ತಮಿಳುನಾಡು ರಾಜಕಾರಣದಲ್ಲಿ ಒಂಟಿಯಾದ ಪನ್ನೀರಸೆಲ್ವಂ: ಬಿಜೆಪಿ ಬಾಗಿಲು ತಟ್ಟಲಿದ್ದಾರಾ ಜಯಲಲಿತಾ ಶಿಷ್ಯ? ಇನ್‌ಸೈಡ್ ರಿಪೋರ್ಟ್
ಎಐಎಡಿಎಂಕೆಯ ಸರ್ವೋಚ್ಛ ನಾಯಕಿ ಜಯಲಲಿತಾ ಶಿಷ್ಯ 'ಓ ಪನ್ನೀರಸೆಲ್ವಂ' ಈಗ ರಾಜಕೀಯವಾಗಿ ಒಬ್ಬಂಟಿಯಾಗಿದ್ದಾರೆ. ಅವರ ಮುಂದಿನ ನಡೆ ಏನಿರಬಹುದು? ಅವರ ಆಯ್ಕೆಗಳೇನು ಎಂಬುದನ್ನು ತಿಳಿದುಕೊಳ್ಳಲು ಈ ವರದಿ, ವಿಶ್ಲೇಷಣೆ ಓದಿ.
ಚೆನ್ನೈ, ಫೆಬ್ರವರಿ 24: ತಮಿಳುನಾಡು ರಾಜಕಾರಣ ಮಹತ್ತರ ಬೆಳವಣಿಗೆಗೆ ಸಾಕ್ಷಿಯಾಗಲಿದೆಯೇ ಎಂಬ ಪ್ರಶ್ನೆಗಳು ಉದ್ಭವಿಸಿವೆ. ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆಯ ಸರ್ವೋಚ್ಛ ನಾಯಕಿ ಜಯಲಲಿತಾ ಅವರ ಶಿಷ್ಯ ಓ ಪನ್ನೀರಸೆಲ್ವಂ ಈಗ ರಾಜಕೀಯವಾಗಿ ಒಬ್ಬಂಟಿಯಾಗಿದ್ದಾರೆ. ಅವರ ಮುಂದಿನ ನಡೆ ಏನಿರಬಹುದು? ಅವರ ಆಯ್ಕೆಗಳೇನು ಎಂಬುದನ್ನು ತಿಳಿದುಕೊಳ್ಳಲು ಈ ವರದಿ, ವಿಶ್ಲೇಷಣೆ ಓದಿ.
ಜೆ ಜಯಲಲಿತಾ ಅವರು ತಮ್ಮ ನಿಟಕವರ್ತಿಯಾಗಿದ್ದ ಓ ಪನ್ನೀರಸೆಲ್ವಂ ಅವರನ್ನು ಮುಖ್ಯಮಂತ್ರಿಯನ್ನಾಗಿ ಎರಡು ಬಾರಿ ನೇಮಿಸಿದ್ದರು. 2016 ರಲ್ಲಿ ಜಯಲಲಿತಾ ಅವರ ನಂತರ ಸಹಜವಾಗಿ ಪನ್ನೀರಸೆಲ್ವಂ ಉತ್ತರಾಧಿಕಾರಿಯಾಗುತ್ತಾರೆ ಎನ್ನಲಾಗಿತ್ತು. ಆದರೆ, ಈಗ ರಾಜಕೀಯ ತಜ್ಞರ ಲೆಕ್ಕಾಚಾರಗಳೆಲ್ಲವೂ ಬುಡಮೇಲಾಗಿವೆ. ಇದಕ್ಕೆಲ್ಲಾ ಕಾರಣವಾಗಿದ್ದು, ವಿ ಕೆ ಶಶಿಕಲಾ.

ಹೌದು, ಫೆಬ್ರವರಿ 2017 ರಲ್ಲಿ ವಿ ಕೆ ಶಶಿಕಲಾ ವಿರುದ್ಧ ಬಂಡಾಯವೆದ್ದ ಪನ್ನಿರಸೆಲ್ವಂ ಬಂಡಾಯವೆದ್ದರು. ಆ ನಂತರ ಮುಖ್ಯಮಂತ್ರಿ ಕುರ್ಚೆಗಾಗಿ ಹೋರಾಡಿದರು. ಅವರಿಗೆ ಬೇಕಿರುವಷ್ಟು ಬೆಂಬಲ ಎಐಎಡಿಎಂಕೆಯಲ್ಲಿ ದೊರೆಯದೇ ಹೋದಾಗ ಪನ್ನಿರಸೆಲ್ವಂ ವರ್ಚಸ್ಸು ಕುಸಿಯುತ್ತಲೇ ಬಂದಿತು.
