ಪದ್ಮಾವತ್ ವಿರುದ್ಧ ಭುಗಿಲೆದ್ದ ಪ್ರತಿಭಟನೆ ಹಿಂಸಾಚಾರ!
ಗುರ್ಗಾಂವ್, ಜನವರಿ 24 : ವಿವಾದಾತ್ಮಕ ಹಿಂದಿ ಚಲನಚಿತ್ರ 'ಪದ್ಮಾವತ್' ಬಿಡುಗಡೆಯನ್ನು ತಡೆಯಲಾಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ನೀಡಿದ ಆದೇಶಕ್ಕೆ ಕರ್ಣಿ ಸೇನಾ ನೈಯಾ ಪೈಸೆಯ ಕಿಮ್ಮತ್ತು ನೀಡಿಲ್ಲ. ಬದಲಾಗಿ, ಚಿತ್ರ ಬಿಡುಗಡೆಯ ಮುನ್ನಾದಿನ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸಿದೆ.
ಹರ್ಯಾಣ, ರಾಜಸ್ತಾನ, ಉತ್ತರ ಪ್ರದೇಶ ಮತ್ತು ಗುಜರಾತ್ ನಲ್ಲಿ ಕರ್ಣಿ ಸೇನೆಯ ಕಾರ್ಯಕರ್ತರು ಹಿಂಸಾತ್ಮಕ ಪ್ರತಿಭಟನೆಗಿಳಿದಿದ್ದು, ಈ ಎಲ್ಲ ರಾಜ್ಯಗಳು ಪದ್ಮಾವತ್ ಬಿಡುಗಡೆಗೆ ಅನುವು ಮಾಡಿಕೊಡುವುದಿಲ್ಲ ಎಂದು ಡಂಗುರ ಸಾರಿದ್ದವು. ಪದ್ಮಾವತ್ ಚಿತ್ರವನ್ನು ಒಂದು ಬಾರಿ ನೋಡುವುದಾಗಿ ಕರ್ಣಿ ಸೇನಾ ಹೇಳಿತ್ತಾದರೂ ಪ್ರತಿಭಟನೆಯನ್ನು ಮುಂದುವರಿಸಿದೆ.
'ಪದ್ಮಾವತ್' ಮೊದಲ ವಿಮರ್ಶೆ: ಮೂಕವಿಸ್ಮಿತಗೊಳಿಸುವ ಬನ್ಸಾಲಿ ದೃಶ್ಯಕಾವ್ಯ
ಸಂಜಯ್ ಲೀಲಾ ಬನ್ಸಾಲಿಯವರ ಈ ಐತಿಹಾಸಿಕ ಮತ್ತು ವಿವಾದಾತ್ಮಕ ಚಿತ್ರ ಆರಂಭದಿಂದಲೇ ಸಾಕಷ್ಟು ಅಡೆತಡೆಗಳನ್ನು ಎದುರಿಸಿದೆ. ಚಿತ್ರೀಕರಣ ನಡೆಯುವಾಗಲೇ ಪ್ರತಿಭಟನಾಕಾರರು ಬನ್ಸಾಲಿಗೆ ಕಪಾಳಮೋಕ್ಷ ಮಾಡಿದ್ದರು. ರಾಣಿ ಪದ್ಮಿನಿ ಪಾತ್ರ ಮಾಡಿರುವ ದೀಪಿಕಾ ಪಡುಕೋಣೆ ಅವರ ಮೂಗನ್ನು ಕತ್ತರಿಸುವುದಾಗಿಯೂ ಕರ್ಣಿ ಸೇನೆ ಬೆದರಿಕೆ ಒಡ್ಡಿದ್ದು. ಸದ್ಯಕ್ಕೆ ಸುಪ್ರೀ ಕೋರ್ಟ್ ಆದೇಶದಿಂದಾಗಿ ಚಿತ್ರ ಬಿಡುಗಡೆ ಭಾಗ್ಯ ಕಾಣುತ್ತಿದೆಯಾದರೂ, ಪ್ರತಿಭಟನೆ ನಿಂತಿಲ್ಲ.

