ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪತಂಜಲಿ ಸಿಇಒ ಬಾಲಕೃಷ್ಣ ಭಾರತದ 8ನೇ ಅತಿ ದೊಡ್ಡ ಶ್ರೀಮಂತ!

|
Google Oneindia Kannada News

Recommended Video

Patanjali CEO Acharya Balakrishna is India's 8th richest man | Oneindia Kannada

ಮುಂಬೈ, ಸೆಪ್ಟೆಂಬರ್ 26: ಪತಂಜಲಿ ಕಂಪನಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿರುವ (ಸಿಇಒ) ಆಚಾರ್ಯ ಬಾಲಕೃಷ್ಣ ಅವರು, ಹುರೂನ್ ಸಂಸ್ಥೆ ತಯಾರಿಸಿರುವ ಭಾರತದ 2017ನೇ ವರ್ಷದ ಅತಿ ಶ್ರೀಮಂತರ ಪಟ್ಟಿಯಲ್ಲಿ 8ನೇ ಸ್ಥಾನ ಗಳಿಸಿದ್ದಾರೆ.

ಕಳೆದ ವರ್ಷ ಪ್ರಕಟಗೊಂಡಿದ್ದ ಹುರೂನ್ ಟಾಪ್ 10 ಭಾರತೀಯ ಶ್ರೀಮಂತರ ಪಟ್ಟಿಯಲ್ಲಿ ಬಾಲಕೃಷ್ಣ ಅವರು, 25ನೇ ಸ್ಥಾನ ಪಡೆದಿದ್ದರು.

ಪತಂಜಲಿ ಹೆಸರಲ್ಲಿ ಉಡುಪಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆಪತಂಜಲಿ ಹೆಸರಲ್ಲಿ ಉಡುಪಿ ವ್ಯಕ್ತಿಗೆ ಲಕ್ಷಾಂತರ ರೂ. ವಂಚನೆ

ಈ ಒಂದು ವರ್ಷದಲ್ಲಿ ಅವರ ಆಸ್ತಿ ಪ್ರಮಾಣ ಶೇ. 173ರಷ್ಟು ಏರಿಕೆ ಕಂಡಿದ್ದು, ಈಗ ಅದರ ಮೌಲ್ಯ 70 ಸಾವಿರ ಕೋಟಿ ರು. ಎಂದು ಅಂದಾಜಿಸಲಾಗಿದೆ.

Patanjali CEO Balkrishna ranked 8th richest with Rs 70,000 crore wealth

ಅವರು ಸ್ಥಾಪಿಸಿರುವ ಪತಂಜಲಿ ಕಂಪನಿಯು ವಾರ್ಷಿಕವಾಗಿ 10,561 ಕೋಟಿ ರು. ವಹಿವಾಟು ನಡೆಸುತ್ತಿರುವುದರಿಂದ ಬಾಲಕೃಷ್ಣ ಅವರ ಶ್ರೀಮಂತಿಕೆ ಹೆಚ್ಚಾಗಲು ಕಾರಣ ಎನ್ನಲಾಗಿದೆ. ಹೀಗಾಗಿ, ಅವರು ಹುರೂನ್ ಪಟ್ಟಿಯ ಟಾಪ್ 10 ಶ್ರೀಮಂತರ ಪಟ್ಟಿಯ ಟಾಪ್ 10ರೊಳಗೆ ಕಾಣಿಸಿಕೊಳ್ಳಲು ಸಾಧ್ಯವಾಗಿದೆ.

ಪತಂಜಲಿ ಜಾಹೀರಾತಿನ ಪ್ರಸಾರಕ್ಕೆ ತಡೆ ನೀಡಿದ ದೆಹಲಿ ಹೈಕೋರ್ಟ್ಪತಂಜಲಿ ಜಾಹೀರಾತಿನ ಪ್ರಸಾರಕ್ಕೆ ತಡೆ ನೀಡಿದ ದೆಹಲಿ ಹೈಕೋರ್ಟ್

ಅಂದಹಾಗೆ, ಈ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಜಿಯೋ ಕಂಪನಿಯ ಮುಖ್ಯಸ್ಥ ಮುಖೇಶ್ ಅಂಬಾನಿ ಅವರು ಕಾಯ್ದುಕೊಂಡಿದ್ದಾರೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಅವರ ಆಸ್ತಿಯು ಶೇ. 58ರಷ್ಟು ಹೆಚ್ಚಾಗಿದ್ದು, ಇದೀಗ ಅವರ ಆಸ್ತಿ ಮೌಲ್ಯ 2.57 ಟ್ರಿಲಿಯನ್ ಕೋಟಿ ರು. ಎಂದು ಹೇಳಲಾಗಿದೆ.

ಹುರೂನ್ ಸಂಸ್ಥೆಯು ಚೀನಾ ಮೂಲದ್ದಾಗಿದ್ದು, ಲಂಡನ್ ನಲ್ಲಿರುವ ತನ್ನ ಕಚೇರಿಯ ಮೂಲಕ ಪ್ರತಿ ವರ್ಷ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಶ್ರೀಮಂತರ ಪಟ್ಟಿಗಳನ್ನು ವಾರ್ಷಿಕ ಲೆಕ್ಕಾಚಾರದ ಆಧಾರದ ಮೇಲೆ ಬಿಡುಗಡೆ ಮಾಡುತ್ತದೆ.

English summary
Acharya Balkrishna, the brother of yoga expert and founder of FMCG company Patanjali Baba Ramdev, have found 8th richest in the Hurun India rich list 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X