ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯ ತುರ್ತು ಬಳಕೆಗೆ ಷರತ್ತು ಬದ್ಧ ಅನುಮತಿ

|
Google Oneindia Kannada News

ನವದೆಹಲಿ, ಜನವರಿ 1: ಹೊಸ ವರ್ಷದ ಸಂಭ್ರಮದಲ್ಲಿರುವ ದೇಶದ ಜನತೆಗೆ ಸಂತಸದ ಸುದ್ದಿಯೊಂದು ದೊರೆತಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ವೈರಸ್ ಲಸಿಕೆಯೊಂದರ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ-ಆಸ್ಟ್ರಾಜೆನಿಕಾ ಸಹಯೋಗದಲ್ಲಿ ಪುಣೆಯ ಸೆರಮ್ ಇನ್‌ಸ್ಟಿಟ್ಯೂಟ್ ತಯಾರಿಸಿದ 'ಕೋವಿಶೀಲ್ಡ್' ಲಸಿಕೆಯ ಷರತ್ತುಬದ್ಧ ತುರ್ತು ಬಳಕೆಗೆ ಪರಿಣತರ ಸಮಿತಿ ಶುಕ್ರವಾರ ಅನುಮೋದನೆ ನೀಡಿದೆ. ಈ ಮೂಲಕ ಭಾರತದಲ್ಲಿ ಬಳಕೆಯ ಅನುಮತಿ ಪಡೆದ ಮೊದಲ ಲಸಿಕೆ ಎನಿಸಿಕೊಂಡಿದೆ. ಈಗಾಗಲೇ ಅರ್ಜೆಂಟೈನಾ ಮತ್ತು ಬ್ರಿಟನ್ ದೇಶಗಳಲ್ಲಿ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಮತ್ತು ಔಷಧ ಉತ್ಪಾದಕ ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಿದ ಲಸಿಕೆ ತುರ್ತು ಬಳಕೆಯ ಅನುಮತಿ ಪಡೆದುಕೊಂಡಿದೆ.

ಪರಿಣತರ ಸಮಿತಿಯು ಭಾರತದಲ್ಲಿ ಕೋವಿಶೀಲ್ಡ್ ತುರ್ತು ಬಳಕೆಗೆ ಅನುಮತಿ ನೀಡಿದ್ದರೂ ಅದರ ಅಂತಿಮ ನಿರ್ಧಾರ ತೆಗೆದುಕೊಳ್ಳುವುದನ್ನು ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ (ಡಿಸಿಜಿಐ) ಬಿಟ್ಟಿದೆ ಎಂದು ತಿಳಿಸಿದೆ. ಮುಂದೆ ಓದಿ.

ಐದು ಕೋಟಿ ಲಸಿಕೆ ಸಿದ್ಧ

ಐದು ಕೋಟಿ ಲಸಿಕೆ ಸಿದ್ಧ

ಭಾರತ್ ಬಯೋಟೆಕ್ ಮತ್ತು ಐಸಿಎಂಆರ್ ಜತೆಗೂಡಿ ಅಭಿವೃದ್ಧಿಪಡಿಸಿರುವ 'ಕೋವ್ಯಾಕ್ಸಿನ್' ಲಸಿಕೆಯ ತುರ್ತು ಬಳಕೆಗೂ ಅನುಮತಿ ಕೋರಲಾಗಿತ್ತು. ಆದರೆ ಈ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ. ಭಾರತದಲ್ಲಿ ಆಕ್ಸ್‌ಫರ್ಡ್ ಲಸಿಕೆ ತಯಾರಿಸುತ್ತಿರುವ ಪುಣೆಯಲ್ಲಿನ ಸೆರಮ್ ಇನ್‌ಸ್ಟಿಟ್ಯೂಟ್ ಈಗಾಗಲೇ 5 ಕೋಟಿಗೂ ಅಧಿಕ ಕೋವಿಶೀಲ್ಡ್ ಲಸಿಕೆಗಳ ಡೋಸ್‌ಗಳನ್ನು ಸಿದ್ಧಪಡಿಸಿಕೊಂಡಿದೆ ಎಂದು ಹೇಳಲಾಗಿದೆ.

ಎರಡೂ ಅರ್ಜಿಗಳ ಪರಿಶೀಲನೆ

ಎರಡೂ ಅರ್ಜಿಗಳ ಪರಿಶೀಲನೆ

ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆಯ (ಸಿಡಿಎಸ್‌ಸಿಒ) ಪರಿಣತರ ಸಮಿತಿಯು ಶುಕ್ರವಾರ ಸಭೆ ಸೇರಿ ಲಸಿಕೆಗಳ ತುರ್ತು ಬಳಕೆಯ ಅಧಿಕಾರ ನೀಡುವ ಕುರಿತು ಸಮಾಲೋಚನೆ ನಡೆಸಿತ್ತು. ಸೆರಮ್ ಮತ್ತು ಭಾರತ್ ಬಯೋಟೆಕ್ ಎರಡೂ ಸಂಸ್ಥೆಗಳ ಅರ್ಜಿಗಳನ್ನು ಚರ್ಚಿಸಲಾಗಿತ್ತು.

