Winter Session Day 3 Roundup; ಸಂಸತ್‌ನಲ್ಲಿ ಬುಧವಾರ ನಡೆದಿದ್ದೇನು?

ನವದೆಹಲಿ, ಡಿಸೆಂಬರ್ 01; ರಾಜ್ಯಸಭೆಯ 12 ಸದಸ್ಯರ ಅಮಾತು ವಿಚಾರ ಬುಧವಾರ ಸಹ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ಅಮಾನತು ಆದೇಶ ವಾಪಸ್ ಪಡೆಯಬೇಕು ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪ್ರತಿಭಟನೆ ನಡೆಸಿದವು. ಇದರಿಂದಾಗಿ ಕೆಲವು ಕಾಲ ಕಲಾಪವನ್ನು ಸಭಾಪತಿ ವೆಂಕಯ್ಯ ನಾಯ್ಡು ಮುಂದೂಡಿದರು.

ರಾಜ್ಯಸಭೆಯಿಂದ ಅಮಾನತುಗೊಂಡ 12 ಸದಸ್ಯರು ಸಂಸತ್ ಭವನದ ಗಾಂಧಿ ಪ್ರತಿಮೆ ಬಳಿ ಧರಣಿ ಆರಂಭಿಸಿದ್ದಾರೆ. ಅಮಾನತು ಆದೇಶ ರದ್ದುಗೊಳಿಸುವ ತನಕ ಹೋರಾಟ ಮಾಡುತ್ತೇವೆ ಎಂದು ವಿರೋಧ ಪಕ್ಷಗಳು ಹೇಳಿವೆ.

ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, "12 ಸದಸ್ಯರ ಅಮಾನತು ಆದೇಶ ವಾಪಸ್ ಪಡೆಯಬೇಕು ಎಂಬುದು ನಮ್ಮ ಒತ್ತಾಯವಾಗಿದೆ. ಸಭೆ ನಡೆಸಿ ಮುಂದಿನ ನಡೆ ತೀರ್ಮಾನಿಸುತ್ತೇವೆ. ಅಮಾನತು ಆದೇಶ ಕಾನೂನು ಬದ್ಧವಾಗಿಲ್ಲ" ಎಂದರು.

ಸಭಾಪತಿ ವೆಂಕಯ್ಯ ನಾಯ್ಡ ಮಾತನಾಡಿ, "ಇದು ಅಸಂಸದೀಯ ನಡವಳಿಕೆ, ಸಂಸತ್ ಅಧಿವೇಶನಕ್ಕೆ ಕೋಟ್ಯಾಂತರ ರೂಪಾಯಿ ಖರ್ಚಾಗುತ್ತಿದೆ. ಸದನಗಳ ಕಾರ್ಯವೈಖರಿ ನೋಡಿ ಜನರು ಕಂಗಾಲಾಗಿದ್ದಾರೆ. ಇದು ಸದನಕ್ಕೆ ಅಗೌರವ ತರುವ ನಡವಳಿಕೆ" ಎಂದು ಹೇಳಿದರು.

parliament

ರಾಜ್ಯಸಭೆ ಸದಸ್ಯರ ಅಮಾನತು ವಿಚಾರ ಲೋಕಸಭೆಯಲ್ಲೂ ಸಹ ಪ್ರತಿಧ್ವನಿಸಿತು. ವಿರೋಧ ಪಕ್ಷಗಳು 'ವಿ ವಾಂಟ್ ಜಸ್ಟೀಸ್' ಎಂದು ಘೋಷಣೆಗಳನ್ನು ಕೂಗಿದವು. ಅಮಾನತು ಆದೇಶ ರದ್ದುಗೊಳಿಸಿ ಎಂದು ರಾಜ್ಯಸಭಾ ಸದಸ್ಯರು ಸಲ್ಲಿಸಿದ ಮನವಿಯನ್ನು ಸಭಾಪತಿ ವೆಂಕಯ್ಯ ನಾಯ್ಡು ಮತ್ತೊಮ್ಮೆ ತಿರಸ್ಕರಿಸಿದರು.

ಕೇಂದ್ರ ಸಂಸದಧೀಯ ವ್ಯವಹಾರಗಳ ಖಾತೆ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, "ರಾಜ್ಯಸಭೆಯ 12 ಅಮಾನತುಗೊಂಡಿರುವ ಸದಸ್ಯರು ಪುನಃ ಸದನಕ್ಕೆ ಬರಲು ಬಯಸಿದರೆ, ಅವರು ಪಶ್ಚಾತ್ತಾಪ ವ್ಯಕ್ತಪಡಿಸಬೇಕು. ಅವರು ಧರಣಿ ಕುಳಿತುಕೊಳ್ಳಲಿ. ಮಹಾತ್ಮ ಗಾಂಧಿ ಅವರಿಗೆ ಬುದ್ಧಿವಾದ ನೀಡಲಿ ಎಂದು ನಾನು ಪ್ರಾರ್ಥಿಸುತ್ತೇನೆ" ಎಂದರು.

