Delhi Election 2025 Exit Polls: ದೆಹಲಿಯಲ್ಲಿ ಈ ಬಾರಿ ಮುಗ್ಗರಿಸಲಿದೆ ಎಎಪಿ, ಬಿಜೆಪಿಗೆ ಅಧಿಕಾರ!

ದೆಹಲಿಯಲ್ಲಿ ಈ ಬಾರಿ ಆಮ್‌ ಆದ್ಮಿ ಪಾರ್ಟಿ ಅಧಿಕಾರಕ್ಕೆ ಬರುವ ಸಾಧ್ಯತೆ ಇಲ್ಲ ಎಂದು ಪಿಪಲ್ ಪಲ್ಸ್ ಎಕ್ಸಿಟ್ ಪೋಲ್ ಭವಿಷ್ಯ ನುಡಿದಿದೆ. ದೆಹಲಿಯಲ್ಲಿ ಈ ಬಾರಿ ಎಎಪಿ ಮೂರನೇ ಬಾರಿ ಹ್ಯಾಟ್ರಿಕ್ ಸಾಧನೆ ಮಾಡಲಿದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಆ ಲೆಕ್ಕಾಚಾರಗಳು ತಲೆಕೆಳಗಾಗಿವೆ.

ದೆಹಲಿ ವಿಧಾನಸಭೆ ಚುನಾವಣೆ ಮುಕ್ತಾಯವಾಗಿದ್ದು. ಇನ್ನು ಫಲಿತಾಂಶದ ವಿಷಯ ಗರಿಗೆದರಿದೆ. ಕೇಂದ್ರಾಡಳಿತ ಪ್ರದೇಶ ಹಾಗೂ ದೆಹಲಿ ವಿಧಾನಸಭೆಯ 70 ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 5ರಂದು ಮತದಾನ ನಡೆದಿದೆ. ಈ ಬಾರಿ ಎಲ್ಲಾ ರಾಜಕೀಯ ಪಕ್ಷಗಳು ಭರ್ಜರಿ ಸಿದ್ಧತೆಯೊಂದಿಗೆ ಸ್ಪರ್ಧೆ ಮಾಡಿದ್ದವು. ದೇಶದಲ್ಲಿ ಈಚೆಗೆ ನಡೆದ ಸಾಲು ಸಾಲು ರಾಜ್ಯಗಳ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದ ಬಿಜೆಪಿಯು ದೆಹಲಿಯಲ್ಲಿ ಗೆಲ್ಲುವುದಕ್ಕೆ ಕಳೆದ ಒಂದು ವರ್ಷದಿಂದಲೂ ಸಿದ್ಧತೆ ಮಾಡಿಕೊಳ್ಳುತ್ತಿತ್ತು. ಆದರೆ ಎಎಪಿಗೆ ಚುನಾವಣೆಗೆ ಸಿದ್ಧತೆ ಮಾಡಿಕೊಳ್ಳಲು ಹೆಚ್ಚು ಸಮಯ ಸಿಗಲಿಲ್ಲ. ಕಳೆದ ನಾಲ್ಕು ತಿಂಗಳುಗಳಿಂದಷ್ಟೇ ದೆಹಲಿ ಚುನಾವಣೆಗೆ ಎಎಪಿ ಸಿದ್ಧತೆ ಮಾಡಿಕೊಂಡಿತ್ತು.

People Pulse Exit Poll AAP Will Stumble in Delhi BJP will Come to Power

ಇನ್ನು ದೆಹಲಿಯಲ್ಲಿ ಒಟ್ಟು 70 ವಿಧಾನಸಭಾ ಕ್ಷೇತ್ರಗಳಿದ್ದರೆ 36 ಇದರ ಮ್ಯಾಜಿಕ್‌ ಸಂಖ್ಯೆಯಾಗಿದೆ. ಈ ಬಾರಿ ಅಧಿಕಾರಕ್ಕೆ ಬರುವ ವಿಶ್ವಾಸವನ್ನು ಎಎಪಿ ಹಾಗೂ ಬಿಜೆಪಿ ಎರಡೂ ಪಕ್ಷಗಳು ವ್ಯಕ್ತಪಡಿಸಿದ್ದವು. ಆದರೆ ಬಿಜೆಪಿ ಇಲ್ಲಿ ಅಧಿಕಾರಕ್ಕೆ ಬರಲಿದೆ ಎಂದು ಪಿಪಲ್ ಪಲ್ಸ್ ಎಕ್ಸಿಟ್ ಭವಿಷ್ಯ ನುಡಿದಿದೆ.

