ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download
LIVE

Budget Session PM Modi Speech Live: ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ ಮೋದಿ ಉತ್ತರ

|
Google Oneindia Kannada News

ನವದೆಹಲಿ, ಫೆಬ್ರವರಿ 7: ಸಂಸತ್ತಿನ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಆರಂಭ ದಿನ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉತ್ತರಿಸಲಿದ್ದಾರೆ.

ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲಿನ ಚರ್ಚೆ ಸುಮಾರು 12 ಗಂಟೆಗಳ ಕಾಲ ನಡೆಯಿತು. ಈ ಮಧ್ಯೆ, ಕಳೆದ ವಾರ ರಾಜ್ಯಸಭೆಯು ಬಜೆಟ್ ಅಧಿವೇಶನ ಚರ್ಚೆಯಲ್ಲಿ ಶೇಕಡಾ 100 ರಷ್ಟು ಫಲವನ್ನು ಸಾಧಿಸಿದೆ. ಮೇಲ್ಮನೆ ಕಲಾಪ ಮುಂದೂಡಿಕೆಯಾಗದೇ, ಯಾವುದೇ ಗದ್ದಲ, ಕೋಲಾಹಲ ನಡೆಯದೆ ಸದ್ಭಳಕೆಯಾಗಿದೆ.

ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಕಳೆದ ಜನವರಿ 31ರಂದು ಸಂಸತ್ತಿನ ಜಂಟಿ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಾ, ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ 48 ಶತಕೋಟಿ ಡಾಲರ್ ಹೂಡಿಕೆಯ ಒಳಹರಿವು ಭಾರತದ ಬೆಳವಣಿಗೆಯಲ್ಲಿ ಜಾಗತಿಕ ಹೂಡಿಕೆದಾರ ಸಮುದಾಯವು ಹೊಂದಿರುವ ನಂಬಿಕೆಗೆ ಸಾಕ್ಷಿಯಾಗಿದೆ ಎಂದು ಹರ್ಷ ವ್ಯಕ್ತಪಡಿಸಿದ್ದರು.

ದೇಶದ ಹೆಚ್ಚುತ್ತಿರುವ ರಫ್ತುಗಳ ಕುರಿತು ಭಾಷಣದಲ್ಲಿ ಪ್ರಸ್ತಾಪಿಸಿದ್ದ ರಾಷ್ಟ್ರಪತಿಗಳು, ''ಭಾರತದ ವಿದೇಶಿ ವಿನಿಮಯ ಮೀಸಲು ಇಂದು 630 ಶತಕೋಟಿ ಡಾಲರ್‌ಗಳನ್ನು ಮೀರಿದೆ. ನಮ್ಮ ರಫ್ತು ಕೂಡ ವೇಗವಾಗಿ ಬೆಳೆದಿದೆ, ಹಲವಾರು ಹಿಂದಿನ ದಾಖಲೆಗಳನ್ನು ಮುರಿದಿದೆ. ಕಳೆದ ವರ್ಷ 2021 ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ನಮ್ಮ ಸರಕು-ರಫ್ತು 300 ಶತಕೋಟಿ ಡಾಲರ್‌ಗಳಷ್ಟಿದೆ. ಅಂದರೆ 22 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಾಗಿದೆ, ಇದು 2020ರ ಅವಧಿಗಿಂತ ಒಂದೂವರೆ ಪಟ್ಟು ಹೆಚ್ಚಾಗಿದೆ ಎಂದಿದ್ದರು.

Budget 2022 ( ಬಜೆಟ್) Live Updates in Kannada: FM Speech And Key announcements on Various Sectors IT, Health, Agriculture

