದರು. ರತನ್‌ಟಾಟಾ ಅವರು ಬುಧವಾರ ನಿಧನರಾದ ಮೇಲೆ ಅವರ ಸಾಹಸ ಕಥೆಗಳು, ಅವರ ಸಾಧನೆಯ ಬಗ್ಗೆ ಹೆಚ್ಚು ಚರ್ಚೆಯಾಗುತ್ತಿದೆ. ಮಹಾ ಮಾನವತಾವದಿಯಾಗಿದ್ದ ಟಾಟಾ ಅವರ ಸಾವು ಕೋಟ್ಯಾಂತರ ಅಭಿಮಾನಿಗಳಲ್ಲಿ ದುಃಖವನ್ನು ಮೂಡಿಸಿದೆ. ಟಾಟಾ ಅವರು ಬಡವರು ಹಾಗೂ ಮಧ್ಯಮವರ್ಗದ ಮನಸ್ಸಿನಲ್ಲಿ ಸದಾ ಉಳಿಯಲಿದ್ದಾರೆ.












Click it and Unblock the Notifications