'ಯುದ್ಧಕ್ಕೆ ಸಿದ್ಧರಾಗಿ, ಪಾಕಿಸ್ತಾನವ ತುಂಡು-ತುಂಡು ಮಾಡಲು ಇದು ಸಕಾಲ'

ನವದೆಹಲಿ, ಜುಲೈ 27: ತಾಲಿಬಾನ್ ಖಾನ್ ಎಂದು ಕರೆಸಿಕೊಳ್ಳುವ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿ ಆಗುತ್ತಿರುವ ಬಗ್ಗೆ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಆತಂಕ ವ್ಯಕ್ತಪಡಿಸಿದ್ದು. ಯುದ್ಧವಾಗುವ ಬಗ್ಗೆ ಎಚ್ಚರಿಕೆ ನೀಡಿದ್ದಾರೆ.

ಇಮ್ರಾನ್ ಖಾನ್ ಭಾರತದ ಮೇಲೆ ಯುದ್ಧ ಘೋಷಿಸಬಹುದು ಎಂದಿರುವ ಅವರು, ಭಾರತವು ಯುದ್ಧಕ್ಕೆ ಸಿದ್ಧವಾಗಿರಬೇಕು. ಇದು ಪಾಕಿಸ್ತಾನವನ್ನು ನಾಲ್ಕು ತುಂಡಗಳನ್ನಾಗಿ ಮಾಡಲು ಸಕಾಲ ಎಂದಿದ್ದಾರೆ.

ಇಮ್ರಾನ್ ಖಾನ್ ಕೈಗೊಂಬೆಯಾಗಿರುವುದು ಒಳ್ಳೆಯದೇ ಎಂದಿರುವ ಸ್ವಾಮಿ, ಪಾಕಿಸ್ತಾನದ ಎಲ್ಲ ರಾಜಕಾರಣಿಗಳು, ಜನಪ್ರತಿನಿಧಿಗಳು ಪಾಕ್ ಸೇನೆಯ, ಐಎಸ್‌ಐನ ಹಾಗೂ ತಾಲಿಬಾನಿಗಳ ಕೈಗೊಂನೆಗಳೇ ಎಂದು ಛಾಟಿ ಬೀಸಿದ್ದಾರೆ.

Pak possible PM Imran Khan may call war on India: Subramanian Swamy

ಇಮ್ರಾನ್ ಖಾನ್ ಪಾಕ್‌ ಸೇನೆಯ ಮುಖವಾಡ ಎಂದೇ ಹೇಳಲಾಗಿದ್ದು. ಕಾಶ್ಮೀರ ಸಮಸ್ಯೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಭಾರತದ ಮೇಲೆ ಆಗಾಗ್ಗೆ ಅವರು ವಿಷ ಕಾರುತ್ತಲೇ ಬಂದಿದ್ದಾರೆ. ಇಮ್ರಾನ್ ಖಾನ್ ಪ್ರಧಾನಿ ಆಗಿರುವುದರಿಂದ ಭಾರತ-ಪಾಕ್ ನಡುವೆ ಯುದ್ಧ ಉಂಟಾಗುವ ಸಾಧ್ಯತೆ ಹೆಚ್ಚಾಗಿದೆ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+