ಪದೇ ಪದೇ ಕೈತೊಳೆಯೋದು ಹಾಗಿರಲಿ, ಕುಡಿಯೋಕೂ ನೀರಿಲ್ಲ
ನವದೆಹಲಿ, ಏಪ್ರಿಲ್ 16: ಕೊರೊನಾ ವೈರಸ್ ದೇಶದಾದ್ಯಂತ ಹರಡುತ್ತಿದ್ದಂತೆಯೇ ಪದೇ ಪದೇ ಹ್ಯಾಂಡ್ ವಾಷ್ ಅಥವಾ ಸೋಪಿನಿಂದ ಕೈತೊಳೆದುಕೊಳ್ಳಿ ಎಂದು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ.
Recommended Video
ಆದರೆ ನಿಜ ಸಂಗತಿಯೆಂದರೆ ಪದೇ ಪದೇ ಕೈತೊಳೆದುಕೊಳ್ಳುವುದು ಹಾಗಿರಲಿ ಅವರಿಗೆ ಕೊಡಿಯೋಕೂ ನೀರು ಸಿಗುತ್ತಿಲ್ಲ.
ಬೇಸಿಗೆ ಕಾಲ ಆರಂಭವಾಗಿದೆ. ದೇಶದೆಲ್ಲೆಡೆ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಶೇ.82 ರಷ್ಟು ಮಂದಿ ಕುಡಿಯುವ ನೀರಿಗಾಗಿ ಹಪಹಪಿಸುತ್ತಿದ್ದಾರೆ.
ಸೋಪಿನಿಂದ ಕೈತೊಳೆದುಕೊಳ್ಳುವುದು ವೈರಸ್‌ನಿಂದ ದೂರವಿರಲು ಒಂದು ಸುಲಭ ಮಾರ್ಗ , ಹಾಗೆಯೇ ಸಾಕಷ್ಟು ಸೋಂಕಿನಿಂದ ತಪ್ಪಿಸಿಕೊಳ್ಳಬಹುದಾಗಿದೆ ಎಂದು ಯುನಿಸೆಫ್‌ನ ಸಂಜಯ್ ತಿಳಿಸಿದ್ದಾರೆ.
ಚೆನ್ನೈನಲ್ಲಿ ನೀರು ಸರಬರಾಜು ಮಾಡುತ್ತಿದ್ದ ಟ್ಯಾಂಕರ್‌ಗಳು ತಮ್ಮ ವ್ಯಾಪ್ತಿಯನ್ನು ಶೇ.50ರಷ್ಟು ಕಡಿಮೆ ಮಾಡಿವೆ.ಹಾಗೆಯೇ ಹೈದರಾಬಾದಿನಲ್ಲಿ ಒಂದು ದಿನ ಬಿಟ್ಟು ಒಂದು ದಿನ ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತದೆ.
ನೀರಿನ ಬೆಲೆಯನ್ನು ಶೇ.20ರಷ್ಟು ಹೆಚ್ಚಳ ಮಾಡಿದ್ದಾರೆ. ಸಾಮಾನ್ಯವಾಗಿ ಕಡು ಬೇಸಿಗೆಯಲ್ಲಿ ನೀರಿನ ಅಭಾವ ಹೆಚ್ಚಾದಾಗ ಏರಿಕೆಯಾಗುತ್ತಿತ್ತು. ಆದರೆ ಈಗ ಕೊರೊನಾ ವೈರಸ್‌ನಿಂದಾಗಿ ಕೈತೊಳೆಯುವುದು ಹೆಚ್ಚಾಗಿರುವುದರಿಂದ ನೀರಿನ ಬೆಲೆಯೂ ಹೆಚ್ಚಾಗಿದೆ.

ಕೈತೊಳೆದುಕೊಳ್ಳಲು ನೀರಿಲ್ಲ
ವಿಶ್ವ ಆರೋಗ್ಯ ಸಂಸ್ಥೆಯು ಕನಿಷ್ಟ 20 ಸೆಕೆಂಡ್‌ಗಳ ಕಾಲ ಸೋಪಿನಿಂದ ಕೈತೊಳೆದುಕೊಳ್ಳಿ ಅದರಿಂದ ವೈರಸ್‌ಗಳಿಂದ ದೂರವಿರಬಹುದು ಎಂದು ಸಲಹೆ ನೀಡಿದೆ. ದಿನಕ್ಕೆ ಹತ್ತು ಬಾರಿ ಕೈಗಳನ್ನು ತೊಳೆದರೆ ಪ್ರತಿ ಹ್ಯಾಂಡ್ ವಾಶ್‌ಗೆ 2 ಲೀಟರ್ ನೀರು ಬೇಕಾಗುತ್ತದೆ. ಒಂದು ದಿನ ಮುಗಿಯುವ ಹೊತ್ತಿಗೆ 20 ಲೀಟರ್ ನೀರು ಒಬ್ಬರಿಗೆ ಕೈ ತೊಳೆಯಲು ಬೇಕಾಗುತ್ತದೆ. ಆದರೆ ಅಷ್ಟು ಪ್ರಮಾಣದ ನೀರು ಇಲ್ಲ ಎಂಬುದು ಸತ್ಯದ ಸಂಗತಿ.

