ಗಣರಾಜ್ಯೋತ್ಸವ ಹಬ್ಬಕ್ಕೆ ಅಣಿಯಾಗಿ ಝಗಮಗಿಸುತ್ತಿರುವ ಸೌಧಗಳು

ನವದೆಹಲಿ, ಜನವರಿ.25: ಸಂವಿಧಾನದ ಹಬ್ಬಕ್ಕೆ ಭಾರತ ಸರ್ವಸನ್ನದ್ಧವಾಗಿದೆ. 71ನೇ ಗಣರಾಜ್ಯೋತ್ಸವ ಸಂಭ್ರಮದ ಹಿನ್ನೆಲೆ ಕೇಂದ್ರ ಸರ್ಕಾರದ ಶಕ್ತಿಸೌಧ ಸಂಸತ್ ಭವನವು ದೀಪಾಲಂಕಾರದಿಂದ ಝಗಮಗಿಸುತ್ತಿದೆ.

ನವದೆಹಲಿಯ ಸಂಸತ್ ಭವನ ಅಷ್ಟೇ ಅಲ್ಲದೇ, ಭಾರತ-ಪಾಕಿಸ್ತಾನ ಅಟಾರಿ ಗಡಿಭಾಗದಲ್ಲೂ ದೀಪಾಲಂಕಾರವನ್ನು ಮಾಡಲಾಗಿದೆ. ಸೂರ್ಯ ಮುಳಗುತ್ತಿದ್ದಂತೆ ಭಾರತದಲ್ಲಿನ ಪ್ರಸಿದ್ಧ ಭವನಗಳು ಫಳಫಳ ಹೊಳೆಯಲು ಆರಂಭಿಸಿವೆ.

ದೆಹಲಿಯ ರಾಷ್ಟ್ರಪತಿ ಭವನ, ಪಂಜಾಬ್, ಭೂಪಾಲ್ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಶಾಸಕಾಂಗದ ಸೌಧಗಳು ದೀಪಾಲಂಕಾರದಿಂದ ಝಗಮಗಿಸುತ್ತಿವೆ. ಯಾವ ಯಾವ ರಾಜ್ಯಗಳಲ್ಲಿ ಯಾವ ಭವನಗಳು ಹೇಗೆ ಅಲಂಕಾರಗೊಂಡಿವೆ ಎನ್ನುವುದರ ಬಗ್ಗೆ ಒಂದು ವರದಿ ನಿಮಗಾಗಿ.

ದೇಶದ ಶಕ್ತಿಸೌಧಕ್ಕೆ ಮೆರಗು ತುಂಬಿದ ದೀಪಾಲಂಕಾರ

71ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ದೇಶದ ಶಕ್ತಿಸೌಧ ಎನಿಸಿರುವ ಸಂಸತ್ ನ್ನು ದೀಪಗಳಿಂದ ಸಿಂಗರಿಸಲಾಗಿತ್ತು.

ಇಂಡಿಯಾ ಗೇಟ್ ಬಳಿ ಬೆಳಕಿನ ಅಲಂಕಾರ

ಗಣರಾಜ್ಯೋತ್ಸವದ ಹಿನ್ನೆಲೆ ನವದೆಹಲಿಯ ಇಂಡಿಯಾ ಗೇಟ್ ಬಳಿ ದೀಪಾಲಂಕಾರವನ್ನು ಮಾಡಲಾಗಿದ್ದು, ಎಲ್ಲರ ಕಣ್ಮನ ಸೆಳೆಯುವಂತೆ ಮಾಡಿತ್ತು.

ಬೆಳಕಿನಿಂದ ಝಗಮಗಿಸಿದ ಅಟಾರಿ ಗಡಿ

ಜಮ್ಮು-ಕಾಶ್ಮೀರದ ಗಡಿ ಭಾಗದಲ್ಲಿರುವ ಅಟಾರಿ ಗಡಿಯಲ್ಲೂ ಗಣರಾಜ್ಯೋತ್ಸವ ದಿನಾಚರಣೆ ರಂಗು ಪಡೆದುಕೊಂಡಿತ್ತು. 71ನೇ ಗಣರಾಜ್ಯೋತ್ಸವದ ಹಿನ್ನೆಲೆ ಗಡಿಯಲ್ಲಿ ದೀಪಾಲಂಕಾರ ಮಾಡಲಾಗಿತ್ತು.

ದೀಪಗಳಿಂದ ಸಿಂಗಾರಗೊಂಡ ಮಧ್ಯಪ್ರದೇಶದ ವಿಧಾನಸೌಧ

71ನೇ ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಮಧ್ಯಪ್ರದೇಶ ರಾಜಧಾನಿ ಭೂಪಾಲ್ ನಲ್ಲಿರುವ ವಿಧಾನಸೌಧವನ್ನು ದೀಪಗಳಿಂದ ಸಿಂಗರಿಸಲಾಗಿತ್ತು.

ದೀಪಗಳಿಂದ ಪಾಟ್ನಾ ಸಚಿವಾಲಯ ಫಳಫಳ

ಗಣರಾಜ್ಯೋತ್ಸವ ದಿನಾಚರಣೆ ಹಿನ್ನೆಲೆಯಲ್ಲಿ ಬಿಹಾರ ರಾಜಧಾನಿ ಪಾಟ್ನಾ ಸಚಿವಾಲಯವನ್ನು ದೀಪಗಳಿಂದ ಸಿಂಗರಿಸಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+