ಲೋಕಸಭೆಯಲ್ಲಿ ಹಣದುಬ್ಬರ, ಬೆಲೆ ಏರಿಕೆ, ಕೋವಿಡ್ ಪರಿಸ್ಥಿತಿಯ ಬಗ್ಗೆ ಚರ್ಚೆಗಳು ನಡೆದವು. ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ನೀಡಬೇಕು ಎಂದು ಸದಸ್ಯರು ಸರ್ಕಾರವನ್ನು ಒತ್ತಾಯಿಸಿದರು.

ಮೃತಪಟ್ಟ ರೈತರ ಬಗ್ಗೆ ದಾಖಲೆಗಳಿಲ್ಲ; ಕೃಷಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಬಗ್ಗೆ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಬಳಿ ಯಾವುದೇ ದಾಖಲೆಗಳಿಲ್ಲ ಎಂದು ಲೋಕಸಭೆಗೆ ಸರ್ಕಾರ ಉತ್ತರ ನೀಡಿದೆ.

ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯವು ಈ ವಿಷಯದಲ್ಲಿ ಯಾವುದೇ ದಾಖಲೆಯನ್ನು ಹೊಂದಿಲ್ಲ ಆದ್ದರಿಂದ ಆಂದೋಲನದ ಸಮಯದಲ್ಲಿ ಸಾವನ್ನಪ್ಪಿದ ರೈತರ ಕುಟುಂಬಗಳಿಗೆ ಆರ್ಥಿಕ ನೆರವು ನೀಡಲು ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಸರ್ಕಾರ ಹೇಳಿದೆ.

ರೈತರಿಗೆ ಮಾಡುವ ಅವಮಾನ; "ಮೂರು ಕೃಷಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆ ವೇಳೆ 700ಕ್ಕೂ ಅಧಿಕ ರೈತರು ಮೃತಪಟ್ಟಿದ್ದಾರೆ. ಆದರೆ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯ ಈ ಬಗ್ಗೆ ದಾಖೆಲ ಇಲ್ಲ ಎಂದು ಹೇಳುವುದು ರೈತರಿಗೆ ಮಾಡುವ ಅವಮಾನವಾಗಿದೆ" ಎಂದು ಮಲ್ಲಿಕಾರ್ಜುನ ಖರ್ಗೆ ಹೇಳಿದರು.

"ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಮಾಹಿತಿಯೇ ಇಲ್ಲ ಎಂದರೆ ಕೋವಿಡ್ ಸಾಂಕ್ರಾಮಿಕದ ಸಮಯದಲ್ಲಿ ಲಕ್ಷಾಂತರ ಜನರು ಮೃತಪಟ್ಟ ಜನರ ಮಾಹಿತಿ ಇದೆಯೇ?. ಕೇವಲ 4 ಲಕ್ಷ ಜನರು ಮೃತಪಟ್ಟಿದ್ದಾರೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಸುಮಾರು 50 ಸಾವಿರ ಜನರು ಮೃತಪಟ್ಟಿದ್ದಾರೆ" ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ಒಳ ನುಸುಳುವಿಕೆ ಕಡಿಮೆ; ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಒಳನುಸುಳುವಿಕೆ ಮತ್ತು ಭಯೋತ್ಪಾದಕ ಕೃತ್ಯಗಳು 2018ರ ಬಳಿಕ ಗಣನೀಯವಾಗಿ ಕಡಿಮೆಯಾಗಿದೆ ಎಂದು ಕೇಂದ್ರ ಗೃಹ ಇಲಾಖೆ ರಾಜ್ಯಸಭೆಗೆ ಮಾಹಿತಿ ನೀಡಿದೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಕೃತ್ಯಗಳಿಂದ ಬಲಿಯಾದ ವ್ಯಕ್ತಿಗಳ ಕುಟುಂಬ ಸದಸ್ಯರಿಗೆ ಪ್ರಸ್ತುತ ಇರುವ ನಿಯಮಗಳ ಅನ್ವಯ 1 ಲಕ್ಷ ರೂ.ಗಳನ್ನು ಜಮ್ಮು ಮತ್ತು ಕಾಶ್ಮೀರದ ಸರ್ಕಾರ ನೀಡಿದೆ. ಕೇಂದ್ರ ಸರ್ಕಾರದ ನಿಯಮಗಳ ಅನ್ವಯ 5 ಲಕ್ಷ ರೂ.ಗಳನ್ನು ನೀಡಲಾಗಿದೆ ಎಂದು ರಾಜ್ಯಸಭೆಗೆ ಮಾಹಿತಿ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+