5ಕೆಜಿ ಚಿನ್ನಕ್ಕಾಗಿ ಮಗಳನ್ನೇ ಕೊಂದು, ಅತ್ಯಾಚಾರ ಮಾಡಲು ಬಿಟ್ಟ ಹೆತ್ತವರು

ಐದು ಕೆಜಿ ಚಿನ್ನದ ಆಮಿಷಕ್ಕೊಳಗಾದ ದುಷ್ಟ ತಂದೆ ತಾಯಿಗಳು, 15ವರ್ಷದ ತನ್ನ ಮಗಳನ್ನೇ ಕೊಂದು, ಅತ್ಯಾಚಾರ ಮಾಡಲು ಬಿಟ್ಟ ಘಟನೆಯೊಂದು ಉತ್ತರಪ್ರದೇಶದಿಂದ ವರದಿಯಾಗಿದೆ.

ಲಕ್ನೋ, ಜೂ 9: ಹಣ, ಚಿನ್ನದಾಸೆಗಾಗಿ ಮನುಷ್ಯ ಯಾವ ಮಟ್ಟಕ್ಕಾದರೂ ಇಳಿಯುತ್ತಾನೆ ಎನ್ನುವುದಕ್ಕೆ ಇಲ್ಲೊಂದು ಉದಾಹರಣೆ ಇದೆ ನೋಡಿ. ಐದು ಕೆಜಿ ಚಿನ್ನದ ಆಮಿಷಕ್ಕೊಳಗಾದ ದುಷ್ಟ ತಂದೆ ತಾಯಿಗಳು, 15ವರ್ಷದ ತನ್ನ ಮಗಳನ್ನೇ ಕೊಂದು, ಅತ್ಯಾಚಾರ ಮಾಡಲು ಬಿಟ್ಟ ಘಟನೆಯೊಂದು ಉತ್ತರಪ್ರದೇಶದಿಂದ ವರದಿಯಾಗಿದೆ.

ರಾಜಧಾನಿ ಲಕ್ನೋದಿಂದ 122 ಕಿಲೋಮೀಟರ್ ದೂರದ ಕನೌಜ್ ನಲ್ಲಿ, ಸ್ವಯಂಘೋಷಿತ ಮಂತ್ರವಾದಿಯೊಬ್ಬನಿಂದ ಈ ಕೃತ್ಯ ನಡೆದಿದೆ. ಮಹಾವೀರ ಪ್ರಸಾದ್ ಮತ್ತು ಪುಷ್ಪಾ ದಂಪತಿಗಳೇ ಮಗಳನ್ನು ಕೊಂದು, ಅತ್ಯಾಚಾರ ಮಾಡಲು ಬಿಟ್ಟ ಪಾಪಿ ತಂದೆ, ತಾಯಿ.

ವೃತ್ತಿಯಲ್ಲಿ ಚಿನ್ನಾಭರಣ ಅಂಗಡಿ ಹೊಂದಿರುವ ಮಹಾವೀರ ಪ್ರಸಾದ್ ಬಹಳಷ್ಟು ನಷ್ಟವನ್ನು ಅನುಭವಿಸಿದ್ದ. ಈ ಹಿಂದೆ ಈತನ ಜೊತೆ ಕೆಲಸ ಮಾಡುತ್ತಿದ್ದ ಕೃಷ್ಣಪ್ರಸಾದ್ ಹೆಸರಿನ ಡ್ರೈವರ್ ಒಬ್ಬನ ಸಲಹೆಯಂತೆ ಹೆತ್ತವರು ಈ ಕೆಲಸವನ್ನು ಮಾಡಿದ್ದಾರೆ.

Parents allow exorcist to kill 15-year-old daughter, rape body. Wanted to appease god for gold

ಮಂತ್ರವಾದಿಯೆಂದು ಮಹಾವೀರ ಪ್ರಸಾದ್ ಮನೆಗೆ ಬಂದ ಕೃಷ್ಣಪ್ರಸಾದ್, ನಾನು ಹೇಳಿದಂತೆ ಕೇಳಿದರೆ ನಿಮಗೆ ಐದು ಕೆಜಿ ಚಿನ್ನ ಸಿಗುತ್ತದೆ. ನಾನು ನಂಬಿದ ದೈವೀಶಕ್ತಿಗೆ ನಿಮ್ಮ ಮಗಳನ್ನು ಬಲಿಕೊಟ್ಟರೆ, ಆಕೆಯ ಶವದ ಅಂತ್ಯಸಂಸ್ಕಾರ ಆದ ಕೂಡಲೇ ನಿಮಗೆ ಐದು ಕೆಜಿ ಚಿನ್ನ ಸಿಗಲಿದೆ ಎಂದು ಹೇಳಿದ್ದಾನೆ.

ಇವನನ್ನು ನಂಬಿದ ತಂದೆತಾಯಿಗಳು ಹದಿನೈದು ವರ್ಷದ ಮಗಳು ಕವಿತಾಳಿಗೆ ಅಮಲು ಪಾನೀಯ ಕುಡಿಸಿ, ಅವಳನ್ನು ತಡರಾತ್ರಿ ದೇವಾಲಯದ ಬಳಿಗೆ ಕರೆದುಕೊಂಡು ಬಂದಿದ್ದಾರೆ. ತಂದೆತಾಯಿಯ ಎದುರೇ ಕವಿತಾಳ ಬಟ್ಟೆಬಿಚ್ಚಿ, ಕತ್ತುಹಿಸುಕಿ ಬಾಲಕಿಯನ್ನು ಕೊಂದು ಹಾಕಿದ್ದಾನೆ.

ಬಳಿಕ ಬಾಲಕಿಯ ಶವವನ್ನು ಸಂಭೋಗಿಸಿದ ಕೃಷ್ಣಪ್ರಸಾದ್, ಅದಾದ ನಂತರ ಬಾಲಕಿಯ ನಾಲಿಗೆಯನ್ನು ಕತ್ತರಿಸಿ, ರಕ್ತವನ್ನು ದೇವಿಗೆ ಅರ್ಪಿಸಿ, ಬೆಂಕಿ ಹಚ್ಚಿದ್ದಾನೆ. ಈ ಪೈಶಾಚಿಕ ಕೃತ್ಯ ನಡೆದು ಎಷ್ಟು ಹೊತ್ತಾದರೂ ಮಂತ್ರವಾದಿ ಹೇಳಿದಂತೆ ಚಿನ್ನ ಸಿಗದ ಮೇಲೆ ತಂದೆ ತಾಯಿ ಪೊಲೀಸರ ಮೊರೆ ಹೋಗಿದ್ದಾರೆ.

ಕನೌಜ್ ಹೊರವಲಯದಲ್ಲಿ ಕೃಷ್ಣಶರ್ಮಾ ಮತ್ತು ಬಾಲಕಿಯ ತಂದೆ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಅರೆಬೆಂದ ಬಾಲಕಿಯ ಶವವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+