ನಮ್ಮ ವಿಮಾನ ಹೈಜಾಕ್ ಆಗಿದೆ, ಮೋದೀಜಿ, ಕಾಪಾಡಿ!
ಸರ್, ನಾವು ಜೆಟ್ ಏರ್ವೇಸ್ ವಿಮಾನದಲ್ಲಿದ್ದೇವೆ. ವಿಮಾನ ಹೈಜಾಕ್ ಆಗಿದೆ ಎನ್ನಿಸುತ್ತಿದೆ. ದಯವಿಟ್ಟು ನಮ್ಮನ್ನು ಕಾಪಾಡಿ' ಎಂದು ಪ್ರಯಾಣಿಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡಿದ ನಾಟಕೀಯ ಘಟನೆ ಇಂದು ನಡೆದಿದೆ.
ಜೈಪುರ, ಏಪ್ರಿಲ್ 28: 'ಸರ್, ನಾವು ಜೆಟ್ ಏರ್ವೇಸ್ ವಿಮಾನದಲ್ಲಿದ್ದೇವೆ. ವಿಮಾನ ಹೈಜಾಕ್ ಆಗಿದೆ ಎನ್ನಿಸುತ್ತಿದೆ. ದಯವಿಟ್ಟು ನಮ್ಮನ್ನು ಕಾಪಾಡಿ...' ಎಂದು ಮುಂಬೈನಿಂದ ದೆಹಲಿಯತ್ತ ಸಾಗುತ್ತಿದ್ದ ವಿಮಾನದಲ್ಲಿದ್ದ ಪ್ರಯಾಣಿಕನೊಬ್ಬ ಪ್ರಧಾನಿ ನರೇಂದ್ರ ಮೋದಿಯವರಿಗೆ ಟ್ವೀಟ್ ಮಾಡಿದ ನಾಟಕೀಯ ಘಟನೆ ಇಂದು (ಏಪ್ರಿಲ್ 28) ನಡೆದಿದೆ. ಘಟನೆ ಕೆಲ ಕಾಲ ಆತಂಕ ಸೃಷ್ಟಿಸಿತ್ತು.
@narendramodi sir we have been in jet airways flight for past 3 hrs , looks like hijacked, pl help 9W355,. pic.twitter.com/bcRXcCLgic
— Nitin (@nitinvarma5n) 27 April 2017
176 ಪ್ರಯಾಣಿಕರನ್ನು ಹೊತ್ತಿದ್ದ ಜೆಟ್ ಏರ್ವೇಸ್ 9W355 ವಿಮಾನ ಮುಂಬೈನಿಂದ ದೆಹಲಿಯತ್ತ ಹೊರಟಿತ್ತು. ಆದರೆ ದೆಹಲಿಯಲ್ಲಿನ ಹವಾಮಾನ ವೈಪರೀತ್ಯದಿಂದಾಗಿ ವಿಮಾನವನ್ನು ಜೈಪುರದಲ್ಲೇ ಇಳಿಸಲಾಗಿತ್ತು. ದೆಹಲಿಗೆ ಹೋಗಬೇಕಿದ್ದ ವಿಮಾನ ಜೈಪುರದಲ್ಲಿ ಇಳಿದಿದ್ದನ್ನು ತಿಳಿದ ನಿತಿನ್ ಎಂಬ ಪ್ರಯಾಣಿಕ ಗಾಬರಿಗೊಂಡಿದ್ದಾರೆ.[ಲಿಬಿಯಾ ವಿಮಾನ ಅಪಹರಣ, 109 ಪ್ರಯಾಣಿಕರ ಬಿಡುಗಡೆ]

ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳುವ ಮೊದಲೇ ವಿಮಾನ ಹೈಜಾಕ್ ಆಗಿದೆ ಎಂಬ ತೀರ್ಮಾನಕ್ಕೆ ಬಂದು ಸೀದಾ ಪ್ರಧಾನಿ ಮೋದಿಯವರಿಗೆ ವಿಮಾನದಲ್ಲೇ ಕೂತು ಟ್ವೀಟ್ ಮಾಡಿಬಿಟ್ಟಿದ್ದಾರೆ!
We have been in jet flight for past 3 hrs, look like hijacked, Can I get an update from authority what is the exact reason. pic.twitter.com/bGNrq7GX5e
— Nitin (@nitinvarma5n) 27 April 2017
'ಮೂರು ಗಂಟೆಯಿಂದ ನಾವು ವಿಮಾನದಲ್ಲೇ ಕುಳಿತಿದ್ದೇವೆ, ಏನಾಗುತ್ತಿದೆ ಎಂಬುದೇ ತಿಳಿಯುತ್ತಿಲ್ಲ. ಬಹುಶಃ ವಿಮಾನ ಹೈಜಾಕ್ ಆಗಿದೆ. ದಯವಿಟ್ಟು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿ' ಎಂದು ಸಹ ಅವರು ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳು ಕೂಲಂಕಷವಾಗಿ ವಿಚಾರಿಸಿದಾಗ, ದೆಹಲಿಗೆ ತೆರಳಬೇಕಿದ್ದ ಜೆಟ್ ಏರ್ವೇಸ್ ನ ಹಲವು ವಿಮಾನಗಳು ಹವಾಮಾನ ವೈಪರೀತ್ಯದಿಂದಾಗಿ ಜೈಪುರಕ್ಕೆ ಬಂದಿಳಿದಿದೆ ಎಂದು ಜೆಟ್ ಏರ್ವೇಸ್ ನಿರ್ದೇಶಕ ಎಂ.ಪಿ.ಬನ್ಸಾಲ್ ಅವರೇ ಸ್ಪಷ್ಟಪಡಿಸಿದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ.
