ಭಾರತದ ವಿರುದ್ಧ ಪಾಕಿಸ್ತಾನದ ಹೊಸ ಮಸಲತ್ತು ಏನು ಗೊತ್ತೆ?
ಭಾರತ ಸದಾ ಅಭಿವೃದ್ಧಿ ಕಡೆಗೆ ತನ್ನ ಗಮನ ನೆಟ್ಟು, ಮುಂದೆ ಸಾಗುತ್ತಿದೆ. ಆದರೆ ಅದೇ ಸಮಯದಲ್ಲಿ ಭಾರತದ ನೆರೆಯ ದೇಶ ಪಾಕಿಸ್ತಾನ ಮಾತ್ರ ತನ್ನ ವಕ್ರ ಬುದ್ಧಿ ಬಿಡುತ್ತಿಲ್ಲ. ಈ ಮಾತಿಗೆ ಪುಷ್ಟಿ ನೀಡುವಂತೆ ಪದೇ ಪದೇ ಪಾಕಿಸ್ತಾನ ಕಿರಿಕ್ ಮಾಡುತ್ತಲೇ ಇರುತ್ತದೆ. ಅದೇ ರೀತಿ ಈಗ ಭಾರತದ ವಿರುದ್ಧ ಪಾಕಿಸ್ತಾನ ಹೊಸ ಮಸಲತ್ತು ಮಾಡಿದಂತೆ ಕಾಣ್ತಿದೆ.
ಪಾಕಿಸ್ತಾನಕ್ಕೆ ತಿನ್ನಲು ಅನ್ನ ಇಲ್ಲ ಅಂದರೂ ಅದರ ಜುಟ್ಟಿಗೆ ಮಲ್ಲಿಗೆ ಹೂವೇ ಬೇಕಾಗಿದೆ. ಇನ್ನು ಸದಾ ಉಗ್ರರನ್ನ ಪೋಷಿಸಿಕೊಂಡು ಬರುವ ಈ ದೇಶ, ಉಗ್ರ ಪೋಷಕ ಎಂಬ ಕೆಟ್ಟ ಹೆಸರನ್ನೂ ಸಂಪಾದನೆ ಮಾಡಿದೆ. ಹೀಗಿದ್ದಾಗ ಪಾಕಿಸ್ತಾನ ಬದಲಾಗುತ್ತೆ.. ಬದಲಾಗುತ್ತೆ.. ಅಂತಾ ಕಾಯುತ್ತಾ ಕೂರುವುದೇ ತಪ್ಪಾಗಿದೆ. ಯಾಕಂದ್ರೆ ಪಾಕಿಸ್ತಾನ ಬದಲಾಗಲ್ಲ ಅನ್ನೋ ಸತ್ಯ ಇಡೀ ಜಗತ್ತಿಗೆ ಗೊತ್ತಾಗಿದೆ. ಹೀಗೆ ಡೊಂಕು ಬುದ್ದಿಯ ಈ ಪಾಕಿಸ್ತಾನ ಈಗ ಭಾರತದ ವಿರುದ್ಧ ಗಂಭೀರ ಮಸಲತ್ತು ಮಾಡಿ, ಆರೋಪ ಮಾಡುತ್ತಿದೆ! ಏನದು ಗೊತ್ತಾ?