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಸಂಜೆ ಲೋಕಸಭೆಯಲ್ಲಿ ಭಾಷಣ ಮಾಡಲಿದ್ದಾರೆ. ಈ ಮೂಲಕ ರಾಷ್ಟ್ರಪತಿಗಳ ವಂದನಾ ನಿರ್ಣಯಕ್ಕೆ ಉತ್ತರ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರ ಈ ಹಿಂದಿನ ಭಾಷಣಕ್ಕೂ ಪ್ರತ್ಯುತ್ತರ ಕೊಡುವ ಸಾಧ್ಯತೆ ಇದೆ. ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲೆ ವೀರಾವೇಶದಿಂದ ಮಾತಾಡಿದ್ದ ರಾಹುಲ್ ... ಗಾಂಧಿ, 'ಕೇಂದ್ರ ಸರ್ಕಾರ ರಾಜ್ಯಗಳ ಒಕ್ಕೂಟ ಧ್ವನಿಯನ್ನು ಹತ್ತಿಕ್ಕುತ್ತಿದೆ. ದೇಶದಲ್ಲಿ ಬಿಜೆಪಿ ಆಳ್ವಿಕೆಯಲ್ಲಿ ರಾಜನ ಪರಿಕಲ್ಪನೆ ಮರುಕಳಿಸುತ್ತಿದೆ' ಎಂದು ಗಂಭೀರ ಆರೋಪ ಮಾಡಿದ್ದರು.

ಬಜೆಟ್‌ ಅಧಿವೇಶನ ಹಿನ್ನೆಲೆಯಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಅವರು ಸಂಸತ್ತಿನ ಜಂಟಿ ಸದನವನ್ನು ಉದ್ದೇಶಿಸಿ ಕಳೆದ ಜ.31ರಂದು ಭಾಷಣ ಮಾಡಿದ್ದರು. ರಾಷ್ಟ್ರಪತಿ ವಂದನಾ ನಿರ್ಣಯ ಚರ್ಚೆಯಲ್ಲಿ ರಾಹುಲ್ ಸೃಷ್ಟಿಸಿದ ವಿವಾದಕ್ಕೂ ಮೋದಿ ತಿರುಗೇಟು ನೀಡುವ ಸಾಧ್ಯತೆ ಇದೆ.

Newest FirstOldest First
7:13 PM, 7 Feb

ನೀವು ನನ್ನನ್ನು ವಿರೋಧಿಸಿ. ಆದರೆ ಫಿಟ್ ಇಂಡಿಯಾ ಸೇರಿದಂತೆ ಇತರ ಯೋಜನೆಗಳನ್ನು ಏಕೆ ವಿರೋಧಿಸುತ್ತಿದ್ದೀರಿ?. ವರ್ಷಗಳ ಹಿಂದೆ ಹಲವು ರಾಜ್ಯಗಳಲ್ಲಿ ಸೋಲು ಕಂಡಿದ್ದೀರಿ. ನನಗೆ ಇದರಲ್ಲಿ ಯಾವುದೇ ಆಶ್ಚರ್ಯವಿಲ್ಲ ಎಂದು ಮೋದಿ ವ್ಯಂಗ್ಯವಾಡಿದರು.
7:09 PM, 7 Feb

ಕೋವಿಡ್ ಲಾಕ್‌ಡೌನ್‌ ಸಮಯದಲ್ಲಿ ಕಾಂಗ್ರೆಸ್ ವಲಸೆ ಕಾರ್ಮಿಕರು ಮುಂಬೈನಿಂದ ಊರುಗಳಿಗೆ ಹೋಗಲು ಉಚಿತ ರೈಲು ಟಿಕೆಟ್ ನೀಡಿತು. ಅದೇ ಸಮಯದಲ್ಲಿ ದೆಹಲಿ ಸರ್ಕಾರ ವಲಸೆ ಕಾರ್ಮಿಕರು ನಗರ ತೊರೆಯುವಂತೆ ಹೇಳಿತು, ಅವರಿಗೆ ಬಸ್ ಒದಗಿಸಿತು. ಇದರಿಂದಾಗಿ ಉತ್ತರ ಪ್ರದೇಶ, ಪಂಜಾಬ್‌ನಲ್ಲಿ ಕೋವಿಡ್ ವೇಗವಾಗಿ ಹಬ್ಬಿತು ಎಂದು ಮೋದಿ ಆರೋಪಿಸಿದರು.
7:04 PM, 7 Feb

ನಾವು ಈಗ ಚಿಕ್ಕ ರೈತರನ್ನು ಸಧೃಢಗೊಳಿಸಬೇಕಿದೆ, ಸರ್ಕಾರ ಆ ಕಡೆ ಗಮನ ಹರಿಸಿದೆ. ಚಿಕ್ಕ ರೈತರ ನೋವು ತಿಳಿದಿಲ್ಲದವರಿಗೆ ಅವರ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡಲು ಹಕ್ಕಿಲ್ಲ. ರೈತರ ಹೆಸರಿನಲ್ಲಿ ರಾಜಕೀಯ ಮಾಡಬಾರದು ಎಂದರು.
7:01 PM, 7 Feb