ಮಕ್ಕಳು ಅವಿತುಕೊಳ್ಳುವ ವಿಡಿಯೋ ವೈರಲ್
ಆಘಾತಕಾರಿ ಘಟನೆಯೊಂದರಲ್ಲಿ, ಶಾಲೆಯಿಂದ ಮರಳುತ್ತಿದ್ದ ಮಕ್ಕಳನ್ನು ಹೊಂದಿದ್ದ ಬಸ್ಸಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿರುವ ವಿಡಿಯೋ ಎಲ್ಲೆಡೆಯಲ್ಲಿಯೂ ವೈರಲ್ ಆಗಿದೆ. ಕಲ್ಲೇಟನ್ನು ತಪ್ಪಿಸಿಕೊಳ್ಳಲು ಸೀಟಿನ ನಡುವಿನಲ್ಲಿ ಅವಿತುಕೊಳ್ಳುತ್ತಿರುವ ದೃಶ್ಯ ಎಂಥವರನ್ನೂ ಕಲಕಿಬಿಡುತ್ತದೆ. ಅದೃಷ್ಟವಶಾತ್ ಯಾವ ಮಕ್ಕಳಿಗೂ ಗಾಯವಾಗಿಲ್ಲ. ಅವರನ್ನೆಲ್ಲ ಸುರಕ್ಷಿತವಾಗಿ ಮನೆಗೆ ತಲುಪಿಸಲಾಗಿದೆ.

ಚಿತ್ರಮಂದಿರದೆದಿರುವ ಜನತಾ ಕರ್ಫ್ಯೂ
ಶ್ರೀ ರಜಪೂತ್ ಕರ್ಣಿ ಸೇನೆಯ ಅಧ್ಯಕ್ಷ ಮಹೋದಯರಾದ ಲೋಕೇಂದ್ರ ಸಿಂಗ್ ಕಳವಿ ಎಂಬುವವರು, ಪದ್ಮಾವತ್ ಸಿನೆಮಾ ಪ್ರದರ್ಶಿಸುವ ಎಲ್ಲ ಥಿಯೇಟರ್ ಮುಂದೆ 'ಜನತಾ ಕರ್ಫ್ಯೂ' ಹೇರಲಾಗುವುದು, ಚಿತ್ರ ಪ್ರದರ್ಶನಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ಬೆದರಿಕೆ ಒಡ್ಡಿದ್ದಾರೆ. ಪದ್ಮಾವತ್ ಸಿನೆಮಾ ದೇಶದಾದ್ಯಂತ ಜನವರಿ 25ರಂದು ಬಿಡುಗಡೆಯಾಗುತ್ತಿದೆ.

ಶತಮಾನದ ನಂತರ ಚಿತ್ತೋರ್ ಕೋಟೆಗೆ ಬೀಗ
ಉತ್ತರ ಪ್ರದೇಶದಲ್ಲಿ ಹಲವಾರು ವಾಹನಗಳ ಮೇಲೆ ಕಲ್ಲು ತೂರಿದ ಮತ್ತು ಬಲವಂತವಾಗಿ ಅಂಗಡಿಗಳನ್ನು ಮುಚ್ಚಲು ಯತ್ನಿಸಿದ ಕಿಡಿಗೇಡಿಗಳ ಮೇಲೆ ಲಾಠಿ ಚಾರ್ಜ್ ಮಾಡಿದ್ದಾರೆ. ಕಲ್ಲು ತೂರಾಟದಲ್ಲಿ ವಾಹನ ಚಾಲಕರಿಗೂ ಗಾಯಗಳಾಗಿವೆ. ಪ್ರತಿಭಟನಾಕಾರರು ಟೈರನ್ನು ಸುಟ್ಟು ದೆಹಲಿ-ಜೋಧಪುರ, ದೆಹಲಿ-ಅಜ್ಮೇರ್ ಹೆದ್ದಾರಿಯನ್ನೂ ಬಂದ್ ಮಾಡಿದ್ದರು. ಪ್ರತಿಭಟನಾಕಾರರು ದಾಳಿ ಮಾಡಲು ಯತ್ನಿಸಿದ್ದರಿಂದ ಶತಮಾನದಲ್ಲಿ ಮೊದಲ ಬಾರಿಗೆ ಚಿತ್ತೋರ್ ಕೋಟೆಯನ್ನು ಮುಚ್ಚಲಾಗಿದೆ.

