ನರೇಂದ್ರ ಮೋದಿ ಸಮೀಕ್ಷೆ: ನೋಟು ರದ್ದು ಬೆಂಬಲಿಸಿದ ಶೇ 93ರಷ್ಟು ಜನ!

Posted By:
Subscribe to Oneindia Kannada

ನವದೆಹಲಿ, ನವೆಂಬರ್ 24: ನೋಟು ರದ್ದು ನಿರ್ಧಾರವನ್ನು ಶೇ 93ರಷ್ಟು ಮಂದಿ ಬೆಂಬಲಿಸಿದ್ದಾರೆ. ಇದ್ಯಾವುದು ಹೊಸ ಸಮೀಕ್ಷೆ ಅಂತೀರಾ? ಹೌದು ಇದು ಹೊಸ ಸಮೀಕ್ಷೆಯೇ. ನರೇಂದ್ರ ಮೋದಿ ಅಪ್ಲಿಕೇಷನ್ ನಲ್ಲಿ ನಡೆದ ಈ ಸಮೀಕ್ಷೆಯಲ್ಲಿ ಐದು ಲಕ್ಷ ಮಂದಿ ಭಾಗವಹಿಸಿದ್ದರು. ಈ ಬಗ್ಗೆ ಹೇಳಿಕೆಯನ್ನು ವೆಬ್ ಸೈಟ್ ನಲ್ಲಿ ಪ್ರಧಾನಿ ಮೋದಿ ಹಾಕಿದ್ದು, ಶೇ 2ರಷ್ಟು ಮಂದಿಗೆ ಮಾತ್ರ ಈ ನಿರ್ಧಾರ ನಕಾರಾತ್ಮಕವಾಗಿ ಕಂಡಿದೆ.

ನರೇಂದ್ರ ಮೋದಿ ವೆಬ್ ಸೈಟ್ ನಲ್ಲಿ ಹಾಕಿರುವ ಇನ್ ಫೋ ಗ್ರಾಫಿಕ್ ಪ್ರಕಾರ, ಪ್ರತಿ ನಿಮಿಷಕ್ಕೆ 400 ಪ್ರತಿಕ್ರಿಯೆ ಬಂದಿದೆ. ಎರಡು ಸಾವಿರ ವಿವಿಧ ಸ್ಥಳಗಳಿಂದ ಜನರು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಈ ಪೈಕಿ ಶೇ 93 ಮಂದಿ ಭಾರತದವರು. ಅದರಲ್ಲಿ ಶೇ 24 ಮಂದಿ ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರು ಹಿಂದಿಯಲ್ಲಿ ಉತ್ತರಿಸಿದ್ದಾರೆ.[ಸಮೀಕ್ಷೆ ತೆರೆದಿಟ್ಟ ರಹಸ್ಯ: ನೋಟು ರದ್ದು ಬಗ್ಗೆ ಜನ ಏನಂತಾರೆ?]

Narendra modi

ಬುಧವಾರ ಮಧ್ಯಾಹ್ನ 3.30ರ ವೇಳೆಗೆ ಸಮೀಕ್ಷೆಯ ಸಂಖ್ಯೆಗಳನ್ನು ಬಿಡುಗಡೆ ಮಾಡಲಾಗಿದೆ. ಐದು ಲಕ್ಷ ಮಂದಿ ಹದಿನೈದು ಗಂಟೆ ಅವಧಿಯೊಳಗೆ ಸಮೀಕ್ಷೆಯಲ್ಲಿ ಭಾಗವಹಿಸಿದ್ದಾರೆ. ಮಂಗಳವಾರ ಬೆಳಗ್ಗೆ 10 ಗಂಟೆಗೆ ಸಮೀಕ್ಷೆ ಮತದಾನ ಶುರುವಾಗಿತ್ತು. ಇದರ ಒಟ್ಟು ಫಲಿತಾಂಶ ಹೀಗಿದೆ.

ಶೇ 98- ಭಾರತದಲ್ಲಿ ಕಪ್ಪು ಹಣ ಇದೆ
ಶೇ 99- ಭ್ರಷ್ಟಾಚಾರ, ಕಪ್ಪು ಹಣದ ವಿರುದ್ಧ ಹೋರಾಡಿ, ತೊಲಗಿಸಬೇಕು
ಶೇ 90- ಕಪ್ಪು ಹಣವನ್ನು ತಡೆಯಲು ಸರಕಾರ ಕೈಗೊಂಡ ಕ್ರಮ ಅದ್ಭುತವಾಗಿದೆ
ಶೇ 92- ಭ್ರಷ್ಟಾಚಾರ ವಿರುದ್ಧ ಮೋದಿ ಸರಕಾರದ ಪ್ರಯತ್ನ ತುಂಬ ಚೆನ್ನಾಗಿದೆ/ಚೆನ್ನಾಗಿದೆ
ಶೇ 90-ಮೋದಿ ಸರಕಾರದ ನೋಟು ರದ್ದು ತೀರ್ಮಾನಕ್ಕೆ ಬೆಂಬಲ
ಶೇ 92-ನೋಟು ರದ್ದು ನಿರ್ಧಾರದಿಂದ ಕಪ್ಪು ಹಣ ನಿಯಂತ್ರಣಕ್ಕೆ ಅನುಕೂಲ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Demonetisation has the support of over 93 percent of the 5,00,000 people who took the survey on the Narendra Modi app.
Please Wait while comments are loading...