35 ವರ್ಷಗಳ ಸಂಬಳ, ಪಿಂಚಣಿ, ₹30 ಕೋಟಿ ದಾನ! ಈ 'ಫಾದರ್'ಗೆ ರಜನಿಕಾಂತ್ ಕೂಡ ಫಿದಾ
Palam Kalyanasundaram:ಸಮಾಜಸೇವೆ ಎಂದರೆ ಕೆಲವರು ತಮ್ಮ ಹಣ, ಆಸ್ತಿಗಳು, ಅಪಾರ ಹಣವನ್ನು ಬಡವರ ಕಲ್ಯಾಣಕ್ಕಾಗಿ, ಊರು ಉದ್ಧಾರಕ್ಕಾಗಿ ನೀಡಿಬಿಡುತ್ತಾರೆ. ಅಂಥವರು ಇಡೀ ಮಾನವಕುಲಕ್ಕೆ ಮಾದರಿಯಾಗುತ್ತಾರೆ. ಈ ಸಾಲಿಗೆ ಇದೀಗ ತಮಿಳುನಾಡಿನ ನಿವೃತ್ತ ಗ್ರಂಥಪಾಲಕ ಮತ್ತು ಸಮಾಜ ಸೇವಕ ಪಾಲಂ ಕಲ್ಯಾಣಸುಂದರಂ ಸೇರುತ್ತಾರೆ. ತಮ್ಮ ಪಿಂಚಣಿ ಹಣ, ಪ್ರಶಸ್ತಿಗಳಿಂದ ಬಂದ ಕೋಟ್ಯಾಂತರ ರೂಪಾಯಿಯನ್ನು ದಾನ ಮಾಡಿದ್ದಾರೆ. ಇವರನ್ನು ಸೂಪರ್ ಸ್ಟಾರ್ ರಜನಿಕಾಂತ್ ಅವರೇ ಸ್ವತಃ 'ಫಾದರ್' ಎಂದು ಕರೆಯುತ್ತಾರೆ.
ಈ ಪಾಲಂ ಕಲ್ಯಾಣಸುಂದರಂ ಅವರು ಸಾಮಾನ್ಯ ಕುಟುಂಬದಲ್ಲಿ ಜನಿಸಿದವರು. 1940ರಲ್ಲಿ ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಮೆಲಕರಿವೆಲಂಕುಲಂ ಎಂಬ ಸಣ್ಣ ಗ್ರಾಮದಲ್ಲಿ ಜನಿಸಿದ ಇವರು ಬಾಲ್ಯದಲ್ಲಿ ತಂದೆ ಕಳೆದುಕೊಂಡರು. ಅಸಹಾಯಕರಾದವರಿಗೆ, ಬಡವರಿಗೆ ಕೈಲಾದ ಸಹಾಯ ಮಾಡಬೇಕು ಎಂದು ತಾಯಿ ಹೇಳಿದ ಮಾತೇ ಅವರಿಗೆ ವೇದ ವಾಕ್ಯವಾಯಿತು. ಅಂದಿನಿಂದ ಅವರು ಸಮಾಜ ಸೇವೆಯಲ್ಲಿ ತೊಡಗಿಕೊಂಡರು. ಅವರ ಈ ಗುಣಕ್ಕೆ ಭಾರತ ಸರ್ಕಾರ, ಸೂಪರ್ ಸ್ಟಾರ್ ರಜನಿಕಾಂತ್ ತಲೆಬಾಗಿದ್ದಾರೆ. ಈ ವಿಚಾರ ಮತ್ತೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಪಾಲಂ ಅವರಿಗೆ ಕೇಂದ್ರ ಸರ್ಕಾರ 2023ರ ಸಾಲಿನ 'ಪದ್ಮಿಶ್ರೀ ಪ್ರಶಸ್ತಿ' ಸಹ ನೀಡಿ ಗೌರವಿಸಿದೆ. ಹಾಗಾದರೆ ಇವರ ಸಮಾಜ ಸೇವೆ, ಇವರ ವೃತ್ತಿ, ಬದುಕಿನ ಸ್ಪೂರ್ತಿದಾಯಕ ವಿಚಾರಗಳು ಇಲ್ಲಿವೆ.
85 ವರ್ಷದ ಪಾಲಂ ಕಲ್ಯಾಣಸುಂದರಂ ಅವರು ಗ್ರಂಥಪಾಲಕರಾಗಿ 35 ವರ್ಷ ಕೆಲಸ ಮಾಡಿದ್ದಾರೆ. ವೇತನವದಲ್ಲಿ ಒಂದೇ ಒಂದು ರೂಪಾಯಿಯನ್ನೂ ಸ್ವಂತಕ್ಕೆ ಇಟ್ಟುಕೊಳ್ಳಲಿಲ್ಲ. ವೃತ್ತಿಗೆ ಸೇರುತ್ತಿದ್ದಂತೆ ತಮ್ಮ ಮೊದಲ ಸಂಬಳದಿಂದಲೇ ಅವರು ಈ ಹಣ ತಮ್ಮದಲ್ಲ ಎಂದು ಅವರು ನಿರ್ಧರಿಸಿದರು. ಅವರು ನಿವೃತ್ತಿಯಾದ ಬಳಿಕವು ಬಂದ ಲಕ್ಷಾಂತರ ರೂ.ಹಣವನ್ನೂ ಸಮಾಜದ ಒಳಿತಿಗೆ, ಸಮಾಜ ಸೇವೆಗೆ ಬಳಸುತ್ತಾ ಬಂದ ಮಹಾನ್ ಸಾಧಕರಾಗಿದ್ದಾರೆ.
