2024ರಲ್ಲಿ ಬಿಜೆಪಿ ಸೋಲಿಸಲು ನೀವು ಮಾಡಬೇಕಿರುವುದು ಇದು: ಪ್ರತಿಪಕ್ಷಗಳಿಗೆ ಪ್ರಶಾಂತ್ ಕಿಶೋರ್ ಸಲಹೆ
ಹಿಂದುತ್ವ ಸಿದ್ಧಾಂತದ ವಿರುದ್ಧ ಹೋರಾಡಲು ಸಿದ್ಧಾಂತಗಳ ಒಕ್ಕೂಟ ಇರಬೇಕು. ಗಾಂಧಿವಾದಿಗಳು, ಅಂಬೇಡ್ಕರ್ ವಾದಿಗಳು, ಸಮಾಜವಾದಿಗಳು, ಕಮ್ಯುನಿಸ್ಟರು. ಎಲ್ಲರ ಸಿದ್ಧಾಂತವು ಬಹಳ ಮುಖ್ಯವಾಗಿದೆ.
ನವದೆಹಲಿ, ಮಾರ್ಚ್. 21: 2024ರ ರಾಷ್ಟ್ರೀಯ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಪ್ರತಿಪಕ್ಷಗಳ ಒಗ್ಗಟ್ಟು ಅಸ್ಥಿರ ಮತ್ತು ಸೈದ್ಧಾಂತಿಕವಾಗಿ ಭಿನ್ನವಾಗಿರುವುದರಿಂದ ಅದು ಎಂದಿಗೂ ಕೆಲಸ ಮಾಡುವುದಿಲ್ಲ ಎಂದು ಚುನಾವಣಾ ತಂತ್ರಗಾರ ಮತ್ತು ಜನ್ ಸೂರಜ್ ಅಧ್ಯಕ್ಷ ಪ್ರಶಾಂತ್ ಕಿಶೋರ್ ಭವಿಷ್ಯ ನುಡಿದಿದ್ದಾರೆ.
2024ರಲ್ಲಿ ನಡೆಯಲಿರುವ ಲೋಕ ಸಭಾ ಚುನಾವಣೆಗೆ ಪ್ರತಿಪಕ್ಷಗಳು ಈಗಿನಿಂದಲೇ ಸಜ್ಜಾಗುತ್ತಿವೆ. ಬಿಜೆಪಿಯನ್ನು ಸೋಲಿಸಲು ಪಣ ತೊಟ್ಟಿರುವ ಪ್ರತಿಕ್ಷಗಳಲ್ಲಿ ಬಿರುಕು ಕಂಡು ಬಂದಿದೆ. ಇಂತಹ ಸಮಯದಲ್ಲಿಯೇ ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಬಿಜೆಪಿಯನ್ನು ಸೋಲಿಸಬೇಕಿದ್ದರೇ ಏನು ಮಾಡಬೇಕು ಎಂದು ಸಲಹೆ ನೀಡಿದ್ದಾರೆ. ಕೇವಲ ಪಕ್ಷಗಳು ಅಥವಾ ನಾಯಕರನ್ನು ಒಟ್ಟಿಗೆ ಸೇರಿಸುವುದರಿಂದ ಚುನಾವಣೆಯಲ್ಲಿ ಬಿಜೆಪಿ ಸೋಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

"ನೀವು ಬಿಜೆಪಿಗೆ ಸವಾಲು ಹಾಕಬೇಕಾದರೆ, ನೀವು ಅದರ ಶಕ್ತಿಗಳನ್ನು ಅರ್ಥಮಾಡಿಕೊಳ್ಳಬೇಕು. ಹಿಂದುತ್ವ, ರಾಷ್ಟ್ರೀಯತೆ ಮತ್ತು ಸಾಮಾಜಿಕ ಕಲ್ಯಾಣ. ಇದು ಮೂರು ಹಂತಗಳ ಸ್ತಂಭವಾಗಿದೆ. ನೀವು ಈ ಎರಡು ಹಂತಗಳನ್ನು ಮುರಿಯಲು ಸಾಧ್ಯವಾಗದಿದ್ದರೆ, ನೀವು ಬಿಜೆಪಿಗೆ ಸವಾಲು ಹಾಕಲು ಸಾಧ್ಯವಿಲ್ಲ ಎಂದು ಎನ್‌ಡಿಟಿವಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಪ್ರಶಾಂತ್ ಕಿಶೋರ್ ಹೇಳಿದ್ದಾರೆ.