ತೆಲಂಗಾಣವನ್ನು ಪ್ರತ್ಯೇಕ ರಾಜ್ಯವನ್ನಾಗಿ ಮಾಡಿದರೂ ಜನರು ಪಕ್ಷವನ್ನು ತಿರಸ್ಕರಿಸಿದ್ದಾರೆ ಎಂದು ಮೋದಿ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
7:00 PM, 7 Feb

ಕಾಂಗ್ರೆಸ್ ಪಕ್ಷವನ್ನು ಉತ್ತರ ಪ್ರದೇಶ, ಕರ್ನಾಟಕ, ಬಿಹಾರ, ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷವನ್ನು ಜನರು ತಿರಸ್ಕಾರ ಮಾಡಿದ್ದಾರೆ ಎಂದು ಮೋದಿ ಹೇಳಿದರು.
6:58 PM, 7 Feb

ಕಾಂಗ್ರೆಸ್ ಪಕ್ಷ 50 ವರ್ಷಗಳ ಕಾಲ ಆಡಳಿತ ನಡೆಸಿದೆ. ಆದರೆ 2014ರ ತನಕ ಯಾವುದೇ ಯೋಜನೆಗಳು ಜನರಿಗೆ ತಲುಪಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.
6:57 PM, 7 Feb

ದೇಶದಲ್ಲಿ ಬಡವರು ಸಂತವಾಗಿದ್ದಾರೆ. ಈ ಸಂತಸ ದೇಶದ ಶಕ್ತಿಯನ್ನು ಹೆಚ್ಚಿಸಿದೆ. ಬಡವರು ಬ್ಯಾಂಕ್ ಖಾತೆ ತೆರೆಯುವಂತೆ ಆಗಿದೆ. ಬಡವರ ಮನೆಗಳಿಗೆ ಶೌಚಾಲಯ, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಮೋದಿ ಹೇಳಿದರು.
Advertisement
6:56 PM, 7 Feb

ಕೆಲವು ಜನರು ಮೇಕ್ ಇನ್ ಇಂಡಿಯಾ ವಿರುದ್ಧವಾಗಿದ್ದಾರೆ. ಇದರಿಂದಾಗಿ ಅವರಿಗೆ ಭಷ್ಟಾಚಾರ ಮಾಡಲು ಸಾಧ್ಯವಾಗುತ್ತಿಲ್ಲ. ರಕ್ಷಣಾ ವಲಯದ ಹಲವಾರು ಸಮಸ್ಯೆಗಳನ್ನು ನಾವು ಬಗೆಹರಿಸಲು ನಾವು ಪ್ರಯತ್ನ ನಡೆಸಿದ್ದೇವೆ ಎಂದು ಮೋದಿ ಹೇಳಿದರು.
6:53 PM, 7 Feb

ಲತಾ ಮಂಗೇಷ್ಕರ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದರು. ಲತಾ ದೀದಿ ನಿಧನದಿಂದ ಭಾರತದ ದನಿಯನ್ನೇ ಕಳೆದುಕೊಂಡಂತೆ ಆಗಿದೆ ಎಂದರು.
6:51 PM, 7 Feb

ಕೋವಿಡ್ ಕಾಲದಲ್ಲಿ ಕಾಂಗ್ರೆಸ್ ಪಕ್ಷ ರಾಜಕೀಯ ಮಾಡಿದೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ಭಾಷಣದ ವೇಳೆಯಲ್ಲೂ ಪ್ರತಿಪಕ್ಷಗಳು ಅಡ್ಡಿಪಡಿಸಿದವು.
6:49 PM, 7 Feb

ಹಣದುಬ್ಬರದ ಬಗ್ಗೆ ಮಾತನಾಡುವ ವಿರೋಧ ಪಕ್ಷಗಳು ತಮ್ಮ ಪಕ್ಷ ಅಧಿಕಾರದಲ್ಲಿದ್ದಾಗ ಪರಿಸ್ಥಿತಿ ಹೇಗಿತ್ತು? ಎಂದು ಮೋದಿ ಪ್ರಶ್ನಿಸಿದರು.
6:46 PM, 7 Feb

