ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಜಿನಿಯರಿಂಗ್ ಪದವಿಧರರ ವ್ಯಥೆ ಬಿಚ್ಚಿಟ್ಟ ಸಮೀಕ್ಷೆ

|
Google Oneindia Kannada News

ನವದೆಹಲಿ, ಜನವರಿ 25: ಇಂಜಿನಿಯರಿಂಗ್ ಪದವಿ ಮುಗಿಸಿದರೆ ಲೈಫ್ ಸೆಟಲ್ ಎಂಬ ಕಾಲವೊಂದಿತ್ತು. ಆದರೆ ಇದೀಗ ಸಿಕ್ಕಿರುವ ಅಂಕಿ ಅಂಶಗಳು ಇಂಜಿನಿಯರಿಂಗ್ ಕತೆ-ವ್ಯಥೆ ಎರಡನ್ನು ಹೇಳುತ್ತಿವೆ.

ದೇಶದಲ್ಲಿನ ಶೇ. 80 ರಷ್ಟು ಜನ ಇಂಜಿನಿಯರಿಂಗ್ ಪದವಿಧರರಿಗೆ ಉದ್ಯೋಗವಿಲ್ಲ. ಹೌದು ಇದು ಸತ್ಯ. ಸಮೀಕ್ಷೆಯೊಂದು ಇಂಥ ವರದಿಯನ್ನು ನಮ್ಮ ಮುಂದೆ ಬಿಚ್ಚಿಟ್ಟಿದೆ.[2015ರ 10 ಅತಿಕೆಟ್ಟ ಕೆಲಸಗಳು; ನಿಮ್ಮ ವೃತ್ತಿ ಯಾವುದು?]

jobs

ಅಸ್ಪಿರಿಂಗ್ ಮೈಂಡ್ಸ್ ನ್ಯಾಶನಲ್ ಎಂಪ್ಲೊಯಬಲಿಟಿ ಸಂಸ್ಥೆ ನೀಡಿರುವ ವರದಿ ಇಂಜಿನಿಯರಿಂಗ್ ಪದವಿ ಪಡೆದವರ ಸದ್ಯದ ಕತೆಯನ್ನು ಹೇಳುತ್ತಿದೆ. 2015 ರಲ್ಲಿ ದೇಶದ 650 ಕಾಲೇಜಿನಿಂದ ಇಂಜಿನಿಯರಿಂಗ್ ಪದವಿ ಪಡೆದು ಹೊರಕ್ಕೆ ಬಂದ 1.5 ಲಕ್ಷ ಜನರು ಉದ್ಯೋಗವಿಲ್ಲದೇ ಪರದಾಡುತ್ತಿದ್ದಾರೆ.[ಧಮ್ ಹೊಡೆಯೋದ್ರಲ್ಲೂ ಮಹಿಳೆಯರದ್ದೇ ಮೇಲುಗೈ!]

ನವದೆಹಲಿಯಿಂದ ಅತಿ ಹೆಚ್ಚು ಜನ ಪದವಿಧರರು ಹೊರಬಿದ್ದರೆ, ಬೆಂಗಳೂರು ಮತ್ತು ಪಶ್ಚಿಮದ ರಾಜ್ಯಗಳಿಗೆ ನಂತರದ ಸ್ಥಾನ. ಕೇರಳ ಮತ್ತು ಓರಿಸ್ಸಾ ಅತಿ ಹೆಚ್ಚು ಉದ್ಯೋಗವಕಾಶಗಳನ್ನು ಕಲ್ಪಿಸಿಕೊಟ್ಟಿದೆ ಎಂದು ಅಸ್ಪಿರಿಂಗ್ ಮೈಂಡ್ಸ್ ಸಂಸ್ಥೆಯ ಸಿಟಿಒ ವರುಣ್ ಅಗರ್ ವಾಲ್ ಮಾಹಿತಿ ನೀಡಿದ್ದಾರೆ. ಒಟ್ಟಿನಲ್ಲಿ ಪಡೆದ ಡಿಗ್ರಿ ಮತ್ತು ಕೌಶಲ್ಯಕ್ಕೆ ತಕ್ಕಂತೆ ಇಂಜಿನಿಯರಿಂಗ್ ಪದವಿಧರರಿಗೆ ಕೆಲಸ ಸಿಗುತ್ತಿಲ್ಲ ಎಂಬ ಅಂಶವನ್ನು ಸಮೀಕ್ಷೆ ಬಹಿರಂಗ ಮಾಡಿದೆ.

English summary
There seems to be a significant skill gap in the country as 80 per cent of the engineering graduates are "unemployable", says a report, highlighting the need for an upgraded education and training system. Educational institutions train millions of youngsters but corporates often complain that they do not get the necessary skill and talent required for a job.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X