ಭಾರತದ ವಿರುದ್ಧ ಪಾಕ್ ಮಸಲತ್ತು?
ಅಂದಹಾಗೆ ಭಾರತ & ಕೆನಡಾ ನಡುವೆ ಬೆಂಕಿ ಹೊತ್ತಿಕೊಂಡಿದೆ. ಸುಮ್ಮನೆ ಇರದ ಕೆನಡಾ ದೇಶ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿತ್ತು. ಖಲಿಸ್ತಾನಿ ಉಗ್ರರ ಪರವಾಗಿ ಇದೇ ಕೆನಡಾ ಮಾತನಾಡಿತ್ತು. ಹೀಗೆ ಮಾತನಾಡುತ್ತಾ, ಭಾರತದ ವಿರುದ್ಧ ಗಂಭೀರ ಆರೋಪನ ಮಾಡಿತ್ತು. ಆದರೆ ಅದಕ್ಕೆಲ್ಲಾ ಭಾರತ ತಲೆಕೆಡಿಸಿಕೊಂಡಿಲ್ಲ. ಕೆನಡಾ ನೆಲದಲ್ಲಿ ಭಾರತದ ಏಜೆಂಟ್‌ಗಳು ತಮ್ಮ ಪ್ರಜೆಗಳನ್ನ ಹತ್ಯೆ ಮಾಡಿದ್ದಾರೆ ಎಂದು ಕೆನಡಾ ಆರೋಪ ಮಾಡಿತ್ತು. ಇದಕ್ಕೆ ಭಾರತ ಕೂಡ ತಕ್ಕ ಉತ್ತರ ನೀಡಿತ್ತು. ಆದರೆ ಇದೀಗ ಪಾಪಿ ಪಾಕಿಸ್ತಾನ ಕೂಡ ಈ ರೀತಿಯ ಗಂಭೀರ ಆರೋಪ ಮಾಡಿದೆ!
ಪಾಕಿಸ್ತಾನ ಈಗ ಕಾಮಿಡಿ ಪೀಸ್
ಹೌದು, ತನ್ನ ದೇಶದಲ್ಲಿ ತನ್ನದೇ ಪ್ರಜೆಗಳ ಜೀವ ಕಾಪಾಡಲು ಆಗದ ಪಾಕಿಸ್ತಾನವು ಇದೀಗ ಭಾರತದ ಮೇಲೆ ಗೂಬೆ ಕೂರಿಸುತ್ತಿದೆ. ಅದರಲ್ಲೂ ಭಾರತ ಮೂಲದ ಏಜೆಂಟ್‌ಗಳು ಪಾಕ್ ನೆಲದಲ್ಲಿ, ಪಾಕಿಸ್ತಾನದ ಪ್ರಜೆಗಳನ್ನ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿದೆ ಪಾಕಿಸ್ತಾನ. ಈ ಕುರಿತು ಪಾಕಿಸ್ತಾನ ವಿದೇಶಾಂಗ ಕಾರ್ಯದರ್ಶಿ ಮುಹಮ್ಮದ್ ಸೈರಸ್ ಖಾಜಿ ಗಂಭೀರವಾದ ಆರೋಪ ಮಾಡಿದ್ದು. ಪಾಕಿಸ್ತಾನದ ನೆಲದಲ್ಲಿ ಪಾಕಿಸ್ತಾನದ ಪ್ರಜೆಗಳನ್ನು ಹತ್ಯೆ ಮಾಡಲು ಭಾರತದ ಏಜೆಂಟ್‌ಗಳನ್ನು ಬಳಸಲಾಗಿದೆ. ಇದಕ್ಕೆ ನಮ್ಮ ಬಳಿ ಸಾಕ್ಷ್ಯ ಲಭ್ಯ ಇವೆ ಎಂದಿದೆ ಪಾಕಿಸ್ತಾನ. ಈ ಮೂಲಕ ಮತ್ತೆ ಜಗತ್ತಿನ ಎದುರು ಪಾಕಿಸ್ತಾನ ಕಾಮಿಡಿ ಪೀಸ್ ಆಗುತ್ತಿದೆ.
ಕೆನಡಾ & ಅಮೆರಿಕ ನಂತರ ಪಾಕಿಸ್ತಾನ!
ಈ ಪಾಕಿಸ್ತಾನ ಬುದ್ಧಿ ಹೆಂಗೆ ಅಂದ್ರೆ 6 ಕೊಟ್ಟರೆ ಅತ್ತೆ ಕಡೆ & 3 ಕೊಟ್ಟರೆ ಸೊಸೆ ಕಡೆ. ಈ ರೀತಿಯ ಡೊಂಕು ಬುದ್ಧಿಯ ಪಾಕಿಸ್ತಾನ ಈಗ ಭಾರತದ ವಿರುದ್ಧ ಗಂಭೀರ ಆರೋಪವನ್ನು ಮಾಡಿದೆ. ಆದರೆ ಭಾರತ ಈ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. ಇನ್ನು ಕೆನಡಾ & ಅಮೆರಿಕ ಕೂಡ ಭಾರತದ ವಿರುದ್ಧ ಇದೇ ರೀತಿ ಸುಮ್ಮನೆ ಆರೋಪ ಮಾಡಿದ್ದವು. ಹೀಗೆ ಕೆನಡಾ, ಅಮೆರಿಕ ಆರೋಪದ ಬಳಿಕ ಪಾಕಿಸ್ತಾನ ಕೂಡ ಇಂತಹದ್ದೇ ಆರೋಪ ಮಾಡಿದೆ. ಹೀಗೆ, ಪಾಕಿಸ್ತಾನ ತನ್ನ ಮರ್ಯಾದಿ ತಾನೇ ಹರಾಜು ಹಾಕಿಕೊಂಡಿದೆ ಎಂಬ ಮಾತು ಕೇಳಿಬಂದಿದೆ.

ದಾವೂದ್ ವಿಚಾರವಾಗಿ ಪಾಕ್ ಹೇಳಿಕೆ?
ಮತ್ತೊಂದು ಕಡೆ ಇತ್ತೀಚೆಗಷ್ಟೇ ಕುಖ್ಯಾತ ಭೂಗತ ಪಾತಕಿ & ಡಾನ್ ದಾವೂದ್ ಇಬ್ರಾಹಿಂ ಆಸ್ಪತ್ರೆ ಸೇರಿದ್ದ. ಡಾನ್ ದಾವೂದ್‌ಗೆ ಯಾರೋ ಅಪರಿಚಿತ ವ್ಯಕ್ತಿ ವಿಷ ಹಾಕಿದ್ದ ಎನ್ನುವ ಆರೋಪ ಕೇಳಿಬಂದಿತ್ತು. ಈ ಆರೋಪಗಳ ಬೆನ್ನಲ್ಲೇ, ಪಾಕಿಸ್ತಾನ ಈಗ ಭಾರತದ ವಿರುದ್ಧ ಬೆರಳು ಮಾಡಿ ತೋರಿಸಿದೆ. ಆದರೆ ಪಾಕಿಸ್ತಾನದ ಆರೋಪಕ್ಕೆ ತಲೆ ಬುಡವೆ ಇಲ್ಲ ಎನ್ನುವ ಮಾತುಗಳು ಕೂಡ ಕೇಳಿಬರುತ್ತಿವೆ.












Click it and Unblock the Notifications