'ಕಾಶ್ಮೀರ ಇದ್ದೇ ಇರುತ್ತೆ ಆದರೆ ಪಾಕಿಸ್ತಾನವಂತೂ ಇರಲ್ಲ'

Written By: Ramesh
Subscribe to Oneindia Kannada

ನವದೆಹಲಿ, ಸೆ. 20 : ಉತ್ತರ ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ಪಾಕಿಸ್ತಾನಿ ಉಗ್ರರು ನಡೆಸಿದ ದಾಳಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಈ ಅಮಾನುಷ ಕೃತ್ಯಕ್ಕೆ ಕಾರಣವಾದ ಪಾಕಿಸ್ತಾನಕ್ಕೆ ಭಾರತದ ಯೋಧರು ವಿಡಿಯೋ ಮೂಲಕ ಪಾಕಿಸ್ತಾನಕ್ಕೆ ಎಚ್ಚರಿಕೆಯ ಸಂದೇಶವನ್ನು ರವಾನಸಿದ್ದಾರೆ.[ಜಮ್ಮು: 17 ಯೋಧರು ಹುತಾತ್ಮ, 4 ಉಗ್ರರು ಹತ್ಯೆ]

ಈ ವಿಡಿಯೋದಲ್ಲಿ ಹೆಡ್ ಕಾನ್ಸ್ ಟೆಬಲ್ ಮನೋಜ್ ಕುಮಾರ್ ಜುಲೈ 26 ರಂದು ಹೇಳಿರುವ ಮಾತಿನಲ್ಲಿ ಒಂದೊಂದು ಸಾಲಿನಲ್ಲಿ ಪಾಕ್ ಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಈ ವಿಡಿಯೋ ಈಗ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತ ಸೈನಿಕರು ಪಾಕ್ ಗೆ ನೀಡಿದ ಈ ವಿಡಿಯೋ ಸಂದೇಶ.

Indian soldier

"ನಾವು ಸಿಂಹಗಳು. ಸಿಂಹಗಳು ಯಾರಿಗೂ ಹೆದರುವುದಿಲ್ಲ. ಹೋಗಿ ಹೇಳಿ ಆ ಪಾಕಿಸ್ತಾನಿಗಳಿಗೆ. ನಾವು ಆಟಂ ಬಾಂಬ್ ಗಳಿಗೆ ಹೆದರಲ್ಲ. ಪಾಕಿಸ್ತಾನ ನಮ್ಮ ಎದುರು ಸೋತಿದ್ದನ್ನು ಮರೆತಿರಬಹುದು. ಪಾಕಿಸ್ತಾನ ಕಿವಿ ತೆರೆದು ಕೆಳಿಸಿಕೋ ಕಾಶ್ಮೀರವಂತೂ ಇದ್ದೇ ಇರುತ್ತೆ ಆದ್ರೆ ಪಾಕಿಸ್ತಾನವಂತೂ ಇರಲ್ಲ".

ಇಡೀ ವಿಶ್ವಕ್ಕೆ ಗೊತ್ತು ಪಾಕಿಸ್ತಾನದ ಕರಾಮತ್ತು, ನಿಮ್ಮದು ಅತಿಯಾಯ್ತು. ಇದೆಲ್ಲಾ ಒಳ್ಳೇದಲ್ಲ ನಾವು ಒಳಗೆ ನುಗ್ಗಿದ್ರೆ ಪಾಕಿಸ್ತಾನದಲ್ಲಿ ಪ್ರಳಯವೇ ಆಗುತ್ತೆ. ನೀವು ನೆನಪಿಟ್ಟುಕೊಳ್ಳಿ ಯಾವತ್ತೂ ಕಾಶ್ಮೀರ ನಮ್ಮದೇ. ಸಿಂಧು ನದಿ ಅಕ್ಕಪಕ್ಕದ ಜಾಗವೆಲ್ಲಾ ಭಾರತದ್ದಾಗಲಿದೆ. ಯುಗಯುಗಗಳೇ ಕಳೆದರೂ ಮಹಮದ್ ಅಲಿ ಜಿನ್ನಾನಂತಹ ಸೈತಾನ್ ಇನ್ನೊಬ್ಬನಿಲ್ಲ".

ಎಂದೆಲ್ಲಾ ಹೇಳಿ ಪಾಕಿಸ್ತಾನಕ್ಕೆ ಖಡಕ್ ಆಗಿಯೇ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ. ಈಗ ಈ ವಿಡಿಯೋ ವಾಟ್ಸಪ್ ಫೇಸ್ ಬುಕ್ ಗಳಲ್ಲಿ ವೈರಲ್ ಆಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Indian soldier singing a popular patriotic poem, is winning over the Internet. The video shows a soldier in a bus giving an extremely enthusiastic message and is accompanied by others in uniform.
Please Wait while comments are loading...