Parle Share Price: ಮೆಲೋನಿಗೆ ಮೋದಿ 'ಮೆಲೋಡಿ' ಗಿಫ್ಟ್: ವಿಡಿಯೋ ವೈರಲ್ ಬೆನ್ನಲ್ಲೆ ಪಾರ್ಲೆ ಷೇರು ಬೆಲೆ ಜಿಗಿತ

Parle Share Price: ಪ್ರಧಾನಿ ನರೇಂದ್ರ ಮೋದಿ ಅವರು ಇಟಲಿ ಪ್ರವಾಸದಲ್ಲಿದ್ದಾರೆ. ಅಲ್ಲಿನ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರಿಗೆ ಪ್ರಧಾನಿ 'ಮೆಲೋಡಿ' ಚಾಕೊಲೇಟ್ ಪ್ಯಾಕೆಟ್ ಅನ್ನು ಉಡುಗೊರೆಯಾಗಿ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಆನ್‌ಲೈನ್‌ನಲ್ಲಿ "ಮೆಲೋಡಿ" ಸಖತ್ ಟ್ರೆಂಡಿಂಗ್ ಆಗಿತ್ತು. ಇದರ ಬೆನ್ನಲ್ಲೆ ಪಾರ್ಲೆ ಇಂಡಸ್ಟ್ರೀಸ್‌ನ ಷೇರುಗಳು ಶೇ. 5ರಷ್ಟು ಏರಿಕೆ ದಾಖಲಿಸಿವೆ. ಈ ಬೆಳವಣಿಗೆಯು ಹೂಡಿಕೆದಾರರಲ್ಲಿ ಕುತೂಹಲ ಮೂಡಿಸಿದೆ.

ಪಾರ್ಲೆ ಇಂಡಸ್ಟ್ರೀಸ್‌ನ (Parle Industries) ಷೇರುಗಳು ಇಂದಿನ ಷೇರುಪೇಟೆಯಲ್ಲಿ (Stock Market) ಇಂಟ್ರಾಡೇ ವಹಿವಾಟಿನಲ್ಲಿ ಶೇಕಡಾ 5ರಷ್ಟು ಏರಿಕೆಯಾಗಿ 5.25 ರೂಪಾಯಿ ತಲುಪಿದವು. ಈ ವರೆಗೆ ಶೇಕಡಾ 35ರಷ್ಟು ಪಾತಾಳ ಕಂಡಿದ್ದ ಸ್ಟಾಕ್‌ಗಳು ದಿಢೀರ್ ಏರಿಕೆ ಆಗಿ ಹೂಡಿಕೆದಾರರಲ್ಲಿ ಅಚ್ಚರಿ ಮೂಡಿಸಿವೆ. ಕಳೆದ ಒಂದು ವಾರದಲ್ಲಿಯೂ ಈ ಷೇರು ಸುಮಾರು ಶೇಕಡಾ 7ರಷ್ಟು ಹೆಚ್ಚಳ ಕಂಡಿತ್ತು. ಆದರೆ, ಇಲ್ಲೊಂದು ಪ್ರಮುಖ ಅಂಶವನ್ನು ಗಮನಿಸಬೇಕು. ವಹಿವಾಟು ನಡೆಸುತ್ತಿರುವ ಪಾರ್ಲೆ ಇಂಡಸ್ಟ್ರೀಸ್, ಮೆಲೋಡಿ ಸ್ವೀಟ್‌ಗಳನ್ನು ವಾಸ್ತವವಾಗಿ ಉತ್ಪಾದಿಸುವುದಿಲ್ಲ.

