ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಫೇಲ್ ದಾಖಲೆಗಳನ್ನು ಕಳ್ಳ ವಾಪಸ್ ಕೊಟ್ಟನೆ?: ಚಿದಂಬರಂ ವ್ಯಂಗ್ಯ

|
Google Oneindia Kannada News

ನವದೆಹಲಿ, ಮಾರ್ಚ್‌ 09: ಕದ್ದಿದ್ದ ರಫೇಲ್ ದಾಖಲೆಗಳನ್ನು ಕಳ್ಳ ವಾಪಸ್ ನೀಡಿರಬೇಕು ಎಂದು ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ ಕೇಂದ್ರ ಸರ್ಕಾರವನ್ನು ವ್ಯಂಗ್ಯ ಮಾಡಿದ್ದಾರೆ.

ಕೇಂದ್ರದ ಪರವಾಗಿ ವಾದ ಮಂಡಿಸುತ್ತಿರುವ ಅಟಾರ್ನಿ ಜನರಲ್ ಕೆಕೆ.ವೇಣುಗೋಪಾಲ್ ಅವರು 'ದಾಖಲೆ ಕಳುವಾಗಿಲ್ಲ, ಝೆರಾಕ್ಸ್‌ ಪ್ರತಿ ಪಡೆಯಲಾಗಿದೆ' ಎಂದು ತಮ್ಮ ಹೇಳಿಕೆ ಬದಲಾಯಿಸಿದ್ದಕ್ಕೆ ಪ್ರತಿಯಾಗಿ ಚಿದಂಬರಂ ಮೇಲ್ಕಂಡಂತೆ ಮಾತನಾಡಿದ್ದಾರೆ.

ರಫೇಲ್ ದಾಖಲೆ ಕಳುವಾಗಿಲ್ಲ, ಫೋಟೋಕಾಪಿ ಮಾಡಲಾಗಿದೆ! ರಫೇಲ್ ದಾಖಲೆ ಕಳುವಾಗಿಲ್ಲ, ಫೋಟೋಕಾಪಿ ಮಾಡಲಾಗಿದೆ!

ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, ಬುಧವಾರ ರಫೇಲ್‌ ದಾಖಲೆಗಳು ಕಳ್ಳತನ ಆಗಿದ್ದವು ಎಂದಿದ್ದರು. ಗುರುವಾರದಷ್ಟೊತ್ತಿಗೆ ಕಳುವಾಗಿದ್ದು ಝೆರಾಕ್ಸ್‌ ಪ್ರತಿ ಎಂದಿದ್ದಾರೆ. ಹಾಗಿದ್ದರೆ ಕಳ್ಳ ದಾಖಲೆಗಳನ್ನು ವಾಪಸ್ ಕೊಟ್ಟು ಹೋದನೇನು ಎಂದು ಚಿದಂಬರಂ ನಗೆಯಾಡಿದ್ದಾರೆ.

P Chidambarams Jibe At Centre Over Rafale Files

ರಫೇಲ್ ವಿರುದ್ಧ ವಿಚಾರಣೆ ವೇಳೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಅವರು ರಫೇಲ್ ಕುರಿತ ದಾಖಲೆಗಳು ಕಳುವಾಗಿವೆ ಎಂದು ನ್ಯಾಯಾಲಯಕ್ಕೆ ಹೇಳಿದ್ದರು. ಇದು ಭಾರಿ ಟೀಕೆಗೆ ಒಳಗಾಗಿತ್ತು. ದಾಖಲೆಗಳನ್ನು ಜಾಗೃತೆಯಾಗಿಡಲಾಗದ ಸರ್ಕಾರ ದೇಶವನ್ನು ಜಾಗೃತವಾಗಿಡುತ್ತದೆಯೇ ಎಂದು ಪ್ರಶ್ನಿಸಲಾಗಿತ್ತು.

ರಫೇಲ್ ಡೀಲ್ ಅಗ್ನಿಕುಂಡದಲ್ಲಿ ರಹಸ್ಯ ದಾಖಲೆಗಳೊಂದಿಗೆ ಎನ್ ರಾಮ್ ರಫೇಲ್ ಡೀಲ್ ಅಗ್ನಿಕುಂಡದಲ್ಲಿ ರಹಸ್ಯ ದಾಖಲೆಗಳೊಂದಿಗೆ ಎನ್ ರಾಮ್

ಮಾರನೇಯ ದಿನವೇ ತನ್ನ ಹೇಳಿಕೆ ಬದಲಿಸಿದ ಅಟಾರ್ನಿ ಜನರಲ್, ಕಳುವಾಗಿರುವುದು ರಫೇಲ್ ದಾಖಲೆಯ ಝೆರಾಕ್ಸ್‌ ಪ್ರತಿ ಅಷ್ಟೆ ಎಂದು ಹೇಳಿದರು. ಇದು ಸಹ ಟೀಕೆಗೆ ಒಳಗಾಗಿದೆ.

English summary
Taking a swipe at Attorney General KK Venugopal's fresh remark on Rafale documents, senior Congress leader P Chidambaram said today that from "stolen documents" they became "photocopied documents" as the "thief" may have returned them.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X