ಭಾರತದಲ್ಲಿ ರಾಜಕೀಯ ಆಶ್ರಯ ಕೇಳಿದ ಪಾಕ್ ಮಾಜಿ ಶಾಸಕ, ಕಾರಣ?

ಇಸ್ಲಾಮಾಬಾದ್, ಸೆಪ್ಟೆಂಬರ್ 10: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನ ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಮಾಜಿ ಶಾಸಕ ಇದೀಗ ಭಾರತದ ರಾಜಕೀಯ ಆಶ್ರಯವನ್ನು ಬಯಸಿದ್ದಾರೆ.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ರಕ್ಷಣೆ ಇಲ್ಲ ಎಂದು ಅವರು ದೂರಿದ್ದು, ಸಿಖ್ ಸಮುದಾಯದ ಶಾಸಕ ಬಲದೇವ್ ಕುಮಾರ್ ಇದೀಗ ಕುಟುಂಬ ಸಮೇತರಾಗಿ ಭಾರತಕ್ಕೆ ತಲುಪಿದ್ದು, ಇಲ್ಲೇ ಆಶ್ರಯ ಪಡೆಯಲು ಮುಂದಾಗಿದ್ದಾರೆ.

ದಕ್ಷಿಣ ಭಾರತದ ಮೇಲೆ ಪಾಕಿಸ್ತಾನ ದಾಳಿ ನಡೆಸುವ ಸಾಧ್ಯತೆ ಇದ್ದು, ಸೇನೆಯನ್ನು ಬಿಗಿಗೊಳಿಸಲಾಗಿದೆ.

2016ರಲ್ಲಿ ಸಂಸದರೊಬ್ಬರ ಕೊಲೆ

2016ರಲ್ಲಿ ಸಂಸದರೊಬ್ಬರ ಕೊಲೆ

2016ರಲ್ಲಿ ನನ್ನದೇ ಕ್ಷೇತ್ರದ ಅಲ್ಪಸಂಖ್ಯಾತ ಸಮುದಾಯದ ಸಂಸದನನನ್ನು ಕೊಲ್ಲಲಾಗಿತ್ತು. ಆದರೆ, ಕೊಲೆ ಆರೋಪಿಗಳ ವಿರುದ್ಧ ಸುಳ್ಳು ಪ್ರಕರಣಗಳನ್ನು ಹೊರಿಸಿ 2018ರಲ್ಲಿ ಖುಲಾಸೆಗೊಳಿಸಲಾಗಿತ್ತು. ಪಾಕಿಸ್ತಾನ ಅಲ್ಪ ಸಂಖ್ಯಾತರಿಗೆ ಸೂಕ್ತ ದೇಶವಲ್ಲ. ಹೀಗಾಗಿ ನಾನು ಭಾರತಲ್ಲೇ ಆಶ್ರಯ ಪಡೆಯುವ ಉದ್ದೇಶದಿಂದ ಬಂದಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಬಲದೇವ್ ಕುಮಾರ್ ಎಲ್ಲಿಯ ಶಾಸಕ

ಬಲದೇವ್ ಕುಮಾರ್ ಎಲ್ಲಿಯ ಶಾಸಕ

ಬಲದೇವ್ ಸಿಂಗ್ (43) ಬ್ಯಾರಿಕೋಟ್ ಜಿಲ್ಲೆಯ ಮೀಸಲು ಕ್ಷೇತ್ರವಾದ ಖೈಬರ್ ಫಖ್ತುನ್ ಖ್ವಾ ವಿಧಾನಸಭಾ ಕ್ಷೇತ್ರದಿಂದ ಇವರು ಶಾಸಕನಾಗಿ ಆಯ್ಕೆಯಾಗಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ತೆಹ್ರಿಕ್-ಇ-ಇನ್ಸಾಫ್ ಪಕ್ಷದ ಅಲ್ಪ ಸಂಖ್ಯಾತ ಸಮುದಾಯದ ಶಾಸಕ.

ಭಾರತಕ್ಕೆ ಆಗಮಿಸಿರುವ ಬಲದೇವ್ ಸಿಂಗ್

ಭಾರತಕ್ಕೆ ಆಗಮಿಸಿರುವ ಬಲದೇವ್ ಸಿಂಗ್

ಬಲದೇವ್ ಕುಮಾರ್ ಕುಟುಂಬ ಸಮೇತರಾಗಿ ಭಾರತಕ್ಕೆ ಆಗಮಿಸಿದ್ದು ಯಾವುದೇ ಕಾರಣಕ್ಕೂ ನಾವು ಮತ್ತೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದಾರೆ. ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರನ್ನು ಹೀನಾಯವಾಗಿ ನಡೆಸಿಕೊಳ್ಳಲಾಗುತ್ತಿದೆ. ಹಿಂದೂಗಳು ಮತ್ತು ಸಿಖ್ಖರನ್ನು ಪ್ರತಿದಿನ ಕೊಲ್ಲಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಪರಿಚ್ಛೇದ 370 ರದ್ದು ಭಾರತದ ವಿರುದ್ಧ ಪಾಕ್ ಕಿಡಿ

ಪರಿಚ್ಛೇದ 370 ರದ್ದು ಭಾರತದ ವಿರುದ್ಧ ಪಾಕ್ ಕಿಡಿ

ಇತ್ತೀಚೆಗೆ ಹೇಳಿಕೆ ನೀಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾರತದಲ್ಲಿ ಅಲ್ಪ ಸಂಖ್ಯಾತ ಸಮುದಾಯದವರಿಗೆ ರಕ್ಷಣೆ ಇಲ್ಲ. ಮುಸ್ಲೀಮರನ್ನು ಗುರಿಯಾಗಿರಿಸಿಕೊಂಡು ಹಿಂದೂಸ್ತಾನದಲ್ಲಿ ದಾಳಿ ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದರು.

ಜಮ್ಮು-ಕಾಶ್ಮೀರಕ್ಕೆ ಕಲಂ 370ರ ಅಡಿಯಲ್ಲಿ ಭಾರತ ಸರ್ಕಾರ ನೀಡುತ್ತಿದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಿದ ನಂತರ ಪಾಕಿಸ್ತಾನ ಸರ್ಕಾರ ಭಾರತದ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೋರಾಟಕ್ಕಿಳಿದಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+