ಪಠಾಣ್ ವಿವಾದ: ಸರ್ಕಾರದ ಮಧ್ಯಸ್ಥಿಕೆ ಕೋರಿದ ಗುಜರಾತ್‌ನ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್

ದೆಹಲಿ ಜನವರಿ 17: ಪಠಾಣ್ ಚಿತ್ರದ ಬೇಷರಂ ರಂಗ್ ಹಾಡು ಬಿಡುಗಡೆಯಾದಾಗಿನಿಂದ ಶಾರೂಕ್ ಖಾನ್ ವಿರುದ್ಧ ವಿವಾದ ಬೆನ್ನತ್ತಿ ಹೋಗುತ್ತಲೇ ಇದೆ. ಶಾರೂಕ್ ಖಾನ್ ವಿರುದ್ಧ ಮುಸ್ಲಿಂ ಸಂಘಟನೆಗಳು ಸಹ ಅಪಸ್ವರ ಎತ್ತಿವೆ. ಈ ನಡುವೆ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ಪ್ರದರ್ಶನದ ವಿರುದ್ಧ ಹಲವಾರು ಚಿತ್ರಮಂದಿರಗಳಿಗೆ ಬೆದರಿಕೆಗಳು ಬಂದಿರುವುದರಿಂದ ಗುಜರಾತ್‌ನ ಮಲ್ಟಿಪ್ಲೆಕ್ಸ್ ಅಸೋಸಿಯೇಷನ್ ಸರ್ಕಾರದ ಮಧ್ಯಸ್ಥಿಕೆಯನ್ನು ಕೋರಿದೆ. ಜನವರಿ 25 ರಂದು ಚಿತ್ರ ಬಿಡುಗಡೆಯಾಗುವ ಸಂದರ್ಭದಲ್ಲಿ ಚಿತ್ರಮಂದಿರಗಳಿಗೆ ಭದ್ರತೆ ಒದಗಿಸುವಂತೆ ಮಲ್ಟಿಪ್ಲೆಕ್ಸ್‌ಗಳು ರಾಜ್ಯ ಗೃಹ ಸಚಿವ ಹರ್ಷ ಸಂಘವಿ ಅವರನ್ನು ಒತ್ತಾಯಿಸಿವೆ.

ಅಸೋಸಿಯೇಷನ್ ತನ್ನ ಪತ್ರದಲ್ಲಿ ಕಳೆದ 20 ದಿನಗಳಲ್ಲಿ ಬಹುತೇಕ ಸಿನಿಮಾ ಪ್ರದರ್ಶಕರು ಪಠಾಣ್ ಸಿನಿಮಾವನ್ನು ಪ್ರದರ್ಶಿಸದಂತೆ ಮೌಖಿಕ ಮತ್ತು ಲಿಖಿತ ನೇರ ಮತ್ತು ಪರೋಕ್ಷ ಬೆದರಿಕೆಗಳನ್ನು ಸ್ವೀಕರಿಸಿದ್ದಾರೆ. ಚಿತ್ರದಲ್ಲಿ ಲೋಪವಿದ್ದರೆ ಅದನ್ನು ಸರಿಪಡಿಸಲು ನೇರಾನೇರ ಮಾತುಕತೆ ನಡೆಸುವುದು ಉತ್ತಮ ಆದರೆ ಈ ರೀತಿ ಬೆದರಿಕೆಗಳು ಸಮಂಜಸವಲ್ಲ ಎಂದು ಮಲ್ಟಿಪ್ಲೆಕ್ಸ್‌ಗಳು ಹೇಳಿವೆ.

Pathan release threatened: Gujarats multiplex association seeks government intervention

"ಪಠಾಣ್ ಚಲನಚಿತ್ರವನ್ನು ಪ್ರದರ್ಶಿಸಿದರೆ ಸಿಬ್ಬಂದಿ ಮತ್ತು ಚಲನಚಿತ್ರ ಪ್ರೇಕ್ಷಕರ ಸುರಕ್ಷತೆ ಬಗ್ಗೆ ಹಾಗೂ ಚಲನಚಿತ್ರ ಪ್ರದರ್ಶಕರಿಗೆ ಕಾನೂನುಬಾಹಿರವಾಗಿ ಬೆದರಿಕೆ ಹಾಕಲಾಗುತ್ತಿದೆ. ತಮ್ಮ ಅಜೆಂಡಾಗಳ ಆಧಾರದ ಮೇಲೆ ಚಲನಚಿತ್ರ ಪ್ರದರ್ಶಕರನ್ನು ಗುರಿಯಾಗಿಸುವ ಹಲವಾರು ಗುಂಪುಗಳಿವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ. "ಆದ್ದರಿಂದ ನಾವು ನಮ್ಮ ಆಸ್ತಿಗಳು ಮತ್ತು ವ್ಯವಹಾರದ ಆಸಕ್ತಿಯನ್ನು ರಕ್ಷಿಸುವ ಬಗ್ಗೆ ನಿಮ್ಮ ಕಡೆಯಿಂದ ಎಲ್ಲಾ ರೀತಿಯ ಬೆಂಬಲವನ್ನು ಕೋರುತ್ತೇವೆ" ಎಂದು ಪತ್ರದಲ್ಲಿ ತಿಳಿಸಲಾಗಿದೆ.

ಡಿಸೆಂಬರ್ 12 ರಂದು ದೀಪಿಕಾ ಪಡುಕೋಣೆ ಅಭಿನಯದ ಪಠಾಣ್ ಸಿನಿಮಾದ ಬೇಶರಂ ರಂಗ್ ಹಾಡನ್ನು ಬಿಡುಗಡೆ ಮಾಡಲಾಯಿತು. ಪಠಾಣ್ ಸಿನಿಮಾ ವಿವಾದವನ್ನು ಎದುರಿಸುತ್ತಿದೆ. ಜೊತೆಗೆ ಸಿನಿಮಾವನ್ನು ನಿಷೇಧಕ್ಕೆ ಹಲವಾರು ಕರೆ ಬಂದಿವೆ.

Pathan release threatened: Gujarats multiplex association seeks government intervention

ಕೇಸರಿ ಬಿಕಿನಿಯಲ್ಲಿ ದೀಪಿಕಾಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಇದು "ಹಿಂದೂ ಭಾವನೆಗಳನ್ನು" ಘಾಸಿಗೊಳಿಸಿದೆ ಎಂದು ಆರೋಪಿಸಿ ಭಾರತದಾದ್ಯಂತ ಪ್ರತಿಭಟನೆ ನಡೆದಿವೆ. ಜೊತೆಗೆ ಪಠಾಣ್ ಸಿನಿಮಾ ಪ್ರದರ್ಶಿಸದಂತೆ ಒತ್ತಡಗಳನ್ನು ಹಾಕಲಾಗಿದೆ. ಜಾನ್ ಅಬ್ರಹಾಂ ಸಹ ನಟಿಸಿರುವ ಪಠಾನ್ ಜನವರಿ 25 ರಂದು ಥಿಯೇಟರ್‌ಗಳಿಗೆ ಬರಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+