ಕಾಶ್ಮೀರದಲ್ಲಿ ಸಿಕ್ಕಿಬಿದ್ದ ಮತ್ತೊಬ್ಬ ಪಾಕ್ ಉಗ್ರ
ಬೆಂಗಳೂರು, ಆ.27 : ಒಂದೇ ತಿಂಗಳಿನಲ್ಲಿ ಎರಡನೇ ಬಾರಿಗೆ ಪಾಕಿಸ್ತಾನದ ಭಯೋತ್ಪಾದಕನೊಬ್ಬನನ್ನು ಕಾಶ್ಮೀರದಲ್ಲಿ ಸೆರೆ ಹಿಡಿಯಲಾಗಿದೆ. ಉತ್ತರ ಕಾಶ್ಮೀರದಲ್ಲಿ ಗುರುವಾರ ಭದ್ರತಾ ಪಡೆಗಳ ಜೊತೆ ನಡೆದ ಗುಂಡಿನ ಕಾಳಗದ ಸಮಯದಲ್ಲಿ ಉಗ್ರನನ್ನು ಬಂಧಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರದ ರಾಫಿಯಾಬಾದ್‌ನಲ್ಲಿ ಇಂದು ನಾಲ್ವರು ಭಯೋತ್ಪಾದರು ದಾಳಿ ನಡೆಸಿದ್ದರು. ಭಾರತೀಯ ಸೇನೆ ಮೂವರನ್ನು ಪ್ರತಿದಾಳಿ ನಡೆಸಿ ಹತ್ಯೆ ಮಾಡಿದ್ದು. 22 ವರ್ಷದ ಸಜ್ಜಾದ್ ಅಹಮದ್ ಎಂಬ ಉಗ್ರನನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. [ನವೀದ್ ಲಷ್ಕರ್ ಸೇರಿದ್ದು ಹೇಗೆ?]

ಇದು ಭಾರತದ ಯೋಧರ ಪಾಲಿಗೆ ಮಹತ್ವದ ಹೆಜ್ಜೆಯಾಗಿದೆ. ಆ.5ರಂದು ಉಧಾಂಪುರ್‌ನಲ್ಲಿ ನಡೆದ ಉಗ್ರರ ದಾಳಿಯ ಸಂರ್ಭದಲ್ಲಿ ಮೊಹಮ್ಮದ್ ನವೀದ್‌ನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು. ಈಗ ಮತ್ತೊಬ್ಬ ಉಗ್ರ ಸಜ್ಜಾದ್ ಸಿಕ್ಕಿಬಿದ್ದಿದ್ದಾನೆ. [ನವೀದ್ ಗೆ ಸಹಾಯ ಮಾಡಿದ್ದು ಲಾರಿ ಚಾಲಕ]
ಬಂಧಿತ ಉಗ್ರನನ್ನು ಶ್ರೀನಗರಕ್ಕೆ ಕರೆದುಕೊಂಡು ಬರಲಾಗಿದ್ದು, ಭದ್ರತಾ ಪಡೆ ಅಧಿಕಾರಿಗಳು ಆತನ ವಿಚಾರಣೆ ನಡೆಸುತ್ತಿದ್ದಾರೆ. ಕಾಶ್ಮೀರದ ಉರಿ ಸೆಕ್ಟರ್ ಮೂಲಕ ಈ ಸಜ್ಜಾದ್ ತನ್ನ ಸಹಚರರ ಜೊತೆ ಭಾರತ ಪ್ರವೇಶಿಸಿದ್ದ ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ.
ಆಗಸ್ಟ್ 5ರಂದು ಜಮ್ಮು-ಕಾಶ್ಮೀರದ ಹೆದ್ದಾರಿಯಲ್ಲಿ ಬಿಎಸ್‌ಎಫ್ ಪಡೆಯ ಶಿಬಿರದ ಮೇಲೆ ಗುಂಡಿನ ದಾಳಿ ನಡೆಸಿದ ಉಗ್ರರ ಪೈಕಿ ನವೀದ್‌ನನ್ನು ಜೀವಂತವಾಗಿ ಸೆರೆಹಿಡಿಯಲಾಗಿತ್ತು. ಇಬ್ಬರು ಉಗ್ರರು ಭದ್ರತಾಪಡೆಗಳ ಗುಂಡಿಗೆ ಬಲಿಯಾಗಿದ್ದರು. ನವೀದ್‌ನನ್ನು ಎನ್‌ಐಎ ವಿಚಾರಣೆ ನಡೆಸುತ್ತಿದೆ.












Click it and Unblock the Notifications