ಅಡ್ವಾಣಿ, ಅಮಿತಾಬ್‌ಗೆ ಪದ್ಮ ವಿಭೂಷಣ ಪ್ರಶಸ್ತಿ
ನವದೆಹಲಿ, ಜ. 23 : ಗಣರಾಜ್ಯೋತ್ಸವಕ್ಕೆ ಮೂರು ದಿನಗಳು ಬಾಕಿ ಇರುವಾಗಲೇ ಕೇಂದ್ರ ಸರ್ಕಾರ ಪದ್ಮ ಶ್ರೇಣಿಯ ಪ್ರಶಸ್ತಿಗಳನ್ನು ಘೋಷಣೆ ಮಾಡಿದೆ. ಎಲ್.ಕೆ.ಅಡ್ವಾಣಿ, ರವಿಶಂಕರ್ ಗುರೂಜಿ, ಅಮಿತಾಬ್ ಬಚ್ಚನ್ ಅವರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ.
ಶುಕ್ರವಾರ ಬೆಳಗ್ಗೆ ಕೇಂದ್ರ ಸರ್ಕಾರ ಈ ಕುರಿತು ಆದೇಶ ಹೊರಡಿಸಿದೆ. ಬಿಜೆಪಿ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ, ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್, ಯೋಗಗುರು ಬಾಬಾ ರಾಮದೇವ್, ಆರ್ಟ್ ಆಫ್ ಲೀವಿಂಗ್‌ನ ರವಿಶಂಕರ್ ಗುರೂಜಿ ಸೇರಿದಂತೆ ಹಲವು ಗಣ್ಯರಿಗೆ ಪದ್ಮ ವಿಭೂಷಣ ಪ್ರಶಸ್ತಿಯನ್ನು ಘೋಷಣೆ ಮಾಡಲಾಗಿದೆ. [ಅಡ್ವಾಣಿ ಹಾಗೂ ರಾಮದೇವ್ ಗೆ ಪದ್ಮ ಪ್ರಶಸ್ತಿ?]

ಒಟ್ಟು 148 ಗಣ್ಯರಿಗೆ ಪದ್ಮ ಪುರಸ್ಕಾರವನ್ನು ಘೋಷಣೆ ಮಾಡಲಾಗಿದೆ. ಹಿರಿಯ ನಟ ದಿಲೀಪ್ ಕುಮಾರ್, ಎನ್.ಗೋಪಾಲಸ್ವಾಮಿ, ಕೆ.ಎಸ್ ವಾಜಪೇಯಿ, ಪಿ.ವಿ ರಾಜಾರಾಮನ್, ವಕೀಲ ಹರೀಶ್ ಸಾಳ್ವೆ ಮತ್ತು ಅಶೋಕ್ ಗುಲಾಟಿ ಅವರಿಗೆ ಪ್ರಶಸ್ತಿಯನ್ನು ಘೋಷಿಸಿದೆ.
ತುಮಕೂರು ಸಿದ್ದಗಂಗಾ ಮಠದ ಮಠಾಧಿಪತಿಗಳಾದ ಡಾ.ಶ್ರೀ ಶಿವಕುಮಾರ ಸ್ವಾಮಿಗಳಿಗೆ ಪದ್ಮ ಪ್ರಶಸ್ತಿ ಘೋಷಿಸಲಾಗಿದೆ. ಪರ್ವತಾರೋಹಿ ಅರುಣಿಮಾ ಸಿಂಗ್, ಪಿ.ವಿ ಸಿಂಧು, ಸರ್ದಾರ್ ಸಿಂಗ್‍ಗೆ ಪದ್ಮಶ್ರೀ ಪ್ರಶಸ್ತಿ ನೀಡಲಾಗಿದೆ. ಜನವರಿ 26ರಂದು ರಾಷ್ಟ್ರಪತಿಗಳು ಪದ್ಮ ಪ್ರಶಸ್ತಿಯನ್ನು ಪ್ರಧಾನ ಮಾಡಲಿದ್ದಾರೆ.












Click it and Unblock the Notifications