"ಹಿಂದುತ್ವ ಸಿದ್ಧಾಂತದ ವಿರುದ್ಧ ಹೋರಾಡಲು ಸಿದ್ಧಾಂತಗಳ ಒಕ್ಕೂಟ ಇರಬೇಕು. ಗಾಂಧಿವಾದಿಗಳು, ಅಂಬೇಡ್ಕರ್ವಾದಿಗಳು, ಸಮಾಜವಾದಿಗಳು, ಕಮ್ಯುನಿಸ್ಟರು. ಎಲ್ಲರ ಸಿದ್ಧಾಂತವು ಬಹಳ ಮುಖ್ಯವಾಗಿದೆ. ಆದರೆ ನೀವು ಸಿದ್ಧಾಂತದ ಆಧಾರದ ಮೇಲೆ ಕುರುಡು ನಂಬಿಕೆಯನ್ನು ಹೊಂದಲು ಸಾಧ್ಯವಿಲ್ಲ. ಮಾಧ್ಯಮಗಳಲ್ಲಿ ನೀವು ಪಕ್ಷಗಳು ಅಥವಾ ನಾಯಕರ ಒಟ್ಟುಗೂಡಿಸುವಿಕೆಯನ್ನು ಪ್ರತಿಪಕ್ಷಗಳ ಮೈತ್ರಿಯನ್ನು ನೋಡುತ್ತಿದ್ದೀರಿ. ಯಾರು ಯಾರೊಂದಿಗೆ ಊಟ ಮಾಡುತ್ತಾರೆ, ಯಾರನ್ನು ಚಹಾಕ್ಕೆ ಆಹ್ವಾನಿಸುತ್ತಾರೆ ಎಂಬುದು. ನಾನು ಅದನ್ನು ಸಿದ್ಧಾಂತದ ಮಾದರಿಯಲ್ಲಿ ನೋಡುತ್ತೇನೆ" ಎಂದಿದ್ದಾರೆ.

ವಿಪಕ್ಷಗಳ ನಡುವೆ ಸೈದ್ಧಾಂತಿಕ ಹೊಂದಾಣಿಕೆ ಆಗುವುದಿಲ್ಲ, ಹೊಂದಾಣಿಕೆಯಾಗುವವರೆಗೆ ಬಿಜೆಪಿಯನ್ನು ಸೋಲಿಸಲು ಯಾವುದೇ ಮಾರ್ಗವಿಲ್ಲ ಎಂದಿದ್ದಾರೆ. ಜೊತೆಗೆ ತಮ್ಮ ಸ್ವಂತ ಸಿದ್ಧಾಂತವು "ಮಹಾತ್ಮ ಗಾಂಧಿಯವರ ಸಿದ್ಧಾಂತ" ಮತ್ತು ಬಿಹಾರದ "ಜನ್ ಸೂರಾಜ್ ಯಾತ್ರೆ" "ಗಾಂಧಿಯವರ ಕಾಂಗ್ರೆಸ್ಸಿನ ಸಿದ್ಧಾಂತವನ್ನು ಪುನರುಜ್ಜೀವನಗೊಳಿಸುವ ಪ್ರಯತ್ನವಾಗಿದೆ ಎಂದು ಹೇಳಿದ್ದಾರೆ.
