ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ತುರ್ತು ಬಳಕೆಗೆ ಅನುಮತಿ ಪಡೆಯಲಿರುವ ಮೊದಲ ಕೊರೊನಾ ಲಸಿಕೆ ಕೋವಿಶೀಲ್ಡ್

|
Google Oneindia Kannada News

ನವದೆಹಲಿ, ಡಿಸೆಂಬರ್ 27: ಆಕ್ಸ್ ಫರ್ಡ್‌ನ ಕೋವಿಶೀಲ್ಡ್‌ ಕೊರೊನಾ ಲಸಿಕೆಗೆ ಭಾರತದಲ್ಲಿ ತುರ್ತು ಬಳಕೆ ಅನುಮತಿ ನೀಡುವ ಸಾಧ್ಯತೆ ಇದೆ ಎನ್ನುವ ಮಾತುಗಳು ಕೇಳಿಬರುತ್ತಿದೆ.

ಮೂಲಗಳ ಪ್ರಕಾರ ಭಾರತ್‌ ಬಯೋಟೆಕ್‌ ಅಭಿವೃದ್ಧಿಪಡಿಸುತ್ತಿರುವ ಕೋವ್ಯಾಕ್ಸಿನ್‌ ಲಸಿಕೆಯನ್ನು ತುರ್ತು ಸಂದರ್ಭದಲ್ಲಿ ಬಳಸಲು ಅನುಮತಿ ನೀಡುವುದಕ್ಕೆ ಇನ್ನೂ ಕಾಲಾವಕಾಶ ಬೇಕಾಗಿದೆ. ಏಕೆಂದರೆ, ಲಸಿಕೆಯ ಮೂರನೇ ಹಂತದ ಪ್ರಯೋಗವು ಇನ್ನೂ ನಡೆಯುತ್ತಿದೆ. ಹೀಗಾಗಿ ಆಕ್ಸ್‌ಫರ್ಡ್‌ ಲಸಿಕೆ 'ಕೋವಿಶೀಲ್ಡ್‌' ಭಾರತದಲ್ಲಿ ಬಿಡುಗಡೆಯಾಗಲಿರುವ ಮೊದಲ ಕೋವಿಡ್‌ ಲಸಿಕೆಯಾಗಿರಲಿದೆ ಎಂದು ಹೇಳಲಾಗುತ್ತಿದೆ.

 ಕೊರೊನಾ ಲಸಿಕೆ ಪಡೆದ ಸೌದಿ ರಾಜಕುಮಾರ ಕೊರೊನಾ ಲಸಿಕೆ ಪಡೆದ ಸೌದಿ ರಾಜಕುಮಾರ

ಜನವರಿಯಲ್ಲಿ ಕೋವಿಡ್ 19 ಲಸಿಕೆಯನ್ನು ವಿತರಿಸಲು ಪೂರ್ವಸಿದ್ಧತೆ ಆರಂಭವಾಗಿದ್ದು, ತುರ್ತು ಬಳಕೆಗಾಗಿ ಆಕ್ಸ್‌ಫರ್ಡ್‌ ಲಸಿಕೆಗೆ(ಕೋವಿಶೀಲ್ಡ್‌) ಮುಂದಿನ ವಾರ ಭಾರತೀಯ ಔಷಧ ನಿಯಂತ್ರಕರು (DCGI) ಒಪ್ಪಿಗೆ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, 'ಆಕ್ಸ್‌ಫರ್ಡ್‌ ಲಸಿಕೆಗೆ ಬ್ರಿಟನ್‌ನ ಔಷಧ ನಿಯಂತ್ರಕರು ಒಪ್ಪಿಗೆ ನೀಡಿದ ಬಳಿಕ, ಭಾರತದಲ್ಲಿರುವ ಕೋವಿಡ್‌-19 ತಜ್ಞರ ಸಮಿತಿಯು ಸಭೆ ನಡೆಸಲಿದೆ.

Oxford Covid-19 Vaccine May Become The First To Get Indian Regulator’s Nod For Emergency Use

ಇನ್ನು ಈಗಾಗಲೇ ಫೈಜರ್ ಲಸಿಕೆ ಬಳಕೆಗೆ ಬ್ರಿಟನ್‌, ಅಮೆರಿಕ ಸೇರಿದಂತೆ ಹಲವು ರಾಷ್ಟ್ರಗಳು ಅನುಮತಿ ನೀಡಿವೆ.

ಭಾರತದಲ್ಲಿ ಹಾಗೂ ವಿದೇಶದಲ್ಲಿ ನಡೆದ ಲಸಿಕೆಯ ಪ್ರಯೋಗ, ಸುರಕ್ಷತೆ ಹಾಗೂ ಪರಿಣಾಮದ ಫಲಿತಾಂಶವನ್ನು ಕೂಲಂಕುಷವಾಗಿ ಪರಿಶೀಲಿಸಿ, ಲಸಿಕೆಯ ತುರ್ತು ಬಳಕೆಗೆ ಅನುಮತಿಯ ಕುರಿತು ನಿರ್ಧಾರ ಕೈಗೊಳ್ಳಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಭಾರತೀಯ ಔಷಧ ಮಹಾ ನಿಯಂತ್ರಕರು ಸೂಚಿಸಿದ್ದ ಹೆಚ್ಚುವರಿ ದತ್ತಾಂಶಗಳನ್ನು, ಕೋವಿಶೀಲ್ಡ್‌ ಲಸಿಕೆ ತಯಾರಿಸುತ್ತಿರುವ ಸೆರಂ ಇನ್‌ಸ್ಟಿಟ್ಯೂಟ್‌ ಆಫ್‌ ಇಂಡಿಯಾ(ಎಸ್ಐಐ) ಕಳೆದ ವಾರ ನೀಡಿದೆ.

ಅಲ್ಲದೆ ತುರ್ತು ಬಳಕೆಗೆ ಅನುಮತಿ ನೀಡುವಂತೆ ಕೋರಿ ಭಾರತ್‌ ಬಯೋಟೆಕ್‌, ಸೆರಂ ಇನ್‌ಸ್ಟಿಟ್ಯೂಟ್‌ ಹಾಗೂ ಫೈಝರ್‌ ಕಂಪನಿಯು ತಿಂಗಳ ಆರಂಭದಲ್ಲಿ ಡಿಸಿಜಿಐಗೆ ಅರ್ಜಿ ಸಲ್ಲಿಸಿವೆ.

Recommended Video

ಬೆಂಗಳೂರು: ಯುಕೆಯಿಂದ ಬಂದ 1122ಬೆಂಗಳೂರಿಗರಿಗೆ ಕೋವಿಡ್ ಪರೀಕ್ಷೆ, 15 ಮಂದಿ ವರದಿ ಪಾಸಿಟಿವ್ಕ | Oneindia Kannada

English summary
With preparations underway for a possible vaccine-rollout by January, the Indian drug regulator is looking at the UK, which sources believe may give its nod to the Oxford Covid-19 vaccine next week, before deciding on giving emergency use authorisation to the Serum Institute that is manufacturing the shots here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X