ನಾವು ಸ್ವಾತಂತ್ರ್ಯದ ಭಾರತದ ಅಮೃತ ಮಹೋತ್ಸವ ಆಚರಿಸುತ್ತಿದ್ದೇವೆ. ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಎಲ್ಲರನ್ನೂ ನಾವು ಸ್ಮರಿಸಬೇಕು. ಎರಡು ವರ್ಷಗಳಲ್ಲಿ ನಾವು ಮಹಾಮಾರಿಯನ್ನು ಎದುರಿಸಿದ್ದೇವೆ ಎಂದರು.
Advertisement
6:43 PM, 7 Feb

ಮಹಾತ್ಮ ಗಾಂಧೀಜಿಯ ಸ್ವದೇಶಿ ಕನಸಿಗೆ ಕಾಂಗ್ರೆಸ್ ಅಡ್ಡಿಯಾಗಿದೆ. ಆತ್ಮ ನಿರ್ಭರ ಭಾರತದ ಕನಸಿಗೆ ಕಾಂಗ್ರೆಸ್ ವಿರುದ್ಧವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು.
6:42 PM, 7 Feb

ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರ ನೀಡಬಾರದು ಎಂದು ಜನರು ತೀರ್ಮಾನ ಮಾಡಿದ್ದಾರೆ. ಇನ್ನೂ 100 ವರ್ಷಗಳು ಕಳೆದರೂ ಕಾಂಗ್ರೆಸ್ ಅಧಿಕಾರಕ್ಕೆ ಬರುವುದಿಲ್ಲ ಎಂದು ಮೋದಿ ಹೇಳಿದರು.
6:40 PM, 7 Feb

ಸಣ್ಣ ರೈತರ ಕಷ್ಟ ತಿಳಿಯದವರು ರಾಜಕೀಯ ಮಾಡುತ್ತಿದ್ದಾರೆ ಎಂದು ಮೋದಿ ವಾಗ್ದಾಳಿ ನಡೆಸಿದರು.
6:36 PM, 7 Feb

ಹಲವಾರು ಚುನಾವಣೆಗಳಲ್ಲಿ ಕಾಂಗ್ರೆಸ್ ಸೋಲು ಕಂಡರೂ ಇನ್ನೂ ದುರಹಂಕಾರ ಕಡಿಮೆ ಆಗಿಲ್ಲ ಎಂದು ಮೋದಿ ವಾಗ್ದಾಳಿ ನಡೆಸಿದರು.
6:35 PM, 7 Feb

ರಾಷ್ಟ್ರಪತಿಗಳ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಲೋಕಸಭೆಯಲ್ಲಿ ಉತ್ತರ ನೀಡುತ್ತಿದ್ದಾರೆ.
12:22 PM, 7 Feb

ಸಂಸತ್ತಿನ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ಲೋಕಸಭೆಯಲ್ಲಿ ಆರಂಭ ದಿನ ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಪ್ರಧಾನಿ ನರೇಂದ್ರ ಮೋದಿ ಸೋಮವಾರ ಉತ್ತರಿಸಲಿದ್ದಾರೆ.
6:39 PM, 1 Feb

ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ: ಡಿ.ಕೆ. ಶಿವಕುಮಾರ್

ಕರ್ನಾಟಕಕ್ಕೆ ಯೋಜನೆಗಳ ಸುರಿಮಳೆಯ ಬಜೆಟ್ ಕೊಡಿಸಿರುವ ಹಿನ್ನೆಲೆಯಲ್ಲಿ ರಾಜ್ಯದಿಂದ ಆಯ್ಕೆಯಾಗಿರುವ 25 ಬಿಜೆಪಿ ಸಂಸದರು ಹಾಗೂ ಮುಖ್ಯಮಂತ್ರಿಗಳಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸುತ್ತೇನೆ. ಎಲ್ಲಾ ರಂಗದಲ್ಲೂ ಕರ್ನಾಟಕ ರಾಜ್ಯಕ್ಕೆ ಶೂನ್ಯ ಕೊಡುಗೆ ಹಾಗೂ ಕರ್ನಾಟಕದ ಹೆಸರನ್ನೂ ಪ್ರಸ್ತಾಪ ಮಾಡದಂತಹ ಬಜೆಟ್ ಅನ್ನು ಕೇಂದ್ರ ಸರ್ಕಾರ ಇಂದು ಮಂಡಿಸಿದೆ ಎಂದು ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
6:36 PM, 1 Feb