10ಲಕ್ಷ, 30 ಕೋಟಿ ರೂ. ದಾನ
ಬದುಕಲು ಎರಡು ಹೊತ್ತಿನ ಊಟಕ್ಕೆ ಪಾಲಂ ಅವರು ಸಣ್ಣಪುಟ್ಟ ಕೆಲಸಗಳನ್ನು ಮಾಡಿದರು. ದಿನಕ್ಕೆ ಎರಡು ಊಟಕ್ಕಾಗಿ ಕಾಯುತ್ತಿದ್ದರು. ಮೂರವರೆ ದಶಕಗಳ ಬಳಿಕ ಗ್ರಂಥಪಾಲಕರಾಗಿ ನಿವೃತ್ತಿಯ ನಂತರ ಅವರ ಸಂಪೂರ್ಣ ಪಿಂಚಣಿ ಹಣ ಸುಮಾರು 10 ಲಕ್ಷ ರೂಪಾಯಿಗಳನ್ನು ಸಹ ದಾನ ಮಾಡಿದ್ದಾರೆ. ಅವರಿಗೆ ಅಮೆರಿಕಾ ಸಂಸ್ಥೆ ಗುರುತಿಸಿ 'ಮ್ಯಾನ್ ಆಫ್ ದಿ ಮಿಲೇನಿಯಮ್' ಪ್ರಶಸ್ತಿಯಂತಹ ಗೌರವ ನೀಡಿತು. ಈ ವೇಳೆ ಸುಮಾರು 30ಕೋಟಿ ರೂಪಾಯಿ ಹಣ ಬಹುಮಾನವಾಗಿ ಬಂತು. ಬಂದ ಬಹುಮಾನದ ಹಣವನ್ನು ನೇರವಾಗಿ ದಾನ ಮಾಡಿದ್ದಾರೆ. ಆಸ್ತಿ, ಮನೆ, ಕಾರು ಖರೀದಿಸಿದೇ, ಸ್ವಂತಕ್ಕಾಗಿ ಒಂದು ರೂಪಾಯಿ ಬಳಸದೇ ಕೈಲಾಗದವರಿಗೆ, ಸಮಾಜದ ಏಳಿಗೆಗೆ ಬಳಸಲು ಮುಕ್ತ ಮನಸ್ಸಿನಿಂದ ನೀಡಿದ್ದಾರೆ.
ಅಲ್ಲಿಂದ ಗ್ರಂಥಪಾಲಕರಾಗಿ ನಿವೃತ್ತಿ ಪಡೆದು ಇಂದಿನವರೆಗೂ ತಮ್ಮ ಇಡೀ ಜೀವನವನ್ನು ಬಡ ಮತ್ತು ಅನಾಥ ಮಕ್ಕಳು ಅವರಿಗೆ ಆಶ್ರಯ ಮತ್ತು ಶಿಕ್ಷಣವನ್ನು ನೀಡುವುದಕ್ಕೆ ಮೀಸಲಿಟ್ಟಿದ್ದಾರೆ. ದಾಂಪತ್ಯ ಜೀವನಕ್ಕೆ ಕಾಲಿಡಲು ಮನ್ಸಸ್ಸು ಮಾಡದ ಇವರು ಸಮಾಜಸೇವೆಗೆ ಸರ್ವಸ್ವವನ್ನು ಮುಡಿಪಾಗಿಟ್ಟರು. ಅಗತ್ಯವಿರುವ ಜನರಿಗೆ ಪ್ರತಿಯೊಂದು ಸಂಪನ್ಮೂಲವನ್ನು ನೀಡುವ ಕೆಲಸ ಆಯ್ಕೆ ಮಾಡಿಕೊಂಡರು. ಇವರ ಈ ಸಾಧನೆ, ಸಮಾಜದ ಬಗೆಗಿನ ಇವರ ತುಡಿತ ಎಲ್ಲರಿಗೂ ಮಾದರಿಯಾಗಿದೆ.
ಪಾಲಂ ಈಸ್ ಫಾದರ್: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್
ಬಹುಭಾಷಾ ನಟ ತಮಿಳಿನ ಸೂಪರ್‌ಸ್ಟಾರ್ ರಜನಿಕಾಂತ್ ಅವರು ಇವರ ಶಿಕ್ಷಣ, ಸಮಾಜಿಕ ಸೇವೆ ಕಂಡು ಶ್ಘಾಘಿಸಿದ್ದಾರೆ. ಪಾಲಂ ಕಲ್ಯಾಣಸುಂದರಂ ಅವರನ್ನು ಸ್ವತಃ ರಜನಿಕಾಂತ್ ಅವರು 'ಫಾದರ್' ಎಂದು ಕರೆದಿದ್ದಾರೆ. ಆ ಮಟ್ಟಿಗಿನ ಗೌರವವನ್ನು ಇವರಿಗೆ ನೀಡುತ್ತಿದ್ದಾರೆ. ಇವರ ಸಮಾಜಸೇವೆ ಕಂಡು ಬರೆಗಾಗಿದ್ದಾರೆ.


Click it and Unblock the Notifications
