ಪಾಪಿ ಪಾಕಿಸ್ತಾನ ಶ್ರೀರಾಮ ಮಂದಿರದ ಬಗ್ಗೆ ಹೇಳಿದ್ದೇನು?
ಭಾರತದಲ್ಲಿ ಶ್ರೀರಾಮ ಮಂದಿರ ಉದ್ಘಾಟನೆ ಆದ ಬಳಿಕ ಹಲವು ದೇಶಗಳು ರೊಚ್ಚಿಗೆದ್ದಿವೆ. ಈ ಸಾಲಿನಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿ ಇದ್ದು, ಪಾಕಿಸ್ತಾನಕ್ಕೆ ಹೊಟ್ಟೆ ಉರಿಯು ಈಗ ಶುರುವಾಗಿದೆ. ಹೀಗಾಗಿಯೇ ಭಾರತದ ಶ್ರೀರಾಮ ಮಂದಿರ ಉದ್ಘಾಟನೆ ಬಗ್ಗೆ ಪಾಪಿ ಪಾಕ್‌ಗೆ ಹೊಟ್ಟೆ ಕಿಚ್ಚು ಶುರುವಾಗಿದೆ. ಹಾಗಾದ್ರೆ ಪಾಕಿಸ್ತಾನ ಈ ಬಗ್ಗೆ ಹೇಳಿದ್ದೇನು? ಮುಂದೆ ಓದಿ.
ಈ ಪಾಕಿಸ್ತಾನ ಅನ್ನೋ ದೇಶಕ್ಕೆ ಬುದ್ಧಿ ಬರುವ ಯಾವುದೇ ಲಕ್ಷಣ ಕಾಣುತ್ತಿಲ್ಲ. ತಮ್ಮದೇ ದೇಶದಲ್ಲಿ ಪ್ರಜೆಗಳು ನರಳುವ ಸಮಯದಲ್ಲಿ ಪಾಕಿಸ್ತಾನಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ. ಆದ್ರೆ ಬೇರೆ ದೇಶಗಳ ವಿಚಾರದಲ್ಲಿ ಮೂಗು ತೂರಿಸುವುದು ಮಾತ್ರ ನಿಲ್ಲಿಸುತ್ತಿಲ್ಲ. ಅದೇ ರೀತಿಯೆ ಈಗ ಭಾರತದ ವಿಚಾರದಲ್ಲಿ ಮತ್ತೆ ಪಾಕಿಸ್ತಾನ ಕಿರಿಕ್ ಶುರು ಮಾಡಿದೆ. ಅದ್ರಲ್ಲೂ ಭಾರತ ತನ್ನ ನೆಲದಲ್ಲಿ ನಿರ್ಮಾಣ ಮಾಡಿರುವ ಶ್ರೀರಾಮ ಮಂದಿರದ ಬಗ್ಗೆ ಪಾಪಿ ಪಾಕಿಸ್ತಾನ ಈಗ ಮಾತನಾಡಿದೆ. ಹಾಗಾದರೆ ಪಾಕಿಸ್ತಾನ ಹೇಳಿದ್ದಾದರೂ ಏನು?

ಮಂದಿರ ಉದ್ಘಾಟನೆ ಖಂಡಿಸಿದ ಪಾಕಿಸ್ತಾನ!
ಹೌದು, ನಿನ್ನೆ ಭಾರತದಲ್ಲಿ 2ನೇ ಬಾರಿಗೆ ದೀಪಾವಳಿ ಹಬ್ಬ ನಡೆದಿದೆ. ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಭಕ್ತರು ಸಂಭ್ರಮಿಸಿದ್ದಾರೆ. ಅಯೋಧ್ಯೆ ರಾಮ ಮಂದಿರದ ಉದ್ಘಾಟನೆ & ಬಾಲರಾಮ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ದೀಪಾವಳಿ ಹಬ್ಬ ದೇಶದ ಮೂಲೆ ಮೂಲೆಯಲ್ಲೂ ನಡೆದಿದೆ. ಆದರೆ ಭಾರತದ ಸಂಭ್ರಮ ಪಾಕಿಸ್ತಾನಕ್ಕೆ ಬೆಂಕಿಯನ್ನೇ ಹಚ್ಚಿದಂತೆ ಕಾಣುತ್ತಿದೆ. ಈ ಕಾರಣಕ್ಕೆ ಅಯೋಧ್ಯೆ ಸಂಭ್ರಮ ಮುಗಿದ ನಂತರ, ಪಾಕಿಸ್ತಾನ ಸರ್ಕಾರ ಇದನ್ನು ಖಂಡಿಸಿ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. ಹಾಗಾದ್ರೆ ಪಾಪಿ ಪಾಕ್ ಈ ವಿಚಾರದಲ್ಲಿ ಹೇಳಿದ್ದಾದರೂ ಏನು?
ಮಸೀದಿಗಳ ಬಗ್ಗೆ ಪಾಕ್ ಹೇಳಿದ್ದೇನು?
ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿ ವಿಷ ಕಾರಿದೆ. 'ಭಾರತದ ನಗರವಾದ ಅಯೋಧ್ಯೆಯಲ್ಲಿ ಈಗ ಧ್ವಂಸಗೊಂಡ ಬಾಬರಿ ಮಸೀದಿ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ, ಪವಿತ್ರೀಕರಣ ಕಾರ್ಯವನ್ನ ಪಾಕಿಸ್ತಾನ ಖಂಡಿಸುತ್ತದೆ. ಕೆಡವಲ್ಪಟ್ಟ ಮಸೀದಿ ಸ್ಥಳದಲ್ಲಿ ನಿರ್ಮಿಸಿದ ಮಂದಿರ ಭವಿಷ್ಯದಲ್ಲಿ ಭಾರತದ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿ ಉಳಿಯುತ್ತೆ. ವಿಶೇಷವಾಗಿ, ವಾರಾಣಸಿ ಜ್ಞಾನವಾಪಿ ಮಸೀದಿ & ಮಥುರಾ ಶಾಹಿ ಈದ್ಗಾ ಮಸೀದಿ ಸೇರಿ ಮಸೀದಿಗಳ ಮೇಲೆ ದೇವಾಲಯ ನಿರ್ಮಿಸಲು ಉದ್ದೇಶಿಸಿರುವ ಪಟ್ಟಿಯೂ ಬೆಳೆಯುತ್ತಿದೆ. ಇದು ಅಪವಿತ್ರತೆ & ವಿನಾಶ' ಅಂತಾ ಹೇಳಿದೆ ಪಾಕಿಸ್ತಾನ ಸರ್ಕಾರ ಹೇಳಿದೆ.
ಆರ್ಥಿಕತೆ ಹದಗೆಟ್ಟರೂ ಬುದ್ಧಿ ಬಂದಿಲ್ಲ
ಪಾಕಿಸ್ತಾನ ಆರ್ಥಿಕ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಅಲ್ಲಿ ಜನ ಗೋಧಿ ಹಿಟ್ಟಿಗೋಸ್ಕರ ಬೀದಿಗೆ ಬಂದು ಹೋರಾಡುವ ಸ್ಥಿತಿ ಇದೆ. ಆದ್ರೂ ಅಲ್ಲಿನ ರಾಜಕಾರಣಿಗಳು ಬುದ್ಧಿ ಕಲಿಯದೆ ಅನಗತ್ಯ ಕಿರಿಕಿರಿ ಮಾಡುತ್ತಿದ್ದಾರೆ. ಅದರಲ್ಲೂ ಭಾರತದ ವಿಚಾರದಲ್ಲಿ ಪಾಕಿಸ್ತಾನ ಪ್ರತಿಬಾರಿ ಹೀಗೆ, ಮನಸ್ಸಿಗೆ ಬಂದಂತೆ ಮಾತನಾಡಿ ಸರಿಯಾಗಿ ಶಿಕ್ಷೆ ಅನುಭವಿಸುತ್ತಿದೆ. ಈಗಲೂ ಅಷ್ಟೇ ಶ್ರೀ ರಾಮ ಮಂದಿರದ ಬಗ್ಗೆ ಪಾಕಿಸ್ತಾನ ನೀಡಿರುವ ಹೇಳಿಕೆ ಕಿಚ್ಚು ಹೊತ್ತಿದೆ. ಭಾರತೀಯರು & ವಿವಿಧ ದೇಶಗಳು ಜನರು ಪಾಕಿಸ್ತಾನಕ್ಕೆ ಈಗ ಬುದ್ಧಿ ಹೇಳುತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ಆರಂಭವಾಗಿದೆ.
ಭಾರತದ ಮೂಲೆ ಮೂಲೆಯಲ್ಲಿ ಸಂಭ್ರಮ
ದೇಶಕ್ಕೆ ದೇಶವೇ ರಾಮನ ಹೆಸರಿನಲ್ಲಿ ಮಿಂದು ಹೋಗಿದ್ದು, ದೀಪ ಬೆಳಗಿಸಿ ಸಂಭ್ರಮಿಸಿದ್ದಾರೆ. ಅಯೋಧ್ಯೆಯಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆ ಸಂಭ್ರಮ ನಿನ್ನೆ ಮೇಳೈಸಿತ್ತು. ಆದರೆ ಪಾಕಿಸ್ತಾನ ಈಗ ತೆಗೆದಿರುವ ಕಿರಿಕ್ ಭಾರಿ ಚರ್ಚೆಗೆ ದಾರಿಯನ್ನ ಮಾಡಿಕೊಟ್ಟಿದೆ. ಹಾಗೇ ಇದಕ್ಕೆ ತಕ್ಕ ಉತ್ತರವನ್ನ ಭಾರತೀಯರು ಈಗ ನೀಡುತ್ತಿದ್ದಾರೆ. ಆ ಮೂಲಕ ಪಾಕಿಸ್ತಾನ ಈಗಲಾದರೂ ನೀಯತ್ತಾಗಿ ಬದುಕಲಿ ಅಂತಾ ಹೇಳುತ್ತಿದ್ದಾರೆ. ಆದರೆ ಈ ಮಾತನ್ನ ಪಾಪಿ ಪಾಕಿಸ್ತಾನ ಪಾಲಿಸುತ್ತಾ? ಅಥವಾ ತನ್ನ ಕಿರಿಕ್ ಮುಂದುವರಿಸುತ್ತಾ.? ಅಂತಾ ಕಾದು ನೋಡಬೇಕಿದೆ.












Click it and Unblock the Notifications