ಆ ನಂತರ ಎಐಎಡಿಎಂಕೆಯ ಜನರಲ್ ಕೌನ್ಸಿಲ್‌ನ ಹಂಗಾಮಿ ಪ್ರಧಾನ ಕಾರ್ಯದರ್ಶಿಯಾಗಿ ಪಳನಿಸ್ವಾಮಿ ನೇಮಕಗೊಂಡರು. ಎಐಎಡಿಎಂಕೆಯಿಂದ ಪನ್ನಿರಸೆಲ್ವಂ ಉಚ್ಚಾಟನೆಯಾದರು. ಇದನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಹೋದರು. ಗುರುವಾರ ಸುಪ್ರೀಂ ಕೋರ್ಟ್ ಪನ್ನಿರಸೆಲ್ವಂ ವಿರುದ್ಧವಾಗಿ ತೀರ್ಪು ನೀಡಿದೆ. ಪಳನಿಸ್ವಾಮಿ ಅವರ ನೇಮಕ ಹಾಗೂ ತಮ್ಮ ಉಚ್ಚಾಟನೆಯನ್ನು ಪನ್ನಿರಸೆಲ್ವಂ ಒಪ್ಪಿಕೊಳ್ಳಬೇಕಿರುವ ಅನಿವಾರ್ಯತೆ ಬಂದೊದಗಿದೆ. ಈ ಬೆಳವಣಿಗೆಗಳ ನಂತರ ಪನ್ನಿರಸೆಲ್ವಂ ರಾಜಕೀಯವಾಗಿ ಒಬ್ಬಂಟಿಯಾಗಿದ್ದಾರೆ ಎನ್ನಲಾಗುತ್ತಿದೆ.

ಐವತ್ತು ವರ್ಷಗಳ ಹಳೆಯ ಎಐಎಡಿಎಂಕೆಯಲ್ಲಿ ಎರಡನೇ ಸ್ಥಾನದಲ್ಲಿದ್ದ ಪನ್ನಿರಸೆಲ್ವಂಗೆ ಈಗ ಪಕ್ಷವು ಬಾಗಿಲು ಮುಚ್ಚಿದೆ. ಪಕ್ಷದಲ್ಲಿ ಪ್ರಭಾವಿಯಾಗಿದ್ದರೂ, ಬಿಜೆಪಿ ಮೇಲೆ ಪನ್ನಿರಸೆಲ್ವಂ ಹೆಚ್ಚು ಅವಲಂಬಿತರಾದರು. ಪಳನಿಸ್ವಾಮಿಯೊಂದಿಗೆ ರಾಜಕೀಯವಾಗಿ ತಮ್ಮ ಭಿನ್ನ ಅಭಿಪ್ರಾಯಗಳನ್ನು ಬಗೆಹರಿಸಿಕೊಳ್ಳುವುದನ್ನು ಬಿಟ್ಟು, ಕಾನೂನು ಹೋರಾಟ ಮಾಡಿದರು. ಶಾಸಕರ ಬೆಂಬಲವನ್ನು ಗಳಿಸುವಲ್ಲಿ ಪನ್ನೀರಸೆಲ್ವಂ ವಿಫರಾದರು. ಈ ಎಲ್ಲ ಅಂಶಗಳು ಜಯಲಲಿತಾ ಅವರ ಶಿಷ್ಯನ ಮಹಾಪತನಕ್ಕೆ ಕಾರಣವಾಗಿದೆ ಎಂಬುದು ಮೇಲ್ನೋಟಕ್ಕೆ ತಿಳಿದುಬಂದಿದೆ.
