ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಹಿಳೆ ಮೇಲೆ ಮೂತ್ರ ವಿಸರ್ಜನೆ: ಏರ್‌ ಇಂಡಿಯಾಗೆ 30 ಲಕ್ಷ ರೂ.ದಂಡ, ಪೈಲೆಟ್ಸಗಳ ಪರವಾನಿಗೆ ಅಮಾನತು

|
Google Oneindia Kannada News

ನವದೆಹಲಿ, ಜನವರಿ 20: ಕುಡಿದ ಮತ್ತಿನಲ್ಲಿ ಸಹ ಮಹಿಳಾ ಪ್ರಯಾಣಿಕರ ಮೇಲೆ ಮೂತ್ರ ವಿಸರ್ಜಿಸಿದ ಪ್ರಕರಣದಲ್ಲಿ ಏರ್‌ ಇಂಡಿಯಾಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA)ವು 30 ಲಕ್ಷ ರೂ. ದಂಡ ವಿಧಿಸಿದೆ. ಜೊತೆಗೆ ತಮ್ಮ ಕರ್ತವ್ಯ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ ಎಂದು ನ್ಯೂಯಾರ್ಕ್ ಮತ್ತು ದೆಹಲಿ ವಿಮಾನದ ಫೈಲಟ್ ಇನ್‌ಚಾರ್ಜ್ ಅಧಿಕಾರಿಯ ಪರವಾನಿಗೆಯನ್ನು ಮೂರು ತಿಂಗಳು ಅಮಾನತು ಮಾಡಿದೆ.

ಅಷ್ಟೇ ಅಲ್ಲದೇ ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯ (DGCA)ವು ಕರ್ತವ್ಯದ ಅಸಮರ್ಪಕ ನಿರ್ವಹಣೆ ಎಂದು ತಿಳಿಸಿ ಏರ್ ಇಂಡಿಯಾದ ಡೈರೆಕ್ಟರ್-ಇನ್-ಫ್ಲೈಟ್ ಸೇವೆಗಳಿಗೆ ಮೂರು ಲಕ್ಷ ರೂಪಾಯಿ ದಂಡ ಹೇರಿದೆ.

2022ರಲ್ಲಿ ನವೆಂಬರ್ 26 ರಂದು ಚಲಿಸುತ್ತಿದ್ದ ದೆಹಲಿ-ನ್ಯೂಯಾರ್ಕ್‌ ಏರ್‌ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕ ಶಂಕರ್ ಮಿಶ್ರಾ ಎಂಬಾತ ಕುಡಿದ ಮತ್ತಿನಲ್ಲಿ ಸಹ ಮಹಿಳಾ ಪ್ರಯಾಣಿಕವೊಬ್ಬರ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದ. ಈ ಘಟನೆ ಭಾರಿ ಸುದ್ದಿಯಾಗಿತ್ತು. ಹೀಗಾಗಿ ಆರೋಪಿ ಮಿಶ್ರಾ ಮೇಲೆ ವಿಮಾನಯಾನ ಸಂಸ್ಥೆಯು ನಾಲ್ಕು ತಿಂಗಳ ಹಾರಾಟ ನಿಷೇಧ ವಿಧಿಸಿತ್ತು. ಮಹಾ ನಿರ್ದೇಶನಾಲಯ ಹೇರಿದ್ದ ದಂಡ ನಂತರ ಇದೀಗ ಮಿಶ್ರಾ ಮೇಲಿನ ನಿಷೇದ ಮತ್ತೆ ಒಂದು ತಿಂಗಳು ವಿಸ್ತರಿಸಲಾಗಿದೆ.