Parle Share Price

ಮೆಲೋಡಿ ಉತ್ಪಾದನೆಯಲ್ಲಿ ಹಿಂದಿನ ಸತ್ಯ

ಹಾಗಾದರೆ, ಮೆಲೋಡಿ ಚಾಕೊಲೇಟ್‌ಗಳನ್ನು ಯಾರು ತಯಾರಿಸುತ್ತಾರೆ? ಪಾರ್ಲೆ-ಜಿ, ಮೊನಾಕೊ, ಕ್ರಾಕ್‌ಜಾಕ್, ಮ್ಯಾಂಗೋ ಬೈಟ್ ಮತ್ತು ಪಾಪಿನ್ಸ್‌ನಂತಹ ಜನಪ್ರಿಯ ಬ್ರ್ಯಾಂಡ್‌ಗಳ ಹಿಂದಿರುವ ಸುಪ್ರಸಿದ್ಧ ಎಫ್‌ಎಂಸಿಜಿ ಕಂಪನಿಯಾದ 'ಪಾರ್ಲೆ ಪ್ರಾಡಕ್ಟ್ಸ್' ಮೆಲೋಡಿ ಸಿಹಿ ಪದಾರ್ಥಗಳನ್ನು ತಯಾರಿಸುತ್ತದೆ. ಪಾರ್ಲೆ ಪ್ರಾಡಕ್ಟ್ಸ್ (Parle Products) ಒಂದು ಖಾಸಗಿ ಕಂಪನಿಯಾಗಿದ್ದು, ಇದು ಸ್ಟಾಕ್ ಮಾರುಕಟ್ಟೆಯಲ್ಲಿ ಲಿಸ್ಟ್ ಆಗಿಲ್ಲ. ಇದು ಮೆಲೋಡಿ ಚಾಕಲೇಟ್ ಉತ್ಪಾದಿಸಲ್ಲ.

ಬಿಡದಿ ಟೌನ್‌ಶಿಪ್ ಯೋಜನೆ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪಕ್ಕದ ಭೂಮಿಗೆ ಬಂತು ಬಂಗಾರದ ಬೆಲೆ
ಬಿಡದಿ ಟೌನ್‌ಶಿಪ್ ಯೋಜನೆ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಪಕ್ಕದ ಭೂಮಿಗೆ ಬಂತು ಬಂಗಾರದ ಬೆಲೆ

ವಿಡಿಯೋ ವೈರಲ್: ಪಾರ್ಲೆ ಇಂಡಸ್ಟ್ರೀಸ್ ಸ್ಟಾಕ್ ಖರೀದಿ!

ಮತ್ತೊಂದೆಡೆ, ಪಾರ್ಲೆ ಇಂಡಸ್ಟ್ರೀಸ್ ಬಿಎಸ್‌ಇ (BSE) ಯಲ್ಲಿ ಲಿಸ್ಟ್ ಆಗಿರುವ ಪ್ರತ್ಯೇಕ ಘಟಕವಾಗಿದೆ. ಮೆಲೋಡಿ ಕ್ಯಾಂಡಿಗಳ ತಯಾರಿಕೆ ಅಥವಾ ಮಾರಾಟದೊಂದಿಗೆ ಇದಕ್ಕೆ ಯಾವುದೇ ನೇರ ವ್ಯಾಪಾರ ಸಂಬಂಧವಿಲ್ಲ. ಪ್ರಸ್ತುತದ ಷೇರು ಏರಿಕೆಯು, ಚಿಲ್ಲರೆ ಹೂಡಿಕೆದಾರರು ಮತ್ತು ವ್ಯಾಪಾರಿಗಳು "ಪಾರ್ಲೆ" ಹೆಸರನ್ನು ವೈರಲ್ ಆದ ಮೆಲೋಡಿ ಕ್ಷಣದೊಂದಿಗೆ ತಪ್ಪಾಗಿ ಸಂಯೋಜಿಸಿ, ಅದೇ ಹೆಸರಿನ ಲಿಸ್ಟೆಡ್ ಕಂಪನಿಯ ಷೇರುಗಳನ್ನು ಖರೀದಿಸಲು ಮುಂದಾಗಿದ್ದಾರೆ. ಹೀಗಾಗಿ ಪಾರ್ಲೆ ಇಂಡಸ್ಟ್ರೀಸ್ ಷೇರು ದಿಢೀರ್ ಏರಿಕೆ ಕಂಡಿದೆ.