ರಾಜಕೀಯವಾಗಿ ದುರ್ಬಲರಾಗಿರುವ ಪನ್ನಿರಸೆಲ್ವಂ ಅವರಿಗೆ ಬೇರೆ ಆಯ್ಕೆಗಳಿಲ್ಲ. ಹೊಸ ಪಕ್ಷವನ್ನು ಕಟ್ಟುವಷ್ಟು ಅವರು ಪ್ರಭಾವಶಾಲಿಯಾಗಿಲ್ಲ ಎಂದು ರಾಜಕೀಯ ತಜ್ಞರ ಅಭಿಪ್ರಾಯವಾಗಿದೆ. ಪಳನಿಸ್ವಾಮಿ ಅವರ ವಿರೋಧಿಯಾಗಿರುವ ಶಶಿಕಲಾ ಅವರ ಪರ ನಿಂತರೂ ಅವರ ಶಕ್ತಿ ಹೆಚ್ಚುವುದಿಲ್ಲವೆಂದೂ ಹೇಳಲಾಗುತ್ತಿದೆ.

ಸ್ವತಃ ಶಶಿಕಲಾ ಅವರೇ ಪಕ್ಷದಲ್ಲಾಗಲಿ, ತಮಿಳುನಾಡಿನ ರಾಜಕಾರಣದಲ್ಲಾಗಲಿ ಅಷ್ಟೇನು ಯಶಸ್ಸು ಪಡೆದಿಲ್ಲ ಎಂಬುದಂತೂ ನಿಜ. 2017ರಲ್ಲಿ ಅವರು ಜೈಲಿಗೆ ಹೋಗಿ ಬಂದಾಗನಿಂದ ಪಕ್ಷವನ್ನು ಒಗ್ಗೂಡಿಸಲು ಶಶಿಕಲಾ ಅವರಿಗೆ ಸಾಧ್ಯವಾಗಿಲ್ಲ. ಹೀಗಾಗಿ, ಶಶಿಕಲಾ ಅವರೇ ಈಗ ರಾಜಕೀಯ ನಿರಾಶ್ರಿತರಾಗಿದ್ದಾರೆ ಎನ್ನಲಾಗುತ್ತಿದೆ.
ಈ ತರಹದ ಪರಿಸ್ಥಿತಿಯಲ್ಲಿ ಪನ್ನಿರಸೆಲ್ವಂಗೆ ಇರುವ ಉತ್ತಮ ಆಯ್ಕೆಯೆಂದರೆ ಬಿಜೆಪಿ ಬಾಗಿಲು ತಟ್ಟುವುದು. ಹೇಗಿದ್ದರೂ, ಪನ್ನಿರಸೆಲ್ವಂ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತಾ ಅವರಿಗೆ ನಿಷ್ಠರಾಗಿದ್ದಾರೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ಹಿನ್ನೆಲೆಯಲ್ಲಿ ಅವರು ಬಿಜೆಪಿಯ ಸೇರ್ಪಡೆ ಬಗ್ಗೆ ಒಲವು ತೋರಬಹುದು ಎನ್ನಲಾಗುತ್ತಿದೆ.
ಪ್ರಸ್ತುತ ತಮಿಳುನಾಡಿನಲ್ಲಿ ಬಿಜೆಪಿಗೆ ಅಷ್ಟೇನು ಜನಬೆಂಬಲ ಇಲ್ಲ. ಕೇಸರಿ ಪಕ್ಷವು ತನ್ನ ಅಸ್ತಿತ್ವವನ್ನು ಇನ್ನೂ ಕಂಡುಕೊಂಡಿಲ್ಲ. ಈಗ ಪಕ್ಷ ಸಂಘಟನೆಗೆ ಒತ್ತು ನೀಡಲಾಗುತ್ತಿದೆ. ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಅವರನ್ನು ರಾಜ್ಯ ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ಪನ್ನಿರಸೆಲ್ವಂ ಅವರು ಬಿಜೆಪಿಗೆ ಬಂದರೆ, ಪಕ್ಷಕ್ಕೂ ಸಹಾಯವಾದಂತಾಗುತ್ತದೆ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ. ಜಯಲಲಿತಾ ನಿಧನದ ನಂತರ ಎಐಎಡಿಎಂಕೆ ವರ್ಚಸ್ಸು ಬಹುತೇಕ ಕುಸಿತಗೊಂಡಿದೆ. ಈಗ ಆಡಳಿತದಲ್ಲಿರುವ ಡಿಎಂಕೆಗೆ ಪರ್ಯಾಯವೊಂದು ಬೇಕಿದೆ. ತಮಿಳುನಾಡಿನ ಜನರು ಬಿಜೆಪಿಗೆ ಮಣೆ ಹಾಕಲಿದ್ದಾರಾ ಎಂಬುದನ್ನು ಕಾದು ನೋಡಬೇಕಿದೆ.