ಜನಸಾಮಾನ್ಯರನ್ನ ನಿರ್ಲಕ್ಷಿಸಿದ ಬಜೆಟ್: ಪೃಥ್ವಿ ರೆಡ್ಡಿ

ಕೃಷಿ, ಆರೋಗ್ಯ, ಶಿಕ್ಷಣ ಸೇರಿದಂತೆ ಜನಸಾಮಾನ್ಯರಿಗೆ ಸಂಬಂಧಿಸಿದ ಎಲ್ಲ ಕ್ಷೇತ್ರಗಳನ್ನು ನಿರ್ಲಕ್ಷಿಸಿರುವ ಆಯವ್ಯಯವನ್ನು ನಿರ್ಮಲ ಸೀತಾರಾಮನ್‌ ಮಂಡಿಸಿದ್ದಾರೆ ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿಯವರು ಟೀಕಿಸಿದ್ದಾರೆ.
5:49 PM, 1 Feb

ಜನರ ನಿರೀಕ್ಷೆ ಹುಸಿಯಾಗಿದೆ: ಸಿದ್ದರಾಮಯ್ಯ

ಈ ಬಜೆಟ್ ಬಗ್ಗೆ ನಾನು ಬಹಳ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಆದರೆ ನಾಡಿನ ರೈತರು, ಮಹಿಳೆಯರು, ಸಾಮಾನ್ಯ ವರ್ಗದ ಜನ ಹೆಚ್ಚು ನಿರೀಕ್ಷೆ ಇಟ್ಟಿದ್ದರು. ಅವರ ನಿರೀಕ್ಷೆ ಹುಸಿಯಾಗಿದೆ. ವಿಶೇಷವಾಗಿ ಆರೋಗ್ಯ, ಶಿಕ್ಷಣ, ಕೃಷಿ ಕ್ಷೇತ್ರದ ಉತ್ತೇಜನಕ್ಕಾಗಿ ಕಾರ್ಯಕ್ರಮಗಳ ಘೋಷಣೆ ಆಗುತ್ತವೆಂಬ ನಿರೀಕ್ಷೆ ಇತ್ತು. ಕಳೆದ ವರ್ಷ 34 ಲಕ್ಷ ಕೋಟಿ ರೂಪಾಯಿ ಗಾತ್ರದ ಬಜೆಟ್ ಮಂಡಿಸಿದ್ದರು, ಈ ಬಾರಿ 39 ಲಕ್ಷ ಕೋಟಿ ರೂಪಾಯಿ ಬಜೆಟ್ ಮಂಡಿಸಿದ್ದಾರೆ. ಮುಂಬರುವ ವರ್ಷಕ್ಕೆ ಕೇಂದ್ರ ಸರ್ಕಾರ 11 ಲಕ್ಷದ 87 ಸಾವಿರ ಕೋಟಿ ಸಾಲ ಮಾಡಲಿದೆ: ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
5:45 PM, 1 Feb

ಪ್ರಸ್ತುತ ಕಾಲಕ್ಕೆ ಸರ್ಕಾರದ ಗಮನವಿಲ್ಲ ಎಂದು ಸರ್ಕಾರ ನಂಬಿರುವಂತಿದೆ!