ಗುರ್ಗಾಂವ್ ನಲ್ಲಿ ಬಾರ್ ಮುಚ್ಚಲು ಆದೇಶ
ಹರ್ಯಾಣದ ಗುರ್ಗಾಂವ್ ನಲ್ಲಿ ವಜೀರ್ ಪುರ ಮತ್ತು ಪಟೌಡಿ ರಸ್ತೆಯಲ್ಲಿ ಬಸ್ಸೊಂದಕ್ಕೆ ಪ್ರತಿಭಟನಾಕಾರರು ಬೆಂಕಿ ಹಚ್ಚಿ ಬಂದ್ ಮಾಡಿದ್ದರು. ಚಿತ್ರ ಬಿಡುಗಡೆಯಾಗಲಿರುವ ಚಿತ್ರಮಂದಿರದ 200 ಮೀಟರ್ ಒಳಗಡೆ ಪ್ರತಿಭಟನಾಕಾರರು ಬರದಂತೆ ನಿಷೇಧಾಜ್ಞೆ ಹೇರಲಾಗಿದೆ. ಅಲ್ಲದೆ, ಬುಧವಾರ ಸಂಜೆ 7 ಗಂಟೆಯಿಂದ ಎಲ್ಲ ಬಾರ್ ಗಳನ್ನು ಮುಚ್ಚಲು ಜಿಲ್ಲಾಡಳಿತ ಆದೇಶ ನೀಡಿದೆ. ಚಿತ್ರ ಮಂದಿರದ ಮಾಲಿಕರು ಕೂಡ ತಾವು ಚಿತ್ರವನ್ನು ಪ್ರದರ್ಶಿಸುವುದಿಲ್ಲ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲೂ ಗುರುವಾರ ಪ್ರದರ್ಶನವಿಲ್ಲ
ಕರ್ನಾಟಕದಲ್ಲಿ ಈ ಹಿಂದೆ ಕರ್ಣಿ ಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಆದರೆ, ಜನವರಿ 25ರಂದು ಕರ್ನಾಟಕ ಬಂದ್ ಇರುವುದರಿಂದ ಯಾವುದೇ ಚಿತ್ರಮಂದಿರಗಳು ತೆರೆದಿರುವುದಿಲ್ಲ. ಚಿತ್ರಮಂದಿರದ ಮಾಲಿಕರು ಮಹದಾಯಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲ ನೀಡಿದ್ದು ಚಿತ್ರ ಪ್ರದರ್ಶನ ಮಾಡದಿರಲು ನಿರ್ಧರಿಸಿದ್ದಾರೆ. ಹೀಗಾಗಿ ಪದ್ಮಾವತ್ ಕರ್ನಾಟಕದಲ್ಲಿ ಗುರುವಾರ ಪ್ರದರ್ಶನ ಕಾಣುವುದಿಲ್ಲ.

ಏನು ಮಾಡಲು ಹೇಸುವುದಿಲ್ಲ
ಲಖನೌನಲ್ಲಿ ಕೂಡ ಪ್ರತಿಭಟನೆಗಿಳಿದಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಭಟನಾಕಾರರು ತಾವು ಯಾವುದೇ ಸಂಘಟನೆಗೆ ಸೇರಿದವರಲ್ಲ ಎಂದು ಹೇಳಿದ್ದು, ಒಂದು ವೇಳೆ ತಮ್ಮ ಎಚ್ಚರಿಕೆಯನ್ನು ಮೀರಿ ಪದ್ಮಾವತ್ ಚಲನಚಿತ್ರವನ್ನು ಯಾವುದೇ ಚಿತ್ರಮಂದಿರದಲ್ಲಿ ಪ್ರದರ್ಶಿಸಿದ್ದೇ ಆದಲ್ಲಿ ಚಿತ್ರಮಂದಿರ ಮಾಲಿಕರನ್ನು ಬಿಡುವುದಿಲ್ಲ ಮತ್ತು ತಾವು ಏನು ಮಾಡಲು ಹೇಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಅಹ್ಮದಾಬಾದ್ ನಲ್ಲಿ ವಾಹನಗಳಿಗೆ ಬೆಂಕಿ
ಗುಜರಾತ್ ನ ಅಹ್ಮದಾಬಾದ್ ನಲ್ಲಿ ಮಂಗಳವಾರ 30ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ, ಹಲವಾರು ಅಂಗಡಿಗಳ ಮೇಲೆ ಕೂಡ ಕಲ್ಲು ತೂರಲಾಗಿದೆ. ಬುಧವಾರ ಬೆಳಿಗ್ಗೆ ಕೂಡ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು ಮತ್ತು ದ್ವಿಚಕ್ರವಾಹನಗಳನ್ನು ಜಖಂ ಮಾಡಿದ್ದಾರೆ. ಪದ್ಮಾವತ್ ಬಿಡುಗಡೆಗೆ ಅನುವು ಮಾಡಿಕೊಡುವುದಾಗಿ ಮತ್ತು ಭದ್ರತೆ ಒದಗಿಸುವುದಾಗಿ ಗುಜರಾತ್ ಸರಕಾರ ಹೇಳಿದ್ದರೂ, ಪೊಲೀಸರು ಕಡಿಮೆ ಸಂಖ್ಯೆಯಲ್ಲಿ ಇದ್ದಿದ್ದರಿಂದ ಪ್ರತಿಭಟನೆಯನ್ನು ಹತ್ತಿಕ್ಕಲು ಸಾಧ್ಯವಾಗಿಲ್ಲ.

