ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಮ್ಮು & ಕಾಶ್ಮೀರ ಚೀನಾದ ಭಾಗ ಎಂದು ತೋರಿಸಿದ ಟ್ವಿಟ್ಟರ್ ವಿರುದ್ಧ ಆಕ್ರೋಶ

|
Google Oneindia Kannada News

ನವದೆಹಲಿ, ಅಕ್ಟೋಬರ್ 19: ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವು ಚೀನಾದ ಭಾಗ ಎಂದು ತೋರಿಸುವ ಮೂಲಕ ಯಡವಟ್ಟು ಮಾಡಿದ ಟ್ವಿಟ್ಟರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಇದು ತಾಂತ್ರಿಕ ಸಮಸ್ಯೆಯಿಂದ ಆದ ಲೋಪ ಎಂದು ಟ್ವಿಟ್ಟರ್ ಸ್ಪಷ್ಟೀಕರಣ ನೀಡಿದೆ.

ಲಡಾಖ್ ರಾಜಧಾನಿ ಲೇಹ್‌ನಲ್ಲಿ ಯುದ್ಧ ಸ್ಮಾರಕವೊಂದರಲ್ಲಿ ಪತ್ರಕರ್ತರೊಬ್ಬರು ನೇರ ಪ್ರಸಾರ ಆರಂಭಿಸಿದಾಗ ಆ ಪ್ರದೇಶವು ಚೀನಾದಲ್ಲಿದೆ ಎಂದು ಟ್ವಿಟ್ಟರ್ ತೋರಿಸಿತ್ತು. ದೇಶಕ್ಕಾಗಿ ಹೋರಾಡಿ ಪ್ರಾಣತ್ಯಾಗ ಮಾಡಿದ ಹುತಾತ್ಮರ ಸ್ಮರಣಾರ್ಥ ಸ್ಥಾಪಿಸಲಾಗಿರುವ 'ಹಾಲ್ ಆಫ್ ಫೇಮ್' ಸ್ಮಾರಕದಲ್ಲಿ ಲೇಖಕ ಹಾಗೂ ರಾಷ್ಟ್ರೀಯ ಭದ್ರತಾ ವಿಶ್ಲೇಷಕ ನಿತಿನ್ ಗೋಖಲೆ ಟ್ವಿಟ್ಟರ್‌ನಲ್ಲಿ ಲೈವ್ ಪ್ರಸಾರ ನಡೆಸಿದ್ದರು. ಆ ವಿಡಿಯೋದ ಟ್ಯಾಗ್‌ನಲ್ಲಿ 'ಜಮ್ಮು ಮತ್ತು ಕಾಶ್ಮೀರ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ' ಎಂದು ತೋರಿಸಿದೆ.

ಚೀನಾ-ಭಾರತ ಗೌಪ್ಯ ಚರ್ಚೆ, ಫಲಿತಾಂಶದ ಬಗ್ಗೆ ಊಹೆ ಬೇಡ: ಜೈಶಂಕರ್ಚೀನಾ-ಭಾರತ ಗೌಪ್ಯ ಚರ್ಚೆ, ಫಲಿತಾಂಶದ ಬಗ್ಗೆ ಊಹೆ ಬೇಡ: ಜೈಶಂಕರ್

ಕೂಡಲೇ ಇದನ್ನು ಗಮನಿಸಿದ ನಿತಿನ್ ಹಾಗೂ ಇತರೆ ಬಳಕೆದಾರರು ಟ್ವಿಟ್ಟರ್ ಸಂಸ್ಥೆ ಹಾಗೂ ಟ್ವಿಟ್ಟರ್ ಇಂಡಿಯಾವನ್ನು ಟ್ಯಾಗ್ ಮಾಡಿ ತಪ್ಪನ್ನು ತೋರಿಸಿದ್ದಾರೆ. ಈ ಘಟನೆ ಭಾರತದ ಟ್ವಿಟ್ಟರ್ ಬಳಕೆದಾರರ ಆಕ್ರೋಶಕ್ಕೆ ಕಾರಣವಾಗಿದೆ.

 Outrage Against Twitter After It Shows J&K As Territory Of China

ಇತರೆ ಟ್ವಿಟ್ಟರ್ ಬಳಕೆದಾರರು ಇದೇ ಸಂದರ್ಭದಲ್ಲಿ ಫೋಟೊಗಳನ್ನು ಅಪ್‌ಲೋಡ್ ಮಾಡುವ ಹಾಗೂ ಲೈವ್ ಪ್ರಸಾರ ಮಾಡುವ ಮೂಲಕ ಲೇಹ್ ಅನ್ನು ಟ್ಯಾಗ್ ಮಾಡಲು ಪ್ರಯತ್ನಿಸಿದಾಗಲೂ ಅದು ಚೀನಾದ ಪ್ರದೇಶವೆಂದೇ ತೋರಿಸಿದೆ. ಹಾಲ್ ಆಫ್ ಫೇಮ್ ಸ್ಥಳವು ಚೀನಾದ ಭಾಗವೆಂದು ಟ್ವಿಟ್ಟರ್ ಪ್ರದರ್ಶಿಸಿದೆ.

Breaking: ಲಡಾಖ್‌ನಲ್ಲಿ ಚೀನಾ ಸೈನಿಕನ ಬಂಧನBreaking: ಲಡಾಖ್‌ನಲ್ಲಿ ಚೀನಾ ಸೈನಿಕನ ಬಂಧನ

ಇದಕ್ಕೆ ತಡವಾಗಿ ಪ್ರತಿಕ್ರಿಯೆ ನೀಡಿರುವ ಟ್ವಿಟ್ಟರ್, ಈ ಸಮಸ್ಯೆ ತಾಂತ್ರಿಕ ದೋಷದಿಂದ ಸಂಭವಿಸಿದೆ. ನಮ್ಮ ತಂಡ ಇದರ ಬಗ್ಗೆ ತನಿಖೆ ನಡೆಸುತ್ತಿದೆ. ಈ ಸಮಸ್ಯೆ ಬಗ್ಗೆ ನಮಗೆ ಭಾನುವಾರವೇ ಗೊತ್ತಾಗಿರುವುದು ಎಂದು ಹೇಳಿದೆ. ಆದರೆ ಟ್ವಿಟ್ಟರ್ ವಿರುದ್ಧ ಕೇಂದ್ರ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ.

 Outrage Against Twitter After It Shows J&K As Territory Of China

ಕೆಲವು ದಿನಗಳ ಹಿಂದೆ ಕ್ಸಿಯೋಮಿ ಫೋನ್‌ಗಳಲ್ಲಿ ಅರುಣಾಚಲ ಪ್ರದೇಶದ ಹವಾಮಾನ ವರದಿ ತೋರಿಸದೆ ಇರುವುದು ಅಸಮಾಧಾನಕ್ಕೆ ಕಾರಣವಾಗಿತ್ತು. ಅರುಣಾಚಲ ಪ್ರದೇಶದ ಹೆಸರನ್ನು ಕ್ಸಿಯೋಮಿ ಮೊಬೈಲ್ ಪ್ರದರ್ಶಿಸುತ್ತಿರಲಿಲ್ಲ.

English summary
Indian twitter users slams Twitter and calls govt a strong action against the social media firm after it displayed Jammu and Kashmir as territory of China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X