2014 ರಿಂದ ಚುನಾವಣೆಗಳಲ್ಲಿ ಜಯ ಸಾಧಿಸುವುದನ್ನು ಹೇಳಿಕೊಡುವುದನ್ನು ಕಲಿಸುತ್ತಿರುವ ಚುನಾವಣಾ ತಂತ್ರಗಾರ, ಬಿಹಾರದಲ್ಲಿ "ಜನ್ ಸೂರಾಜ್ ಯಾತ್ರೆ" ಯಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡುತ್ತಿದ್ದು, ರಾಜ್ಯವನ್ನು ಅರ್ಥಮಾಡಿಕೊಳ್ಳುವ ಮತ್ತು ಹೊಸ ರಾಜಕೀಯ ವ್ಯವಸ್ಥೆಯನ್ನು ರಚಿಸುವ ಪ್ರಯತ್ನ ನಡೆಸುತ್ತಿದ್ದಾರೆ.
"ಇದು ಬಿಹಾರದ ಸುತ್ತಲಿನ ಹಣೆಬರಹವನ್ನು ಬದಲಾಯಿಸುವುದು. ಬಿಹಾರವು ಜಾತಿ - ರಾಜಕೀಯ ಮತ್ತು ಅನೇಕ ತಪ್ಪು ಕಾರಣಗಳಿಗೆ ಹೆಸರುವಾಸಿಯಾಗಿದೆ. ಇದು ಕೇವಲ ನಡಿಗೆ ಮಾತ್ರವಲ್ಲ. ಆರು ತಿಂಗಳ ಭಾರತ್ ಜೋಡೋ ಯಾತ್ರೆಯಲ್ಲಿ ಸಾಕಷ್ಟು ಪ್ರಶಂಸೆ ಮತ್ತು ಟೀಕೆಗಳು ಬಂದವು. ಆರು ತಿಂಗಳ ನಡಿಗೆಯ ನಂತರ ನೀವು ಸ್ವಲ್ಪ ವ್ಯತ್ಯಾಸವನ್ನು ನೋಡಬೇಕಲ್ಲವೇ..? ಆ ಯಾತ್ರೆಯು ಕಾಂಗ್ರೆಸ್ ಪಕ್ಷದ ಚುನಾವಣಾ ಭವಿಷ್ಯವನ್ನು ಸುಧಾರಿಸಲು ನಡೆಸಲಾಗಿದೆ" ಎಂದಿದ್ದಾರೆ.
ನಾನು ಇಲ್ಲಿಯವರೆಗೆ ಕೇವಲ ನಾಲ್ಕು ಜಿಲ್ಲೆಗಳನ್ನು ಮಾತ್ರ ಕವರ್ ಮಾಡಲು ಸಾಧ್ಯವಾಗಿದೆ. ನನಗೆ ಯಾತ್ರೆಯು ಧ್ಯೇಯವಲ್ಲ. ಆದರೆ ಬಿಹಾರದ ಪ್ರತಿ ಪ್ರದೇಶವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ ಎಂದಿದ್ದಾರೆ. ಕಾಂಗ್ರೆಸ್ ಅನ್ನು ಪುನರುತ್ಥಾನಗೊಳಿಸುವ ಯೋಜನೆಯ ಬಗ್ಗೆ ಹೇಳಿದ ಅವರು, "ನನ್ನ ಗುರಿ ಕಾಂಗ್ರೆಸ್‌ನ ಪುನರ್ಜನ್ಮವಾಗಿತ್ತು. ಅವರ ಗುರಿ ಚುನಾವಣೆಯಲ್ಲಿ ಗೆಲ್ಲುವುದಾಗಿತ್ತು. ಅವರು ಬಯಸಿದ ರೀತಿಯಲ್ಲಿ ನನ್ನ ಆಲೋಚನೆಗಳನ್ನು ಕಾರ್ಯಗತಗೊಳಿಸಲು ನಾವು ಒಪ್ಪಲಿಲ್ಲ" ಎಂದು ಪ್ರಶಾಂತ್ ಕಿಶೋರ್ ಹೇಳಿದ್ದಾರೆ.












Click it and Unblock the Notifications