ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಠಾಣ್ ಕೋಟ್ ದಾಳಿ : ಪಾಕಿಸ್ತಾನದಿಂದ ಮಾಹಿತಿ ಬೇಕಾಗಿದೆ

By ವಿಕಾಸ್ ನಂಜಪ್ಪ
|
Google Oneindia Kannada News

ಬೆಂಗಳೂರು, ಜನವರಿ 07 : ಪಠಾಣ್ ಕೋಟ್ ವಾಯುನೆಲೆ ಮೇಲಿನ ದಾಳಿಯ ತನಿಖೆ ನಡೆಸುತ್ತಿರುವ ಎನ್‌ಐಎ, ಪ್ರಾಥಮಿಕ ತನಿಖಾ ವರದಿಯನ್ನು ಕೇಂದ್ರ ಗೃಹ ಇಲಾಖೆಗೆ ಸಲ್ಲಿಕೆ ಮಾಡಿದೆ. ಉಗ್ರರ ಬಗ್ಗೆ ಮಾಹಿತಿ ಸಂಗ್ರಹಣೆ ಮಾಡಲು ಪಾಕಿಸ್ತಾನದ ನೆರವು ಬೇಕಾಗಿದೆ ಎಂದು ವರದಿಯಲ್ಲಿ ಹೇಳಿದೆ.

ಬುಧವಾರ ಎನ್‌ಐಎ ಭಾರತ-ಪಾಕಿಸ್ತಾನ ಗಡಿ ಪ್ರದೇಶದಕ್ಕೆ ಭೇಟಿ ನೀಡಿತ್ತು. ಉಗ್ರರು ಭಾರತಕ್ಕೆ ಬರಲು ಬಳಸಿದ ಮಾರ್ಗದ ಬಗ್ಗೆ ತನಿಖೆ ನಡೆಸಿತ್ತು. ಈ ಭೇಟಿಯ ಬಳಿಕ ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿ ಗೃಹ ಇಲಾಖೆಗೆ ಸಲ್ಲಿಕೆ ಮಾಡಿದೆ. [ಸಂದರ್ಶನ : ಪಠಾಣ್ ಕೋಟ್ ದಾಳಿ ಬಗ್ಗೆ ದೂರುವುದು ಬಿಡಿ]

pathankot

ಪಾಕಿಸ್ತಾನದಿಂದಲೇ ಬಂದಿದ್ದಾರೆ : ಕೇಂದ್ರ ಗೃಹ ಇಲಾಖೆ ವಾಯುನೆಲೆ ಮೇಲಿನ ದಾಳಿಯ ತನಿಖೆ ನಡೆಸುವಂತೆ ಎನ್‌ಐಎಗೆ ಸೂಚನೆ ನೀಡಿತ್ತು. ಆದ್ದರಿಂದ, ಎನ್‌ಐಎ ತನ್ನ ಪ್ರಾಥಮಿಕ ವರದಿಯನ್ನು ಇಲಾಖೆಗೆ ಸಲ್ಲಿಕೆ ಮಾಡಿದ್ದು, ವಾಯುನೆಲೆ ಮೇಲೆ ದಾಳಿ ಮಾಡಿರುವ ಉಗ್ರರು ಪಾಕಿಸ್ತಾನದಿಂದಲೇ ಬಂದಿದ್ದಾರೆ ಎಂದು ಹೇಳಿದೆ. [ಪಠಾಣ್ ಕೋಟ್ ಉಗ್ರರ ದಾಳಿ : ಟೈಮ್ ಲೈನ್]

ವಾಯುನೆಲೆ ಮೇಲಿನ ದಾಳಿಗೂ ಮೊದಲು ಉಗ್ರರು ಪಾಕಿಸ್ತಾನದಲ್ಲಿರುವವರ ಜೊತೆ ಮಾತನಾಡಿರುವುದು ಪತ್ತೆಯಾಗಿದೆ. ಉಗ್ರರ ಬಗ್ಗೆ ಮಾಹಿತಿ ನೀಡುವಂತೆ ಪಾಕಿಸ್ತಾನಕ್ಕೆ ಪತ್ರ ಬರೆಯಬೇಕು ಎಂದು ಎನ್‌ಐಎ ತನ್ನ ವರದಿಯಲ್ಲಿ ಗೃಹ ಇಲಾಖೆಗೆ ಮನವಿ ಮಾಡಿದೆ.

