ಪಠಾಣ್ ಕೋಟ್‌ನಲ್ಲಿ ಪಾಕ್ ತಂಡ : ಎಲ್ಲಿಗೆ ಭೇಟಿ ಕೊಡಲು ಅನುಮತಿ?

By: ವಿಕಾಸ್ ನಂಜಪ್ಪ
Subscribe to Oneindia Kannada

ಬೆಂಗಳೂರು, ಮಾರ್ಚ್ 29 : ಪಠಾಣ್ ಕೋಟ್ ವಾಯುನೆಲೆ ಮೇಲಿನ ಉಗ್ರರ ದಾಳಿಯ ತನಿಖೆ ನಡೆಸಲು ಪಾಕಿಸ್ತಾನದ ತಂಡ ವಾಯುನೆಲೆಗೆ ಆಗಮಿಸಿದೆ. ಐವರು ಸದಸ್ಯರ ಪಾಕಿಸ್ತಾನದ ತನಿಖಾ ತಂಡ (ಜೆಐಟಿ)ಕ್ಕೆ ವಾಯುನೆಲೆ ಪ್ರವೇಶಿಸಲು ಬಿಡಬಾರದು ಎಂದು ಪಂಜಾಬ್‌ನಲ್ಲಿ ಪ್ರತಿಭಟನೆ ನಡೆಯುತ್ತಿದೆ.

ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಮತ್ತು ಪಾಕ್‌ನ ಜೆಐಟಿ ತಂಡದ ಸದಸ್ಯರು ಅಮೃತಸರ ವಿಮಾನ ನಿಲ್ದಾಣದಿಂದ ಗುಂಡು ನಿರೋಧಕ ವಾಹನದಲ್ಲಿ ಪಠಾಣ್ ಕೋಟ್ ವಾಯುನೆಲೆಗೆ ಆಗಮಿಸಿದ್ದಾರೆ. ವಾಯುನೆಲೆಯ ಕೆಲವು ಪ್ರದೇಶಗಳಿಗೆ ಮಾತ್ರ ಪಾಕ್ ತಂಡ ಭೇಟಿ ನೀಡಬಹುದಾಗಿದೆ. [ಪಠಾಣ್ ಕೋಟ್ ದಾಳಿ : ಉಗ್ರರ ಚಿತ್ರ ಬಿಡುಗಡೆ]

ಎನ್‌ಐಎ ಅಧಿಕಾರಿಗಳು ಪಾಕ್ ತಂಡ ವಾಯುನೆಲೆಯ ಯಾವ ಪ್ರದೇಶದ ಪರಿಶೀಲನೆ ನಡೆಸಬೇಕು, ಎಲ್ಲಿಗೆ ಪ್ರವೇಶಿಸಬಾರದು ಎಂಬ ಪಟ್ಟಿ ಸಿದ್ಧಪಡಿಸಿದೆ. ಅದರ ವಿವರಗಳು ಇಲ್ಲಿವೆ. [ಪಠಾಣ್ ಕೋಟ್ ದಾಳಿ : ತನಿಖೆಗೆ ಬಂತು ಪಾಕ್ ತಂಡ]

* ಉಗ್ರರು ವಾಯುನೆಲೆ ಪ್ರವೇಶಿಸಲು ಬಳಸಿದ ಕಾಪೌಂಡ್ ಗೋಡೆ ಪರಿಶೀಲನೆಗೆ ಅವಕಾಶವಿದೆ.

pathankot

* ಉಗ್ರರ ದಾಳಿಗೆ ಒಳಗಾಗದ ವಾಯುನೆಲೆ ಪ್ರದೇಶಕ್ಕೆ ಪಾಕ್ ತಂಡ ಕಾಲಿಡುವಂತಿಲ್ಲ. ಪಾಕ್ ತಂಡ ಭೇಟಿ ನೀಡುವ ಜಾಗ ಹೊರತು ಪಡಿಸಿ ಉಳಿದ ಸ್ಥಳಗಳಲ್ಲಿ ಕೆಂಪು, ಬಿಳಿ ಬಟ್ಟೆಗಳಿಂದ ಮುಚ್ಚಲಾಗಿದೆ. [ಪಠಾಣ್ ಕೋಟ್ ವಾಯುನೆಲೆಯ ವಿಶೇಷತೆಗಳೇನು?]

* ವಾಯುನೆಲೆ ಮೇಲೆ ದಾಳಿ ಮಾಡಿದ ಉಗ್ರರು ಉಳಿದುಕೊಂಡಿದ್ದ ಕಟ್ಟಡ ಪರಿಶೀಲನೆ ನಡೆಸಬಹುದು.

* ರಕ್ಷಣಾ ಇಲಾಖೆಯ ಅಧಿಕಾರಿಗಳು ವಾಸ್ತವ್ಯ ಹೂಡಿದ ಕಟ್ಟಡದ ಪರಿಶೀಲನೆ ನಡೆಸಬಹುದು. ಅದರ ಮೇಲೆ ಉಗ್ರರು ದಾಳಿ ನಡೆಸಿದ್ದರು.

* ವಾಯುನೆಲೆ ಪ್ರವೇಶಕ್ಕೂ ಮುನ್ನಾ ಟ್ಯಾಕ್ಸಿ ಚಾಲಕ ಇಕಾಗರ್ ಸಿಂಗ್ ನನ್ನು ಉಗ್ರರು ಹತ್ಯೆ ಮಾಡಿದ್ದರು. ಆ ಸ್ಥಳಕ್ಕೆ ಭೇಟಿ ನೀಡಬಹುದು. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

* ಗುರುದಾಸ್ ಪುರ ಎಸ್ಪಿ ಸಲ್ವಿಂದರ್ ಸಿಂಗ್ ಅಪಹರಣವಾದ ಜಾಗಕ್ಕೆ ಭೇಟಿ ಕೊಡಬಹುದು.

* ಉಗ್ರರ ನಿಗ್ರಹ ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎನ್‌ಎಸ್‌ಜಿ, ಬಿಎಸ್‌ಎಫ್, ಎಎಫ್ ಸಿಬ್ಬಂದಿಯನ್ನು ಪ್ರಶ್ನೆ ಮಾಡುವಂತಿಲ್ಲ.

* ಎಸ್ಪಿ ಸಲ್ವಿಂದರ್ ಸಿಂಗ್, ಅವರ ಸ್ನೇಹಿತ ರಾಜೇಶ್ ವರ್ಮಾ, ಅಡುಗೆ ಸಹಾಯಕ ಮದನ್ ಗೋಪಾಲ್ ವಿಚಾರಣೆಗೆ ಅವಕಾಶವಿದೆ. ಉಗ್ರರ ದಾಳಿಯಲ್ಲಿ ಗಾಯಗೊಂಡ 17 ಜನರನ್ನು ಪ್ರಶ್ನಿಸಲು ಅವಕಾಶ ನೀಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Joint Investigation Team is at Pathankot to probe the terror attack on the air force station. The team which arrived at Pathankot amidst protests by the Congress and the Aam Admi Party have a stringent set of rules to follow. An NIA official part of the Pathankot probe tells OneIndia that only select areas will be accessible. There are steps taken to ensure that he also added.
Please Wait while comments are loading...