ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಪಾಕ್ ನಿಂದ 6 ಅಣೆಕಟ್ಟು ನಿರ್ಮಾಣ

Posted By:
Subscribe to Oneindia Kannada

ನವದೆಹಲಿ, ಆಗಸ್ಟ್ 4: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಹರಿಯುವ ಇಂಡಸ್ ನದಿಗೆ ಅಡ್ಡವಾಗಿ ಆರು ಅಣೆಕಟ್ಟುಗಳನ್ನು ಕಟ್ಟಲು ಪಾಕಿಸ್ತಾನ ಸನ್ನದ್ಧವಾಗಿದ್ದು, ಇದಕ್ಕೆ ಚೀನಾ ಸರ್ಕಾರ ಸಹಕಾರ ನೀಡುತ್ತಿದೆ ಎಂದು ರಕ್ಷಣಾ ಇಲಾಖೆಯ ರಾಜ್ಯ ಸಚಿವ ವಿ.ಕೆ ಸಿಂಗ್ ರಾಜ್ಯಸಭೆಗೆ ತಿಳಿಸಿದ್ದಾರೆ.

ಪಾಕ್ ವೆಬ್ ಸೈಟ್ ಹ್ಯಾಕ್: ಭಾರತದ ಧ್ವಜ, ರಾಷ್ಟ್ರಗೀತೆ ಡಿಸ್ ಪ್ಲೇ !

ರಾಜ್ಯಸಭೆಗೆ ಇಂದು ಲಿಖಿತ ಉತ್ತರ ನೀಡಿದ ಅವರು, ''ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ಅಣೆಕಟ್ಟುಗಳನ್ನು ನಿರ್ಮಿಸುವುದು ರಾಜತಾಂತ್ರಿಕ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಈ ಬಗ್ಗೆ ಪಾಕಿಸ್ತಾನ ಹಾಗೂ ಚೀನಾ ಸರ್ಕಾರಗಳಿಗೆ ಪತ್ರ ಬರೆದು, ತಕ್ಷಣವೇ ಈ ಪ್ರಯತ್ನಗಳನ್ನು ನಿಲ್ಲಿಸಬೇಕೆಂದು ತಾಕೀತು ಮಾಡಲಾಗಿದೆ'' ಎಂದು ಅವರು ತಿಳಿಸಿದರು.

ಜಲ ಸಮರ: ಪಾಕಿಸಾನ ವಿರುದ್ಧ ಭಾರತಕ್ಕೆ ಜಯ

Pakistan building dams over Indus river in Pakistan-Occupied Kashmir, Government tells Parliament

ಪಾಕಿಸ್ತಾನ ಆಕ್ರಮಿತ ಕಾಶ್ಮೀರವು ವಿವಾದಾತ್ಮಕ ಪ್ರದೇಶವಾಗಿದ್ದು, ಭಾರತಕ್ಕೆ ಆ ಪ್ರಾಂತ್ಯದ ಮೇಲೆ ತನ್ನದೇ ಆದ ಹಕ್ಕುಗಳನ್ನು ಹೊಂದಿದೆ. ಸಮಸ್ಯೆ ಇತ್ಯರ್ಥವಾಗುವವರೆಗೂ ಅಲ್ಲಿ ಯಾವುದೇ ರಚನಾತ್ಮಕ ಕಾರ್ಯಗಳನ್ನು ಪಾಕಿಸ್ತಾನ ಸರ್ಕಾರ ಕೈಗೊಳ್ಳುವಂತಿಲ್ಲ. ಇಂಥ ಕ್ರಮಗಳು, ಭಾರತದ ಸಾರ್ವಭೌಮತ್ವಕ್ಕೆ ಸಡ್ಡುಹೊಡೆಯುಂಥ ಪ್ರಯತ್ನಗಳಾಗಿರುತ್ತವೆ ಎಂದು ಪತ್ರದಲ್ಲಿ ತಿಳಿಸಿರುವುದಾಗಿ ವಿ.ಕೆ. ಸಿಂಗ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Pakistan is constructing six dams on the Indus river in Pakistan-Occupied Kashmir and is doing so with China’s help, Minister of State for External Affairs VK Singh informed the Rajya Sabha on August 4, 2017.
Please Wait while comments are loading...