ಹಣಕಾಸು ಸಚಿವರು ಮುಂದಿನ 25 ವರ್ಷಗಳ ಯೋಜನೆಗೆ ರೂಪುರೇಷೆ ನೀಡುತ್ತಿದ್ದಾರೆ ಎಂದು ಕೇಳಿ ನನಗೆ ಆಶ್ಚರ್ಯವಾಯಿತು, ಆಘಾತವಾಯಿತು. ಪ್ರಸ್ತುತ ವರ್ತಮಾನಕ್ಕೆ ಯಾವುದೇ ಗಮನ ಅಗತ್ಯವಿಲ್ಲ ಎಂದು ಸರ್ಕಾರ ನಂಬಿರುವಂತಿದೆ. 'ಅಮೃತ್ ಕಾಲ' ಬೆಳಗಾಗುವವರೆಗೆ ತಾಳ್ಮೆಯಿಂದ ಕಾಯುವಂತೆ ಸಾರ್ವಜನಿಕರನ್ನು ಕೇಳಿಕೊಳ್ಳಬಹುದು. ಇದು ಭಾರತದ ಜನರನ್ನು ಅಣಕಿಸುತ್ತಿದೆ: ಪಿ ಚಿದಂಬರಂ
5:19 PM, 1 Feb

ಬಂಡವಾಳಶಾಹಿ ಬಜೆಟ್ ಆಗಿದೆ: ಪಿ. ಚಿದಂಬರಂ

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಭಾಷಣವು ಅತ್ಯಂತ ಬಂಡವಾಳಶಾಹಿ ಭಾಷಣವಾಗಿದೆ. 'ಬಡವರು' ಎಂಬ ಪದವು ಪ್ಯಾರಾ 6 ರಲ್ಲಿ ಕೇವಲ ಎರಡು ಬಾರಿ ಕಂಡುಬರುತ್ತದೆ. ಈ ದೇಶದಲ್ಲಿ ಬಡವರಿದ್ದಾರೆ ಎಂದು ನೆನಪಿಸಿಕೊಂಡಿದ್ದಕ್ಕಾಗಿ ನಾವು ಹಣಕಾಸು ಸಚಿವರಿಗೆ ಧನ್ಯವಾದಗಳನ್ನ ಹೇಳಲು ಬಯಸುತ್ತೇವೆ. ಈ ಬಂಡವಾಳಶಾಹಿ ಬಜೆಟ್ ಅನ್ನು ಜನರು ತಿರಸ್ಕರಿಸುತ್ತಾರೆ: ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್ ನಾಯಕ ಪಿ. ಚಿದಂಬರಂ
5:15 PM, 1 Feb

ಕಪ್ಪು ಹಣವನ್ನು ತರಲು ನಾವು ಪ್ರತಿ ಖಾತೆಯ ಮೂಲಕ ಕೆಲಸ ಮಾಡುತ್ತಿದ್ದೇವೆ!

2018ರ ನಂತರ ವಿದೇಶಗಳಿಂದ ಕಪ್ಪುಹಣದ ಮಾಹಿತಿ ಹಂಚಿಕೆಯಾಗುತ್ತಿದೆ. ಈ ಮಾಹಿತಿಯ ಆಧಾರದ ಮೇಲೆ, ಕಪ್ಪು ಹಣವನ್ನು ತರಲು ನಾವು ಪ್ರತಿ ಖಾತೆಯ ಮೂಲಕ ಕೆಲಸ ಮಾಡುತ್ತಿದ್ದೇವೆ. ಬ್ಯಾಂಕ್‌ಗಳಲ್ಲಿ ಎನ್‌ಪಿಎ ಕಡಿಮೆಯಾಗುತ್ತಿದೆ, ದೇಶದಿಂದ ಪಲಾಯನ ಮಾಡಿದವರ ಹಣವನ್ನು ಬ್ಯಾಂಕ್‌ಗಳು ವಾಪಸ್ ಪಡೆಯುತ್ತಿವೆ: ಎನ್. ಸೀತಾರಾಮನ್
5:08 PM, 1 Feb