ಪ್ರಧಾನಿ ಮೆಲೋನಿ ಮೆಲೋಡಿ ವಿಡಿಯೋ ವೈರಲ್

ವಾಸ್ತವವಾಗಿ, ಮೋದಿ ಮತ್ತು ಮೆಲೋನಿ ಇರುವ ಒಂದು ಹಾಸ್ಯಮಯ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆದ ನಂತರ ಈ ಷೇರುಗಳ ಬೆಲೆ ಹೆಚ್ಚಾಗಿದೆ. ಈ ಕ್ಲಿಪ್‌ನಲ್ಲಿ, ಪ್ರಧಾನಿ ಮೋದಿ ಅವರು ಇಟಲಿ ಪ್ರಧಾನಿ ಮೆಲೋನಿ ಅವರಿಗೆ ಮೆಲೋಡಿ ಕ್ಯಾಂಡಿಗಳ ಪ್ಯಾಕೆಟ್ ಅನ್ನು ನೀಡುತ್ತಿರುವುದು ಕಂಡುಬಂದಿತ್ತು. ಅನೇಕ ನೆಟ್ಟಿಗರು #Melodi ಅನ್ನು ಟ್ರೆಂಡಿಂಗ್ ಮಾಡಿದರಲ್ಲದೇ ವಿಡಿಯೋವನ್ನು ಹೆಚ್ಚಿನ ಪ್ರಮಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ.

ಸ್ವತಃ ಮೆಲೋನಿ ಅವರೇ ಈ ಕ್ಲಿಪ್ ಅನ್ನು ಎಕ್ಸ್ (X) ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ "ಉಡುಗೊರೆಗಾಗಿ ಧನ್ಯವಾದಗಳು" ಎಂದು ಬರೆದಿದ್ದರು. ವಿಡಿಯೋದಲ್ಲಿ 'ಉಡುಗೊರೆ ಪಡೆದು ತುಂಬಾ, ತುಂಬಾ ಒಳ್ಳೆಯ ಟಾಫಿ" ಎಂದು ಮೆಲೋನಿ ಹೇಳಿದ್ದಾರೆ. ಎರಡು ದೇಶಗಳ ಪ್ರಧಾನಿಗಳು ನಗುತ್ತಿರು ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಅನೇಕ ಹಾಸ್ಯಮಯ ಕಾಮೆಂಟ್‌ಗಳು ವಿಡಿಯೋಗೆ ಬರುತ್ತಿವೆ.

ಈ ವಿಡಿಯೋ ಕ್ಲಿಪ್ ವೇಗವಾಗಿ ಹರಡುತ್ತಿದ್ದಂತೆ, ಪಾರ್ಲೆ ಇಂಡಸ್ಟ್ರೀಸ್‌ನ ಷೇರುಗಳಲ್ಲಿ ಪಾಸಿಟಿವ್ ಟ್ರೆಂಡ್ ಕಂಡು ಬಂದಿದೆ. ಸಾಮಾಜಿಕ ಮಾಧ್ಯಮದ ವೈರಲ್ ಪ್ರಭಾವದಿಂದಾಗಿ, ಹೂಡಿಕೆದಾರರಲ್ಲಿ ಕಂಪನಿಗಳ ಹೆಸರುಗಳ ಬಗ್ಗೆ ಗೊಂದಲದಿಂದಾಗಿ ಷೇರುಗಳು ತೀವ್ರವಾಗಿ ಏರಿಕೆ ಕಂಡಿವೆ. ಇದು ಪ್ರಧಾನಿ ಮೋದಿ ಪವರ್, ಅವರು ಏನೂ ಹೇಳದೆಯೇ ಒಂದು ವಿಡಿಯೋದಿಂದ ಪಾತಾಳ ಕಂಡಿದ್ದ ಷೇರುಗಳ ಬೆಲೆ ಹೆಚ್ಚಾಗಿವೆ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+