ಉಗ್ರರ ಧ್ವನಿ ಮತ್ತು ಡಿಎನ್‌ಎ ಪರೀಕ್ಷೆಗೆ ಪಾಕಿಸ್ತಾನದ ನೆರವಿನ ಅಗತ್ಯವಿದೆ. ದಾಳಿಗೂ ಮುನ್ನ ಉಗ್ರರು ಪಾಕಿಸ್ತಾನಕ್ಕೆ ಮಾಡಿದ ಕರೆಗಳ ವಿವರಗಳನ್ನು ಸಂಗ್ರಹಿಸಲಾಗಿದೆ. ಕುಟುಂಬದವರೊಟ್ಟಿಗೆ ಉಗ್ರರು ಮಾತನಾಡಿರುವುದು ತನಿಖೆಯಿಂದ ಬಹಿರಂಗಗೊಂಡಿದೆ ಎಂದು ವರದಿಯಲ್ಲಿ ತಿಳಿಸಿದೆ.

ಮಹಿಳೆಯ ಬಗ್ಗೆ ಮಾಹಿತಿ ಕೊಡಿ : ಉಗ್ರನೊಬ್ಬ ಭಾರತದಿಂದ ಪಾಕಿಸ್ತಾನದಲ್ಲಿರುವ ಮಹಿಳೆಗೆ ಕರೆ ಮಾಡಿ ಮಾತನಾಡಿದ್ದಾನೆ. ದಾಳಿಗೂ ಮುನ್ನ ಕರೆ ಮಾಡಿದ್ದ ಉಗ್ರ ತಾನು ಆತ್ಮಹತ್ಯಾ ದಾಳಿಯಲ್ಲಿ ಸಾವನ್ನಪ್ಪುತ್ತೇನೆ ಎಂದು ಮಹಿಳೆಗೆ ಹೇಳಿರುವ ಕರೆಯ ಮಾಹಿತಿಯನ್ನು ಕೇಂದ್ರ ಗುಪ್ತಚರ ಇಲಾಖೆ ಸಂಗ್ರಹ ಮಾಡಿದೆ. ಈ ಮಹಿಳೆ ಬಗ್ಗೆ ವಿವರ ನೀಡುವಂತೆ ಪಾಕ್‌ಗೆ ಮನವಿ ಮಾಡಲಾಗುತ್ತದೆ.

ಉಗ್ರರು ಅಪಹರಿಸಿದ್ದ ಗುರುದಾಸ್‌ಪುರ ಎಸ್ಪಿ ಸಲ್ವಿಂದರ್ ಸಿಂಗ್ ಅವರನ್ನು ತನಿಖೆಯ ವೇಳೆ ಸಾಕ್ಷಿಯಾಗಿ ಪರಿಗಣನೆ ಮಾಡಲಾಗಿದೆ. ಉಗ್ರರು ಅಪಹರಣ ಮಾಡಿದ್ದ ಎಸ್ಪಿ ಕಾರನ್ನು ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ಮಾಹಿತಿಯನ್ನು ಸಂಗ್ರಹಣೆ ಮಾಡಬೇಕಾಗಿದೆ ಎಂದು ವರದಿ ಹೇಳಿದೆ.

English summary
The National Investigating Agency has submitted a report on its initial findings on the Pathankot terror attack to the Ministry of Home Affairs. NIA had visited a village along the Indo-Pak border to investigate the route taken by the terrorists before entering Pathankot.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X