Pee Incident In flight: DGCA fined To Air India 30 Lakh, Pilots Licence Suspended For 3 Months

ಘಟನೆಗೆ ಸಂಬಂಧಿಸಿದಂತೆ ಮಹಾ ನಿರ್ದೇಶನಾಲಯವು ಏರ್ ಇಂಡಿಯಾದ ವ್ಯವಸ್ಥಾಪಕರು, ಏರ್ ಇಂಡಿಯಾ ಸಂಸ್ಥೆಯ ವಿಮಾನಯಾನ ಸೇವೆಗಳ ನಿರ್ದೇಶಕರು ಹಾಗೂ ಆ ವಿಮಾನದ ಎಲ್ಲಾ ಪೈಲಟ್‌ಗಳು ಮತ್ತು ಕ್ಯಾಬಿನ್ ಸಿಬ್ಬಂದಿ ವಿರುದ್ಧ ಶೋಕಾಸ್ ನೋಟಿಸ್ ನೀಡಿತ್ತು. ಕೈಗೊಳ್ಳಬೇಕಾದ ಕ್ರಮ ಕುರಿತು ಎರಡು ವಾರಗಳಲ್ಲಿ ಉತ್ತರಿಸುವಂತೆ ಕಾಲಾವಕಾ ನೀಡಿತ್ತು.

ಆರೋಪ ನಿರಾಕರಿಸಿದ ಮಿಶ್ರಾ

ಇತ್ತ ಘಟನೆ ನಂತರ ಹಲವು ದಿನಗಳ ಬಳಿ ಸಿಕ್ಕ ಶಂಕರ್ ಮಿಶ್ರಾ ಅವರು, ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದರು. ಮಹಿಳೆಯೇ ಸ್ವತಃ ಮೂತ್ರ ವಿಸರ್ಜನೆ ಮಾಡಿದ್ದಾರೆ ಎಂದು ತಿಳಿಸಿದ್ದರು. ಈ ಬಗ್ಗೆ ಮಹಿಳೆ ಸುಳ್ಳು ಮತ್ತು ವಿನಾಃ ಕಾರಣ ಆರೋಪ ಹೊರಿಸಿದ್ದಾರೆ ಎಂದಿದ್ದರು.

ಘಟನೆ ಸಂಬಂಧ ಪ್ರತಿಕ್ರಿಯಿಸಿದ್ದ ಟಾಟಾ ಗ್ರೂಪ್ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು, ವಿಮಾನದಲ್ಲಿ ನಡೆದ ಘಟನೆ ಕುರಿತಂತೆ ಏರ್ ಇಂಡಿಯಾದ ತೀಕ್ಷ್ಣ ಕ್ರಮಗಳ ಘೋಷಣೆ ಬಗ್ಗೆ ನಿರೀಕ್ಷೆ ಇತ್ತು. ಆದರೆ ಕ್ರಮಗಳ ಬದಲಿಗೆ ವಿಮಾನದಲ್ಲಿ ಆಲ್ಕೋಹಾಲ್ ಸೇವೆಯ ನೀತಿ ಮರು ಪರಿಶೀಲಿಸುತ್ತೇವೆ ಎನ್ನುವ ಜೊತೆಗೆ ಏರ್ ಇಂಡಿಯಾ ಘಟನೆ ಕುರಿತು ಕ್ಷಮೆಯಾಚಿಸಿತು ಎಂದರು.

Pee Incident In flight: DGCA fined To Air India 30 Lakh, Pilots Licence Suspended For 3 Months

ನ್ಯೂಯಾರ್ಕ್‌ನಿಂದ ಏರ್‌ ಇಂಡಿಯಾ ಭಾರತಕ್ಕೆ ಬಂದ ನಂತರ ಘಟನೆ ಕುರಿತು ಶಂಕರ್ ಮಿಶ್ರಾ ನವೆಂಬರ್ 27 ರಂದು ಏರ್ ಇಂಡಿಯಾ ಗ್ರೂಪ್ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ. ಇಷ್ಟಕ್ಕೆ ಎಲ್ಲವೂ ಮುಗಿಯಿತು ಎನ್ನವಷ್ಟರಲ್ಲಿ ಆರು ವಾರಗಳ ನಂತರ ಮಿಶ್ರಾನನ್ನು ಪೊಲೀಸರು ಬಂಧಿಸಿದ್ದರು.

English summary
Pee incident in flight: Directorate General of Civil Aviation (DGCA) fined to Air India 30 Lakh, Pilot's Licence Suspended For 3 Months
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X