ದೇಶದ ಶೇ.20ರಷ್ಟು ಭಾಗದಲ್ಲಿ ಬರಗಾಲ
ದೇಶದಲ್ಲಿ ಒಂದೆಡೆ ಕೊರೊನಾ ವೈರಸ್ ವಿರುದ್ಧ ಎಲ್ಲರು ಹೋರಾಟ ನಡೆಸುತ್ತಿದ್ದರೆ, ಇನ್ನೊಂದೆಡೆ ದೇಶದ ಶೇ.20 ಭಾಗದಲ್ಲಿ ಬರ ತಾಂಡವವಾಡುತ್ತಿದೆ. ಗ್ರಾಮೀಣ ಭಾಗಗಳಲ್ಲಿ ಸರ್ಕಾರ ನೀಡುವ ಟ್ಯಾಂಕರ್ ನೀರಿಗೆ ಕಾದುಕುಳಿತಿದೆ ಪ್ರತಿನಿತ್ಯ 25 ಲೀಟರ್ ನೀರು ಒದಗಿಸಲಾಗುತ್ತದೆ. ಹೀಗಾಗಿ ಕುಡಿಯುವ ನೀರಿಗೆ ತತ್ವಾರವಿರುವಾಗ ಕೈಯನ್ನು ಹೇಗೆ ತೊಳೆಯುವುದು ಎನ್ನುವುದು ಜನರ ಅಳಲಾಗಿದೆ.

ದೆಹಲಿಯಲ್ಲಿ ನೀರಿನ ಪೈಪುಗಳಿಲ್ಲ
2012ರ ಸಮೀಕ್ಷೆಯ ವರದಿ ಪ್ರಕಾರ ದೆಹಲಿಯಲ್ಲಿ ಶೇ.82 ರಷ್ಟು ಪ್ರದೇಶಗಳಲ್ಲಿ ನೀರಿನ ಪೈಪ್‌ಗಳೇ ಇಲ್ಲ. ಸ್ಲಂಗಳು ಹಾಗೂ ಇತರೆ ಪ್ರದೇಶಗಳಲ್ಲಿ ಜನರು ನೀರಿನ ಪೈಪ್ ಇಲ್ಲದ ಕಾರಣ ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದಾರೆ.
ಲಾಕ್‌ಡೌನ್ ಆದಾಗಿನಿಂದ ಸಾಕಷ್ಟು ಭಾಗಗಳಲ್ಲಿ ನೀರು ಸಿಗುವುದಿಲ್ಲವೇ ಎಂಬ ಆತಂಕದಲ್ಲಿದ್ದಾರೆ. ಖಾಸಗಿ ಟ್ಯಾಂಕರ್‌ಗಳು ಹೆಚ್ಚುಚ್ಚು ಹಣ ವಸೂಲಿ ಮಾಡಿ ತಮ್ಮ ಬ್ಯುಸಿನೆಸ್ ಮಾಡಿಕೊಳ್ಳುತ್ತಿವೆ.

ಸಾಮಾಜಿಕ ಅಂತರಕ್ಕಿಂತ ನೀರು ಮುಖ್ಯ
ವಾಟರ್ ಟ್ಯಾಂಕರ್‌ಗಳು ಬಂದು ರಸ್ತೆಯ ಅಥವಾ ಹಳ್ಳಿಯ ಮಧ್ಯದಲ್ಲಿ ನಿಲ್ಲುತ್ತದೆ. ಆಗ ಜನರು ನೀರು ಪಡೆಯಲು ನಾ ಮುಂದು ತಾ ಮುಂದು ಎಂದು ಜಗಳವಾಡುತ್ತಾ ಟ್ಯಾಂಕರ್ ಸುತ್ತುವರೆದು ನಿಲ್ಲುತ್ತಾರೆ. ಆದರೆ ಅವರಿಗೆ ಆ ಸಂದರ್ಭದಲ್ಲಿ ಸಾಮಾಜಿಕ ಅಂತರವಲ್ಲ ನೀರು ಮಾತ್ರ ಮುಖ್ಯವಾಗಿರುತ್ತದೆ.












Click it and Unblock the Notifications