ಬಿಜೆಪಿ ಅಧಿಕಾರಕ್ಕೆ: ಪಿಪಲ್ ಪಲ್ಸ್ ಎಕ್ಸಿಟ್ ಪೋಲ್‌ನ ಪ್ರಕಾರ ಈ ಬಾರಿ ದೆಹಲಿಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದ್ದು. ಆಮ್‌ ಆದ್ಮಿ ಪಾರ್ಟಿಯು ಅಧಿಕಾರ ಕಳೆದುಕೊಳ್ಳಲಿದೆ. ಆಮ್‌ ಆದ್ಮಿ ಪಾರ್ಟಿಗೆ 10ರಿಂದ 19 ಸೀಟುಗಳು ಸಿಕ್ಕರೆ, ಬಿಜೆಪಿಗೆ 51ರಿಂದ 60 ಸೀಟುಗಳು ಬರಲಿವೆ ಎಂದು ಹೇಳಲಾಗಿದೆ. ಆದರೆ ಕಾಂಗ್ರೆಸ್‌ ಈ ಎಕ್ಸಿಟ್‌ ಪೋಲ್‌ನ ಲಿಸ್ಟ್‌ನಲ್ಲಿಯೇ ಇಲ್ಲ.!

‌ಯಮುನಾ ನದಿ ವಿವಾದ: ಈ ಬಾರಿ ಚುನಾವಣೆಯಲ್ಲಿ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಯುಮುನಾ ನದಿ ವಿಚಾರವೂ ಒಂದು. ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹರಿಯಾಣ vs ದೆಹಲಿ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಹೌದು ಇದಕ್ಕೆ ಮುಖ್ಯ ಕಾರಣ ದೆಹಲಿ ಮಾಜಿ ಮುಖ್ಯಮಂತ್ರಿ ಹಾಗೂ ಆಮ್‌ ಆದ್ಮಿ ಪಾರ್ಟಿಯ ರಾಷ್ಟ್ರೀಯ ಸಂಚಾಲಕ ಅರವಿಂದ್‌ ಕೇಜ್ರಿವಾಲ್‌ ಅವರು ಯಮುನಾ ನದಿಗೆ ವಿಷ ಸೇರಿಸಲಾಗುತ್ತಿದೆ ಎನ್ನುವ ಆರೋಪವನ್ನು ಮಾಡಿದ್ದರು. ಹೌದು ಯಮುನಾ ನದಿ ಹರಿಯಾಣದ ಮೂಲಕ ದೆಹಲಿ ತಲುಪುತ್ತದೆ. ಹರಿಯಾಣದಲ್ಲಿ ಕೈಗಾರಿಕಾ ತ್ಯಾಜ್ಯ ಹಾಗೂ ವಿವಿಧ ತ್ಯಾಜ್ಯಗಳನ್ನು ಯಮುನಾ ನದಿಗೆ ಸೇರಿಸುವ ಮೂಲಕ ವಿಷಯುಕ್ತಗೊಳಿಸಲಾಗಿದೆ ಎಂದಿದ್ದರು.

ಈ ಹೇಳಿಕೆಗೆ ಭಾರತೀಯ ಚುನಾವಣಾ ಆಯೋಗವು ಎಚ್ಚರಿಕೆಯನ್ನು ಕೊಟ್ಟಿತ್ತು. ಅಲ್ಲದೆ ಅರವಿಂದ್‌ ಕೇಜ್ರಿವಾಲ್‌ ಅವರು ಭಾರತೀಯ ಚುನಾವಣಾ ಆಯೋಗದ ಮುಂದೆ ಇದಕ್ಕೆ ಸಂಬಂಧಿಸಿದಂತೆ ವಿವರಣೆ ಸಹ ಕೊಟ್ಟಿದ್ದರು.

ಗ್ಯಾರಂಟಿ ಯೋಜನೆಯ ಚರ್ಚೆ: ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಸದ್ದು ಮಾಡಿದ ಮತ್ತೊಂದು ವಿಷಯ ಗ್ಯಾರಂಟಿ ಯೋಜನೆಗಳು. ದೆಹಲಿಯಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ಈ ಬಾರಿ ಗ್ಯಾರಂಟಿ ಯೋಜನೆಗಳನ್ನು ಚುನಾವಣೆ ಪ್ರಣಾಳಿಕೆಯಲ್ಲಿ ಘೋಷಿಸಿದ್ದವು. ಅದರಲ್ಲೂ ಮುಖ್ಯವಾಗಿ ಮಹಿಳೆಯರನ್ನು ಕೇಂದ್ರೀಕರಿಸಿಕೊಂಡು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದ್ದವು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+