-
Shubman Gill: ಅರ್ಜುನ್ ತೆಂಡ್ಯೂಲ್ಕರ್ ಮದುವೆಗೆ ಬಾರದ ಶುಭ್ಮನ್ ಗಿಲ್: ಸಾರಾ ಜೊತೆಗೆ ಆಯ್ತಾ ಬ್ರೇಕ್ ಅಪ್? -ಹೀಗಿದೆ ಗಾಸಿಪ್ -
ರಿಚರ್ಡ್ ಕೆಟಲ್ಬರೋ ಔಟ್: ಟಿ20 ವಿಶ್ವಕಪ್ ಫೈನಲ್ಗೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸದ ಸುದ್ದಿ -
Weekly Horoscope March 9–15: ಮಾರ್ಚ್ ವಾರಭವಿಷ್ಯ – 12 ರಾಶಿಗಳ ಸುಖ-ದುಃಖ, ಹಣಕಾಸು ಮತ್ತು ಆರೋಗ್ಯ ಫಲ -
Ration card: ರಾಜ್ಯದಲ್ಲಿ ಪಡಿತರಚೀಟಿ ತಿದ್ದುಪಡಿಗೆ ಮತ್ತೆ ಅವಕಾಶ -
Vande Bharat Express: 20 ಬೋಗಿಗಳ 42ನೇ ವಂದೇ ಭಾರತ್ ರೈಲು ಸಂಚಾರ ಆರಂಭ, ಎಲ್ಲಿ? ವೇಳಾಪಟ್ಟಿ -
ಟಿ20 ವಿಶ್ವಕಪ್ 2026 ಫೈನಲ್ ಪಂದ್ಯ ಮಳೆಯಿಂದ ರದ್ದಾದ್ರೆ ಟ್ರೋಫಿ ಯಾರ ಮುಡಿಗೆ?; ಐಸಿಸಿ ನಿಯಮಗಳು ಹೀಗಿವೆ -
Gold Price: ಚಿನ್ನ ಬೆಲೆ ಭಾರಿ ಕುಸಿತ ಸಾಧ್ಯತೆ, ಆದರೆ ಇದೊಂದು ದೇಶದ ನಿರ್ಧಾರ ಮುಖ್ಯ -
Horoscope March 7: ಉದ್ಯೋಗದಲ್ಲಿ ಉತ್ತಮ ಬದಲಾವಣೆ, ದಾಂಪತ್ಯದಲ್ಲಿ ಸಿಹಿ ಅಲೆ, ದಿನ ಭವಿಷ್ಯ -
ಕನ್ನಡ ನಾಡಿನ ಪ್ರತಿಭೆಗಳ ಸಾಧನೆ, ಯುಪಿಎಸ್ಸಿ ಟಾಪರ್ಸ್ ಮಾಹಿತಿ ತಿಳಿಯಿರಿ | UPSC Toppers -
ಕರ್ನಾಟಕಕ್ಕೆ ಬಂದ್ರೆ ಅಮ್ಮನ ಮನೆಗೆ ಬಂದಂತೆ ಭಾಸವಾಗುತ್ತೆ: ಕನ್ನಡದಲ್ಲೇ ಭಾಷಣ ಮಾಡಿದ ನಟ ಜ್ಯೂನಿಯರ್ ಎನ್ಟಿಆರ್ -
Women's Day Wishes: ಹೆಣ್ಣು ಜಗದ ಕಣ್ಣು: ಮಹಿಳಾ ದಿನಕ್ಕೆ ನಿಮ್ಮ ಪ್ರೀತಿಪಾತ್ರರಿಗೆ ಶುಭ ಕೋರಲು ಇಲ್ಲಿವೆ ಸುಂದರ ಸಾಲುಗಳು -
MS Dhoni: ಕುಣಿದು ಕುಪ್ಪಳಿಸುತ್ತಿದ್ದ ಪತ್ನಿ ಸಾಕ್ಷಿ ಸಿಂಗ್ಗೆ ಸುಮ್ನೆ ಕೂತ್ಕೋ ಎಂದ ಎಂಎಸ್ ಧೋನಿ












Click it and Unblock the Notifications