ಕೇಂದ್ರ ಸರ್ಕಾರಿ ಪಿಂಚಣಿದಾರರಿಗೆ ಒಳ್ಳೆ ಸುದ್ದಿ

Posted By:
Subscribe to Oneindia Kannada

ನವದೆಹಲಿ, ಏಪ್ರಿಲ್ 13: 2006 ಕ್ಕಿಂತ ಮುಂಚಿತವಾಗಿ ನಿವೃತ್ತರಾದ ವೇತನದಾರರಿಗೆ ಪಿಂಚಣಿ ಹೆಚ್ಚಳ ಮಾಡಿ ಕೇಂದ್ರ ಸರ್ಕಾರ ಅದೇಶ ನೀಡಿದೆ. ಪಿಂಚಣಿದಾರರಿಗೆ ಬಾಕಿ ಮೊತ್ತದ ಜೊತೆಗೆ ಹೆಚ್ಚುವರಿ ಪಿಂಚಣಿ ಸಿಗಲಿದೆ. ಆದರೆ, ಈ ಹೊಸ ನಿಯಮ 33 ವರ್ಷಕ್ಕಿಂತ ಕಡಿಮೆ ಅವಧಿ ಕರ್ತವ್ಯ ಸಲ್ಲಿಸಿ ನಿವೃತ್ತರಾದವರಿಗೆ ಅನ್ವಯವಾಗಲಿದೆ.

33 ವರ್ಷಕ್ಕಿಂತ ಕಡಿಮೆ ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾದವರಿಗೆ ಶೇ.50 ಕ್ಕಿಂತ ಕಡಿಮೆ ವೇತನ ನೀಡಬಾರದು ಎಂದು ಪಿಂಚಣಿ ಹೆಚ್ಚಳ ಮಾಡಲು ಪಿಂಚಣಿ ಮತ್ತು ನಿವೃತ್ತಿ ವೇತನದಾರರ ಕಲ್ಯಾಣ ಇಲಾಖೆ ನಿರ್ಧರಿಸಿದೆ. ಕೇಂದ್ರ ಸರಕಾರಿ ನೌಕರರು ಕನಿಷ್ಟ ಹತ್ತು ವರ್ಷಗಳ ಕಾಲ ಕರ್ತವ್ಯ ಪೂರೈಸಿದ್ದರೆ ನಿವೃತ್ತಿ ಪಿಂಚಣಿ ಪಡೆಯುವ ಅರ್ಹತೆ ಹೊಂದಿರುತ್ತಾರೆ.[ಸರ್ಕಾರಿ ನೌಕರರಿಗೆ ಸಿಹಿ ಸುದ್ದಿ ಕೊಟ್ಟ ಸರ್ಕಾರ]

Pension Hike Announced For Pre-2006 Central Government Retirees

ಹೊಸ ನಿಯಮದಂತೆ ಜನವರಿ 1, 2006ರ ನಂತರ ಪಿಂಚಣಿಯನ್ನು ಕಳೆದ ಹತ್ತು ತಿಂಗಳಲ್ಲಿ ಪಡೆದ ಸರಾಸರಿ ವೇತನ ಅಥವಾ ಮೂಲ ವೇತನವನ್ನು ಆಧರಿಸಿ ಕಂಡು ಹಿಡಿಯಲಾಗುತ್ತದೆ.[ಮಾಸಿಕ ಪಿಂಚಣಿ ಭಾಗ್ಯ ಬಡವರಿಗೆ ನೀಡಿ ಎಂದ ಬಿಗ್ ಬಿ]

ಈ ಮುಂಚೆ 2006 ಕ್ಕಿಂತ ಪೂರ್ವದಲ್ಲಿ 33 ವರ್ಷಕ್ಕಿಂತ ಪೂರ್ಣಗೊಳ್ಳುವ ಮೊದಲೇ ಸೇವೆಯಿಂದ ನಿವೃತ್ತಿಯಾದವರಿಗೆ ಒಟ್ಟು ಸೇವಾ ಅವಧಿಯಲ್ಲಿ ಅರ್ಧದಷ್ಟು ವರ್ಷವನ್ನು ಕಳೆದು ಪಿಂಚಣಿ ನೀಡಲಾಗುತ್ತಿತ್ತು. ಈಗ ಪರಿಷ್ಕೃತ ಪಿಂಚಣಿ ಬಾಕಿಯನ್ನು ಜನವರಿ 1 2006 ರಿಂದ ಕೊಡಬೇಕಾಗುತ್ತದೆ ಎಂದು ಏಪ್ರಿಲ್ 06 ರಂದು ಸರಕಾರಕ್ಕೆ ಆದೇಶ ನೀಡಿದೆ.[ಏಕಶ್ರೇಣಿ ಏಕ ಪಿಂಚಣಿ ಯೋಜನೆ ಜಾರಿಗೊಳಿಸಿದ ಎನ್ ಡಿಎ]

ಪರಿಷ್ಕೃತ ಪಿಂಚಣಿ ಪಾವತಿ ಎಲ್ಲಾ ಸಚಿವಾಲಯಗಳಲ್ಲಿ ಅನ್ವಯವಾಗಲಿದ್ದು, ಅಧಿಕೃತ ಆದೇಶ ಸದ್ಯದಲ್ಲೇ ಹೊರ ಬರಲಿದೆ. (ಪಿಟಿಐ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pre-2006 pensioners will now get a hike in pension, in addition to the arrears, as the Centre has done away with a provision of having 33-year service for earning full pension.
Please Wait while comments are loading...