ಅಮರನಾಥ ಯಾತ್ರಿಕರಿಗೆ ಭಾರತ ಸೈನ್ಯದ ರಕ್ಷಣೆ

ಶ್ರೀನಗರ. ಜು. 02: ಪವಿತ್ರ ಅಮರನಾಥ ಯಾತ್ರೆಗೆ ಚಾಲನೆ ದೊರೆತಿದೆ. ಜುಲೈ 2 ರಂದು ಆರಂಭವಾಗಿರುವ ಯಾತ್ರೆ ಆಗಸ್ಟ್ 29 ರಂದು ಕೊನೆಗೊಳ್ಳಲಿದೆ. ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಯಾತ್ರೆಗೆ ಚಾಲನೆ ನೀಡಿದ್ದಾರೆ.

ದಕ್ಷಿಣ ಕಾಶ್ಮೀರದ ಪಹಲ್ಗಾಂವ್ ಮತ್ತು ಉತ್ತರ ಕಾಶ್ಮೀರದ ಬಲ್ತಾಲ್ ಮಾರ್ಗಗಳಲ್ಲಿ ಯಾತ್ರೆ ಸಾಗಲಿದೆ. ಎರಡೂ ಮಾರ್ಗಗಳ ಉದ್ದಕ್ಕೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡ ಮತ್ತು ರಾಜ್ಯ ವಿಪತ್ತು ನಿರ್ವಹಣಾ ತಂಡವನ್ನು ನಿಯೋಜಿಸಲಾಗಿದ್ದು ಯಾತ್ರಾರ್ಥಿಗಳ ಹಿತ ಕಾಪಾಡವ ಕಾರ್ಯ ನಿರ್ವಹಿಸಲಿದೆ.[ಉತ್ತರಾಖಂಡ ಭಾರೀ ಮಳೆಯಲ್ಲೇ ಯಾತ್ರೆ]

amarnath

ಬುಧವಾರ ಮುಂಜಾನೆ ಜಮ್ಮುವಿನಿಂದ ಸಾವಿರ ಜನ ಯಾತ್ರಿಕರ ಮೊದಲ ತಂಡವನ್ನು ರಾಜ್ಯಖಾತೆ ಆರೋಗ್ಯ ಸಚಿವ ಚೌಧರಿ ಲಾಲ್‌ಸಿಂಗ್ ಬೀಳ್ಕೊಟ್ಟರು. ಮುಂಜಾನೆ 5.30ಕ್ಕೆ ಹೊರಟ ತಂಡವು ಪಹಲ್ಗಾಂವ್ ಶಿಬಿರವನ್ನು ತಲುಪಿ ಅಲ್ಲಿಂದ ಗುರುವಾರ ಬೆಳಿಗ್ಗೆ ಮುಂದುವರಿಯಲಿದೆ.

ಯಾತ್ರಿಕರ ಸುರಕ್ಷತೆಗಾಗಿ ಸೇನೆ, ಅರೆ ಸೇನಾಪಡೆ ಮತ್ತು ರಾಜ್ಯ ಪೊಲೀಸ್ ಪಡೆಗಳಿಂದ ಮೂರು ಹಂತಗಳ ಭದ್ರತೆ ಒದಗಿಸಲಾಗಿದೆ. ಮಾತ್ರವಲ್ಲದೆ ರಾಜ್ಯ ಮತ್ತು ಕೇಂದ್ರ ವಿಪತ್ತು ನಿರ್ವಹಣಾ ತಂಡಗಳನ್ನೂ ನಿಯೋಜಿಸಲಾಗಿದೆ. ಸುಮಾರು ಎರಡು ತಿಂಗಳ ಕಾಲ ನಡೆಯಲಿರುವ ಯಾತ್ರೆಗಯಲ್ಲಿ ಸಾವಿರಾರು ಜನ ಭಕ್ತರು ಪಾಲ್ಗೊಳ್ಳುತ್ತಾರೆ. ಭಕ್ತರು ಹಿಮಲಿಂಗದ ದರ್ಶನ ಪಡೆದು ಪುನೀತರಾಗುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+