ಪಾಕಿಸ್ತಾನದ ಮಾಜಿ ಪ್ರಧಾನಿ ಜೈಲಿನಿಂದ ರಿಲೀಸ್?
ಇಮ್ರಾನ್ ಖಾನ್ ಕ್ರಿಕೆಟ್ ಜಗತ್ತಿನಲ್ಲಿ ಮಾತ್ರ ಶತಕ ಸಿಡಿಸಿ ಮಿಂಚಿಲ್ಲ, ಬದಲಾಗಿ ಪಾಕಿಸ್ತಾನ ಪ್ರಧಾನಿ ಆಗಿ ಕೂಡ ಇಮ್ರಾನ್ ಖಾನ್ ಸದ್ದು ಮಾಡಿದ್ದರು. ಇದರ ಜೊತೆಗೆ ವಿವಾದಗಳನ್ನ ಕೂಡ ಬೆನ್ನಿಗೆ ಕಟ್ಟಿಕೊಂಡು ಇಮ್ರಾನ್ ಖಾನ್ ನೂರಾರು ಕೇಸ್ ಹಾಕಿಸಿಕೊಂಡು ಜೈಲಿಗೂ ಹೋಗಿದ್ದಾರೆ. ಹೀಗಿದ್ದಾಗ ಇದೀಗ ಇಮ್ರಾನ್ ಖಾನ್ ಅವರಿಗೆ ಬಿಗ್ ರಿಲೀಫ್ ಸಿಕ್ಕಿದೆ!
ಪಾಕಿಸ್ತಾನದಲ್ಲೀಗ ಎಲ್ಲವೂ ಹಾಳಾಗಿ ಹೋಗಿದ್ದು, ಅಲ್ಲಿನ ಆಡಳಿತ ವ್ಯವಸ್ಥೆ ಹಾದಿ ತಪ್ಪಿದೆ. ಹೀಗಾಗಿ ಪಾಕಿಸ್ತಾನದ ರಾಜಕಾರಣಿಗಳು ಕೂಡ ಮನಸ್ಸಿಗೆ ಬಂದಂತೆ ಆಡುತ್ತಾರೆ ಎಂಬ ಬಗ್ಗೆ ಆರೋಪ ಕೂಡ ಇದೆ. ದ್ವೇಷದ ರಾಜಕಾರಣಕ್ಕೆ ಈಗ ಪಾಕಿಸ್ತಾನ ರಾಜಧಾನಿ ಆಗಿದೆ. ಹೀಗೆ ನೂರಾರು ಕಳಂಕ ಹೊತ್ತಿರುವ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಕೂಡ ಆರೋಪಿ ಆಗಿದ್ದು ಕಂಬಿ ಹಿಂದೆ ನರಳುತ್ತಿದ್ದಾರೆ. ಹೀಗಿದ್ದಾಗಲೇ ಇಮ್ರಾನ್ ಖಾನ್ ಅವರಿಗೆ ಬಿಗ್ ರಿಲೀಫ್ ಈಗ ಸಿಕ್ಕಿದ್ದು, ಇಮ್ರಾನ್ ಖಾನ್ ಜೈಲಿನಿಂದ ರಿಲೀಸ್ ಆಗುತ್ತಾರಾ? ಎಂಬ ಕುತೂಹಲ ಮೂಡಿದೆ.

ಧ್ವಂಸ ಪ್ರಕರಣಗಳಲ್ಲಿ ರಿಲೀಫ್!
ಅಷ್ಟಕ್ಕೂ ಇದೀಗ 2 ಧ್ವಂಸ ಪ್ರಕರಣಗಳಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿದ್ದ ಪಾಕಿಸ್ತಾನ ಮಾಜಿ ಪಿಎಂ ಇಮ್ರಾನ್ ಖಾನ್, ಪಾಕಿಸ್ತಾನ್ ತೆಹ್ರೀಕ್ ಎ ಇನ್ಸಾಫ್ ಪಾರ್ಟಿ ಲೀಡರ್ಸ್‌ಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ. ಇಸ್ಲಾಮಾಬಾದ್ ಜಿಲ್ಲಾ & ಸೆಷನ್ಸ್ ನ್ಯಾಯಾಲಯವು ಈ ಕೇಸ್‌ನ ಬಗ್ಗೆ, ಮಹತ್ವದ ತೀರ್ಪು ನೀಡಿದ್ದು ಇಮ್ರಾನ್ ಖಾನ್ ಸಹಿತವಾಗಿ ಅವರ ಪಕ್ಷದ ನಾಯಕರು ಬಚಾವ್ ಆಗಿದ್ದಾರೆ. 2022ರ ಮಾರ್ಚ್‌ನಲ್ಲಿ ರ‍್ಯಾಲಿ ನಡೆದಿತ್ತು ಈ ವೇಳೆ ನಡೆದಿದ್ದ ಧ್ವಂಸ ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಅವರಿಗೆ ಈಗ ರಿಲೀಫ್ ಸಿಕ್ಕಿದೆ. ಕರಾಚಿ ಪೊಲೀಸ್ ಠಾಣೆ ಸೇರಿ ಒಟ್ಟು 2 ಪೊಲೀಸ್ ಠಾಣೆಗಳಲ್ಲಿ ಈ ಬಗ್ಗೆ ಕೇಸ್ ರಿಜಿಸ್ಟಾರ್ ಆಗಿತ್ತು. ಹಾಗಾದ್ರೆ ಇಮ್ರಾನ್ ಖಾನ್‌ಗೆ ಜೈಲಿನಿಂದ ಮುಕ್ತಿ ಸಿಗುತ್ತಾ? ಮುಂದೆ ಓದಿ.
140ಕ್ಕೂ ಹೆಚ್ಚು ಕೇಸ್!
ಒಟ್ಟಾರೆ 140ಕ್ಕೂ ಹೆಚ್ಚು ಪ್ರಕರಣಗಳು ಇಮ್ರಾನ್ ಖಾನ್ ವಿರುದ್ಧ ದಾಖಲಾಗಿವೆ. ಹೀಗೆ ಯಾವ ಪ್ರಕರಣದಲ್ಲಿ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್‌ಗೆ ಯಾವಾಗ ಕಂಟಕ ಎದುರಾಗುತ್ತೋ.? ಗೊತ್ತೇ ಆಗ್ತಿಲ್ಲ. ಹೀಗಿದ್ದಾಗಲೇ 2 ಕೇಸ್‌ನಲ್ಲಿ ಇದೀಗ ಇಮ್ರಾನ್ ಖಾನ್‌ಗೆ ರಿಲೀಫ್ ಸಿಕಿದ್ದು, ಜೈಲಿನಿಂದ ರಿಲೀಸ್ ಆಗ್ತಾರಾ ಅಂತಾ ಅವರ ಅಭಿಮಾನಿಗಳು ಆಸೆಯಿಂದ ಕಾಯುತ್ತಿದ್ದಾರೆ. ಆದರೆ ಇನ್ನೂ ನೂರಾರು ಪ್ರಕರಣಗಳಲ್ಲಿ ಇಮ್ರಾನ್ ಖಾನ್ ಅವರಿಗೆ ರಿಲೀಫ್ ಸಿಗಬೇಕಿದೆ. ಆ ನಂತರ ಮಾತ್ರ ಇಮ್ರಾನ್ ಖಾನ್ ಜೈಲಿನಿಂದ ಹೊರಗೆ ಬರಲು ಸಾಧ್ಯ.












Click it and Unblock the Notifications