ಹಣದುಬ್ಬರ 6% ಮೀರಲು ಬಿಡಲಿಲ್ಲ: ನಿರ್ಮಲಾ ಸೀತಾರಾಮನ್

ಹಣದುಬ್ಬರ 6% ಮೀರಲು ಬಿಡಲಿಲ್ಲ: ನಿರ್ಮಲಾ ಸೀತಾರಾಮನ್
ಈ (ನಿರುದ್ಯೋಗ ಮತ್ತು ಹಣದುಬ್ಬರ) ಸಮಸ್ಯೆಗಳನ್ನು ನಿಭಾಯಿಸಲು ನಾವು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ನಮ್ಮ ಸರ್ಕಾರ ಹಣದುಬ್ಬರ ಎರಡಂಕಿಗೆ ಹೋಗಲು ಬಿಡಲಿಲ್ಲ. ಹೌದು, ಇದು ತಿಂಗಳಿಗೆ 6% ಮಿತಿಯನ್ನು ಉಲ್ಲಂಘಿಸಿದೆ, ಆದ್ರೂ ಅದನ್ನು ಎಂದಿಗೂ ದಾಟಲು ಬಿಡಲಿಲ್ಲ. ಆದಾಗ್ಯೂ, 2014 ರ ಮೊದಲು ಇದು ಯಾವಾಗಲೂ 10,11,12,13 ರ ವ್ಯಾಪ್ತಿಯಲ್ಲಿತ್ತು: ಹಣಕಾಸು ಸಚಿವೆ
5:05 PM, 1 Feb

ಹಣಕಾಸು ವರ್ಷ 2025-26 ಅಥವಾ 2026-27ರಲ್ಲಿ ಭಾರತದ ಜಿಡಿಪಿ 5 ಟ್ರಿಲಿಯನ್ ಡಾಲರ್ ತಲುಪುವ ಸಾಧ್ಯತೆ: ಹಣಕಾಸು ಸಚಿವಾಲಯ
5:02 PM, 1 Feb

ಸ್ಟಾರ್ಟ್‌ಅಪ್‌ಗಳು ಯುನಿಕಾರ್ನ್ ಆಗಲು ಕಾರಣ

ಖಾಸಗಿ ಇಕ್ವಿಟಿ ಫಂಡ್‌ಗಳು ಮತ್ತು ಸಾಹಸೋದ್ಯಮ ಬಂಡವಾಳಶಾಹಿಗಳು ಅನೇಕ ಸ್ಟಾರ್ಟ್‌ಅಪ್‌ಗಳು ಯುನಿಕಾರ್ನ್ ಆಗಲು ಒಂದು ಕಾರಣ: ನಿರ್ಮಲಾ ಸೀತಾರಾಮನ್
4:48 PM, 1 Feb

ಕೋವಿಡ್-19 ಉದ್ಯೋಗದ ಮೇಲೆ ಪರಿಣಾಮ ಬೀರಿದೆ

ಕೋವಿಡ್ -19 ಸಾಂಕ್ರಾಮಿಕವು ಖಂಡಿತವಾಗಿಯೂ ಉದ್ಯೋಗಗಳ ಮೇಲೆ ಪರಿಣಾಮ ಬೀರಿದೆ . ಆದರೆ ಕೇಂದ್ರ ಸರ್ಕಾರವು ವಿವಿಧ ಯೋಜನೆಗಳ ಮೂಲಕ ಜನರು ಯಶಸ್ವಿಯಾಗಿ ಚೇತರಿಸಿಕೊಳ್ಳಲು ಸಹಾಯ ಮಾಡಲು ಪ್ರಯತ್ನಿಸುತ್ತಿದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
4:44 PM, 1 Feb

ಬಜೆಟ್ ಅನ್ನು ಮೊದಲು ಅರ್ಥ ಮಾಡಿಕೊಳ್ಳಿ!

ರಾಹುಲ್ ಗಾಂಧಿಯವರ 'Zer0 ಮೊತ್ತದ ಬಜೆಟ್' ಎಂಬ ಹೇಳಿಕೆಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ "ದಯವಿಟ್ಟು ಬಜೆಟ್ ಅನ್ನು ಅರ್ಥಮಾಡಿಕೊಳ್ಳಿ" ಎಂದು ಹೇಳಿದರು. ತುಂಬಾ ಹಳೆಯದಾದ ಪಕ್ಷದ ಹಿರಿಯ ರಾಜಕಾರಣಿಯಾಗಿ ''ಬೇಜವಾಬ್ದಾರಿ'' ಕಾಮೆಂಟ್ ಮಾಡದಿರಿ ಎಂದು ಹೇಳಿದರು.
4:26 PM, 1 Feb

ಈ ವರ್ಷದ ಬಜೆಟ್ ಕಳೆದ ವರ್ಷದ ಸಮಗ್ರ ಕಾರ್ಯಸೂಚಿಯ ಮುಂದುವರಿಕೆಯಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
READ MORE

English summary
Parliament Session 2022 Live Updates PM Narendra Modi Speech Today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X