ಬನ್ಸಾಲಿ ಹಣೆಬರಹ ನೆಟ್ಟಗಿದ್ದಂತಿಲ್ಲ
ಪ್ರತಿಭಟನಾಕಾರರ ವಾದವೇನೆಂದರೆ, ಚಿತ್ತೋರ್ ನ ರಜಪೂತರ ರಾಣಿ ಪದ್ಮಿನಿಯನ್ನು ಅತ್ಯಂತ ಕೆಟ್ಟದಾಗಿ ಬಿಂಬಿಸಲಾಗಿದೆ. ಅಲ್ಲದೆ, ಮುಸ್ಲಿಂ ದೊರೆ ಅಲ್ಲಾವುದ್ದಿನ್ ಖಿಲ್ಜಿಯೊಂದಿಗೆ ರಾಣಿ ಪದ್ಮಿನಿ ಸಲ್ಲಾಪ ನಡೆಸುವ ಹಾಡೊಂದು ಇರುವುದು ಜನರನ್ನು ಕೆರಳಿಸಿದೆ. ಒಟ್ಟಿನಲ್ಲಿ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರ ಹಣೆಬರಹ ನೆಟ್ಟಗಿದ್ದಂತಿಲ್ಲ. ಚಿತ್ರದಲ್ಲಿ ಅಲ್ಲಾವುದ್ದಿನ್ ಖಿಲ್ಜಿಯ ಪಾತ್ರವನ್ನು ರಣವೀರ್ ಸಿಂಗ್ ಮತ್ತು ರಾಣಿ ಪದ್ಮಿನಿಯ ಪಾತ್ರವನ್ನು ದೀಪಿಕಾ ಪಡುಕೋಣೆಯವರು ನಿಭಾಯಿಸಿದ್ದಾರೆ.
-
Khushbu Sundar: ಲವ್ ಜಿಹಾದ್ ಆರೋಪ ಹೊತ್ತಿದ್ದ ನಟಿ ಖುಷ್ಬೂ ಪತಿ ಸುಂದರ್ ರಾಜಕೀಯಕ್ಕೆ ಎಂಟ್ರಿ: ಮಧುರೈ ಸೆಂಟ್ರಲ್ನಿಂದ ಸ್ಪರ್ಧೆ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
March 29 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ -
"ಜೈಲಲ್ಲಿ ನಮಗೆ ಮೊಬೈಲ್ ಕೊಟ್ಟಿದ್ದು ಡಿಜಿಪಿ ಅಲೋಕ್ ಕುಮಾರ್" ಎಂದ ಕೈದಿಗಳು, ವಿಡಿಯೋ ವೈರಲ್ -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
ದುಬೈನ ಬುರ್ಜ್ ಖಲೀಫಾ ಎದುರು ತಾಯಿಯ ಸಂಭ್ರಮ: ಅಮ್ಮನ ಆಸೆ ಈಡೇರಿಸಿದ ಮಗಳ Video Viral -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್












Click it and Unblock the Notifications