-
"ಬೆಂಗಳೂರು: 370 ಎಕ್ರೆ ಜಕ್ಕೂರು ವೈಮಾನಿಕ ಶಾಲೆ ಜಾಗದಲ್ಲಿ ಶಾಪಿಂಗ್ ಕಾಂಪ್ಲೆಕ್ಸ್ಗೆ ಪ್ಲ್ಯಾನ್'' -
ಬೆಂಗಳೂರು ಬಂಗಲೆ ವಿವಾದ: ರಾಜೀವ್ ಚಂದ್ರಶೇಖರ್ ನಾಮಪತ್ರ ಅಂಗೀಕರಿಸಿದ ಚುನಾವಣಾ ಆಯೋಗ -
'ಗ್ಯಾರಂಟಿ ಸಮಿತಿ' ಸಿಬ್ಬಂದಿ ಮಾಸಿಕ ವೇತನ ಸರ್ಕಾರದ ಮುಖ್ಯ ಕಾರ್ಯದರ್ಶಿಗಿಂತಲೂ ಹೆಚ್ಚು! ವರ್ಷಕ್ಕೆ ಕೋಟಿ ಕೋಟಿ.. -
ಸದನದಲ್ಲಿ ಬಜೆಟ್ ಚರ್ಚೆ: ಸಿಎಂ ಸಿದ್ದರಾಮಯ್ಯ ವಿರುದ್ಧ ಆರೋಪ -
Tamarind Sale: ತುಮಕೂರು ಮಾರುಕಟ್ಟೆಯಲ್ಲಿ ದಾಖಲೆ ಬೆಲೆಗೆ ಮಾರಾಟವಾದ ಹುಣಸೆ ಹಣ್ಣು -
Yami Gautam: ಕನ್ನಡದಲ್ಲೇ ಧುರಂಧರ್ ನಿರ್ದೇಶಕನ ಪತ್ನಿ ಯಾಮಿ ಗೌತಮ್ ಮೊದಲ ಸಿನಿಮಾ, ಸ್ಟಾರ್ ಹೀರೋ ಜೊತೆ ಚೊಚ್ಚಲ ನಟನೆ -
Gold Rate: ಸತತ ಕುಸಿತ ಕಾಣುತ್ತಿರುವ ಬಂಗಾರದ ಬೆಲೆ; ಬೆಂಗಳೂರಿನಲ್ಲಿ ಇಂದಿನ ಚಿನ್ನ, ಬೆಳ್ಳಿ ದರ ಎಷ್ಟು ಗೊತ್ತಾ? -
Gold Price: ಏಪ್ರಿಲ್ನಲ್ಲಿ ಚಿನ್ನದ ದರ ಭವಿಷ್ಯ: ಹೇಗಿರುತ್ತದೆ ಮುಂದಿನ ತಿಂಗಳು ಚಿನ್ನದ ಬೆಲೆ? ವಿಶ್ಲೇಷಣೆ -
ಅಡುಗೆ ಮನೆಗಳಿಗೆ ಇನ್ನು ನೇರ ಗ್ಯಾಸ್ ಸಂಪರ್ಕ: ಪೈಪ್ಲೈನ್ ವಿಸ್ತರಣೆಗೆ ಕೇಂದ್ರದಿಂದ ಹೊಸ ಆದೇಶ ಜಾರಿ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
ತಿಂಗಳಿಗೆ 10 ಸಾವಿರ ರೂ. ಥೆರಪಿಗೆ, 3 ಸಾವಿರ ನೇಲ್ ಆರ್ಟ್ಗೆ! ಬೆಂಗಳೂರು ಯುವತಿಯ 'Gen Z’' ಖರ್ಚಿನ ಪಟ್ಟಿ Viral












Click it and Unblock the Notifications