ದತ್ತಾಂಶ ಮತ್ತು ಮಾಹಿತಿ ವಿಶ್ಲೇಷಣೆ

ದತ್ತಾಂಶ ಮತ್ತು ಮಾಹಿತಿ ವಿಶ್ಲೇಷಣೆ

ಭಾರತದಲ್ಲಿ ನಡೆಸಲಾದ ಲಸಿಕೆ ಪ್ರಯೋಗಗಳಿಂದ ದೊರೆತ ಮಾಹಿತಿಗಳನ್ನು ಪರಿಶೀಲಿಸಿದ್ದ ಪರಿಣತರ ಸಮಿತಿ, ಹೆಚ್ಚುವರಿ ದತ್ತಾಂಶ ಹಾಗೂ ಮಾಹಿತಿಗಳನ್ನು ನೀಡುವಂತೆ ಈ ಸಂಸ್ಥೆಗಳಿಗೆ ಸೂಚಿಸಿತ್ತು. ಅದರಂತೆ ಅವುಗಳು ನೀಡಿದ ಮಾಹಿತಿಗಳನ್ನು ವಿಶ್ಲೇಷಣೆಗೆ ಒಳಪಡಿಸಿ ಸೆರಮ್ ಸಂಸ್ಥೆಯ ಲಸಿಕೆಗೆ ಮೊದಲ ಅನುಮತಿ ನೀಡಲಾಗಿದೆ.

ಕೋವಿಶೀಲ್ಡ್‌ಗೆ ಅನುಮತಿ ಏಕೆ?

ಕೋವಿಶೀಲ್ಡ್‌ಗೆ ಅನುಮತಿ ಏಕೆ?

ಲಸಿಕೆಯು ಎರಡು ಡೋಸ್‌ಗಳಲ್ಲಿ ಶೇ 90ರಷ್ಟು ಫಲಿತಾಂಶ ನೀಡಿದೆ ಎಂದು ದತ್ತಾಂಶಗಳ ವಿಶ್ಲೇಷಣೆ ತಿಳಿಸಿದೆ. ಎಲ್ಲ ವಯೋಮಾನದಲ್ಲಿಯೂ ಪರಿಣಾಮಕಾರಿ ಎನಿಸಿದೆ. ಸಾಮಾನ್ಯವಾಗಿ ಲಸಿಕೆಗಳನ್ನು ಶೀತ ಪೆಟ್ಟಿಗೆಯಲ್ಲಿ ಇರಿಸಬೇಕಿದ್ದು, ಆಕ್ಸ್‌ಫರ್ಡ್ ಲಸಿಕೆಯ ಸಂಗ್ರಹ ಸುಲಭವಿದೆ. ಈ ಕಾರಣದಿಂದ ಕೋವಿಶೀಲ್ಡ್ ಲಸಿಕೆಗೆ ಅನುಮೋದನೆ ಸಿಕ್ಕಿದೆ.

ಫೈಜರ್ ಲಸಿಕೆಯಿಂದಲೂ ಅರ್ಜಿ

ಫೈಜರ್ ಲಸಿಕೆಯಿಂದಲೂ ಅರ್ಜಿ

ಭಾರತದಲ್ಲಿ ಸೆರಮ್ ಇನ್‌ಸ್ಟಿಟ್ಯೂಟ್, ಭಾರತ್ ಬಯೋಟೆಕ್ ಮತ್ತು ಅಮೆರಿಕದ ಫೈಜರ್ ಲಸಿಕೆಗಳು ತುರ್ತು ಬಳಕೆಯ ಅನುಮತಿಗೆ ಕೋರಿದ್ದವು. ಫೈಜರ್ ಲಸಿಕೆಯ ಸಂಗ್ರಹ, ಸಾಗಾಣಿಗೆ ಮತ್ತು ಹಂಚಿಕೆ ಹೆಚ್ಚು ಸವಾಲಿನದ್ದಾಗಿ ಲಸಿಕೆ ದುಬಾರಿ ಕೂಡ ಆಗಿದೆ. ಹೀಗಾಗಿ ಭಾರತದಲ್ಲಿ ಫೈಜರ್ ಲಸಿಕೆಗೆ ಅನುಮತಿ ನೀಡುವ ಬಗ್ಗೆ ಇನ್ನೂ ತೀರ್ಮಾನ ತೆಗೆದುಕೊಂಡಿಲ್ಲ ಎನ್ನಲಾಗಿದೆ.

English summary
Oxford COVID-19 Vaccine Covishield becomes first corona vaccine to get conditional approval in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X